ಭಾರತ VS ನ್ಯೂಜಿಲೆಂಡ್: 2ನೇ ಟೆಸ್ಟ್ನಲ್ಲೂ ವಿರಾಟ್ ಪಡೆಗೆ ಮೂವರು ವಿಲನ್ಸ್!
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ, ಕಿವೀಸ್ ಬೌಲರ್ಗಳ ಉರಿ ದಾಳಿಗೆ ಕೊಹ್ಲಿ ಸೈನ್ಯ ಪತರಗುಟ್ಟಿ ಹೋಗಿದ್ದು ನಿಮಗೆ ಗೊತ್ತೇ ಇದೆ. ವಿಶ್ವದ ಬಲಾಡ್ಯ ತಂಡಗಳ ಬೌಲರ್ಗಳನ್ನ ಹುಟ್ಟಡಗಿಸಿದ್ದ ನಂಬರ್ ವನ್ ತಂಡದ ಬ್ಯಾಟ್ಸ್ಮನ್ಗಳು, ಕೇನ್ ಬೌಲರ್ಗಳ ಬೆಂಕಿಯುಂಡೆಯಲ್ಲಿ ಬೆಂದು ಬೆಂಡಾಗಿ ಹೋದ್ರು. ಕೇವಲ ಒಂದು ಪಂದ್ಯದಲ್ಲಿ ನೀಡಿದ ಕಳಪೆ ಪ್ರದರ್ಶನದಿಂದ ನಮ್ಮ ಸಾಮರ್ಥ್ಯವನ್ನ ಯಾರೂ ಪ್ರಶ್ನಿಸೋ ಹಾಗಿಲ್ಲ ಅಂತಾ ಕ್ಯಾಪ್ಟನ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ ನಿಜ. ಆದ್ರೆ ಎಚ್ಚರಿಕೆ ನೀಡಿದ ಮಾತ್ರಕ್ಕೆ ಕ್ರೈಸ್ಟ್ಚರ್ಚ್ನಲ್ಲಿ ನಡೆಯೋ […]
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ, ಕಿವೀಸ್ ಬೌಲರ್ಗಳ ಉರಿ ದಾಳಿಗೆ ಕೊಹ್ಲಿ ಸೈನ್ಯ ಪತರಗುಟ್ಟಿ ಹೋಗಿದ್ದು ನಿಮಗೆ ಗೊತ್ತೇ ಇದೆ. ವಿಶ್ವದ ಬಲಾಡ್ಯ ತಂಡಗಳ ಬೌಲರ್ಗಳನ್ನ ಹುಟ್ಟಡಗಿಸಿದ್ದ ನಂಬರ್ ವನ್ ತಂಡದ ಬ್ಯಾಟ್ಸ್ಮನ್ಗಳು, ಕೇನ್ ಬೌಲರ್ಗಳ ಬೆಂಕಿಯುಂಡೆಯಲ್ಲಿ ಬೆಂದು ಬೆಂಡಾಗಿ ಹೋದ್ರು.
ಕೇವಲ ಒಂದು ಪಂದ್ಯದಲ್ಲಿ ನೀಡಿದ ಕಳಪೆ ಪ್ರದರ್ಶನದಿಂದ ನಮ್ಮ ಸಾಮರ್ಥ್ಯವನ್ನ ಯಾರೂ ಪ್ರಶ್ನಿಸೋ ಹಾಗಿಲ್ಲ ಅಂತಾ ಕ್ಯಾಪ್ಟನ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ ನಿಜ. ಆದ್ರೆ ಎಚ್ಚರಿಕೆ ನೀಡಿದ ಮಾತ್ರಕ್ಕೆ ಕ್ರೈಸ್ಟ್ಚರ್ಚ್ನಲ್ಲಿ ನಡೆಯೋ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡೋದು ಸುಲಭದ ಮಾತಲ್ಲ.
ಯಾಕಂದ್ರೆ ಕ್ರೈಸ್ಟ್ ಚರ್ಚ್ನಲ್ಲಿ ಭಾರತದ ಬ್ಯಾಟಿಂಗ್ ಬೆನ್ನೆಲುಬನ್ನ ಆ ತ್ರಿವಳಿ ವೇಗಿಗಳು ಸುಲಭವಾಗಿ ಪುಡಿ ಪುಡಿ ಮಾಡೋ ಸಾಮರ್ಥ್ಯ ಹೊಂದಿದ್ದಾರೆ. ಬನ್ನಿ ಹಾಗಾದ್ರೆ ಕ್ರೈಸ್ಟ್ಚರ್ಚ್ನಲ್ಲಿ ನಡೆಯೋ 2ನೇ ಟೆಸ್ಟ್ ಪಂದ್ಯದಲ್ಲಿ ಆ ಮೂವರು ವೇಗಿಗಳು, ಕೊಹ್ಲಿ ಸೈನ್ಯಕ್ಕೆ ಹೇಗೆ ವಿಲನ್ ಆಗಿ ಕಾಡ್ತಾರೆ ಅನ್ನೋದನ್ನ ಒಂದೊಂದಾಗೇ ತೋರಿಸ್ತೀವಿ.
ಮೊದಲನೇ ವಿಲನ್ ಟ್ರೆಂಟ್ ಬೌಲ್ಟ್: ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲೇ ಐದು ವಿಕೆಟ್ ಪಡೆದು ಕೊಹ್ಲಿ ಸೈನ್ಯವನ್ನ ಕಾಡಿರೋ ಟ್ರೆಂಟ್ ಬೌಲ್ಟ್ನನ್ನ, ಕ್ರೈಸ್ಟ್ ಚರ್ಚ್ನಲ್ಲಿ ಹಿಡಿಯೋಕಾಗಲ್ಲ. ಯಾಕಂದ್ರೆ ನ್ಯೂಜಿಲೆಂಡ್ ಕ್ರೈಸ್ಟ್ಚರ್ಚ್ನಲ್ಲಿ ಗೆದ್ದಿರೋ ಎಲ್ಲಾ ಪಂದ್ಯಗಳಲ್ಲೂ ಟ್ರೆಂಟ್ ಬೌಲ್ಟ್ ಅದ್ಭುತ ಸ್ಪೆಲ್ನಿಂದಲೇ ಗೆಲುವಿನ ರಣಕೇಕೆ ಹಾಕಿದೆ. ಕ್ರೈಸ್ಟ್ಚರ್ಚ್ನಲ್ಲಿ ಕೇವಲ 6 ಟೆಸ್ಟ್ ಪಂದ್ಯಗಳನ್ನಾಡಿರುವ ಟ್ರೆಂಟ್ ಬೌಲ್ಟ್, ಬರೋಬ್ಬರಿ 37 ವಿಕೆಟ್ ಪಡೆದು ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದಾನೆ.
ಎರಡನೇ ವಿಲನ್ ಟಿಮ್ ಸೌಥಿ: ಕೊಹ್ಲಿ ಪಡೆಗೆ ಬ್ಯಾಡ್ ಲಕ್ ಹೇಗಿದೆ ಅಂದ್ರೆ ಕಳೆದೊಂದು ವರ್ಷದಿಂದ ಕಳಪೆ ಫಾರ್ಮ್ನಲ್ಲಿದ್ದ ಟಿಮ್ ಸೌಥಿ, ಭಾರತದ ವಿರುದ್ಧವೇ ಫಾರ್ಮ್ ಕಂಡುಕೊಂಡಿದ್ದಾನೆ. ಟ್ರೆಂಟ್ ಬೌಲ್ಟ್ಗಿಂತ ಪರಾಕ್ರಮ ತೋರಿಸಿದ ಟಿಮ್ ಸೌಥಿ ಮೊದಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಪಡೆದು ನಡುಕ ಹುಟ್ಟಿಸಿದ್ದಾನೆ. ಇನ್ನು ಕ್ರೈಸ್ಟ್ ಚರ್ಚ್ನಲ್ಲೂ ಸೌಥಿ ಎದುರಾಳಿಗಳ ಎದೆ ನಡುಗಿಸೋ ಸಾಧನೆ ಮಾಡಿದ್ದಾನೆ. ಬೌಲ್ಟ್ ಬಳಿಕ ಕ್ರೈಸ್ಟ್ಚರ್ಚ್ನಲ್ಲಿ ಅದ್ಭುತ ಸ್ಪೆಲ್ ಮಾಡಿರುವ ಟಿಮ್ ಸೌಥಿ ಆಡಿರೋ 6 ಟೆಸ್ಟ್ ಪಂದ್ಯಗಳಲ್ಲಿ 32 ವಿಕೆಟ್ ಪಡೆದು ಮಿಂಚಿದ್ದಾನೆ.
ಮೂರನೇ ವಿಲನ್ ನೀಲ್ ವ್ಯಾಗ್ನರ್: 2ನೇ ಟೆಸ್ಟ್ ಪಂದ್ಯಕ್ಕೆ ಕೇನ್ ಬತ್ತಳಿಕೆಗೆ ಸೇರ್ಪಡೆಯಾದ ಅಸ್ತ್ರ ಈ ನೀಲ್ ವ್ಯಾಗ್ನರ್.. ಟ್ರೆಂಟ್ ಬೌಲ್ಟ್ನಂತೆ ಕ್ಯಾಪ್ಟನ್ ಕೊಹ್ಲಿಗೆ ವಿಲನ್ ಆಗಿರೋ ವ್ಯಾಗ್ನರ್, ಕ್ರೈಸ್ಟ್ಚರ್ಚ್ ಮೈದಾನದಲ್ಲಿ ಮೆರದಾಡಿರೋ ಸಾಧಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾನೆ. ಕ್ರೈಸ್ಟ್ಚರ್ಚ್ನಲ್ಲಿ ಬೌಲ್ಟ್ ಮತ್ತು ಸೌಥಿಯಷ್ಟೇ ಟೆಸ್ಟ್ ಪಂದ್ಯಗಳನ್ನಾಡಿರುವ ನೀಲ್ ವ್ಯಾಗ್ನರ್ 23 ವಿಕೆಟ್ ಕಬಳಿಸಿದ್ದಾನೆ.
ನೋಡಿದ್ರಲ್ಲ.. ಕ್ರೈಸ್ಟ್ಚರ್ಚ್ ಮೈದಾನದಲ್ಲಿ ಈ ತ್ರಿವಳಿ ವೇಗಿಗಳ ಆರ್ಭಟ ಹೇಗಿದೆ ಅಂತ. ಅದ್ರಲ್ಲೂ ಕಿವೀಸ್ ವೇಗದ ವಿಭಾಗಕ್ಕೆ ಈಗ ನೀಲ್ ವ್ಯಾಗ್ನರ್ ಕೂಡ ಎಂಟ್ರಿ ಕೊಟ್ಟಿರೋದು, ಮತ್ತಷ್ಟು ಸ್ಟ್ರಾಂಗ್ ಆಗುವಂತೆ ಮಾಡಿದೆ.
ಇನ್ನು ಕ್ರೈಸ್ಟ್ಚರ್ಚ್ನಲ್ಲಿ ನ್ಯೂಜಿಲೆಂಡ್ ತಂಡದ ಸಾಧನೆಯನ್ನ ನೋಡೋದಾದ್ರೆ, ಆಡಿರೋ ಆರು ಟೆಸ್ಟ್ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಮುಗ್ಗರಿಸಿದೆ. ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ ಈ ಮೂವರು ವೇಗಿಗಳ ನೆರವಿನಿಂದ ಕೇನ್ ಪಡೆ, 2016ರಿಂದ ಈ ಮೈದಾನದಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಹೀಗಾಗಿ ಕ್ಯಾಪ್ಟನ್ ಕೊಹ್ಲಿ ನಂಬರ್ ವನ್ ಪಟ್ಟದ ಘನತೆಯನ್ನ ಕಿವೀಸ್ ನೆಲದಲ್ಲಿ ಕಾಪಾಡಿಕೊಳ್ಳಬೇಕು ಅಂದ್ರೆ, ನಿರೀಕ್ಷೆಗೂ ಮೀರಿದ ರಣತಂತ್ರವನ್ನ ಹೆಣೆಯಬೇಕು.
Published On - 9:43 am, Wed, 26 February 20