ಬ್ಯಾಟು ಬಿಟ್ಟು, ಸೌಟು ಹಿಡೀತಾರಂತೆ ಕೊಹ್ಲಿ! ಆದರೆ ಅವರಿಗೆ ಕಷ್ಟ ಯಾವುದು ಗೊತ್ತಾ!?

sadhu srinath

sadhu srinath |

Updated on: Nov 12, 2019 | 5:45 PM

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಿಂದ ವಿಶ್ರಾಂತಿ ಪಡೆದಿರೋ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಧ್ಯ ಭೂತಾನ್ ಪ್ರವಾಸದಲ್ಲಿದ್ದು ಪತ್ನಿ ಅನುಷ್ಕಾ ಶರ್ಮಾ ಜೊತೆ ಅಲ್ಲಿನ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ. ಪರ್ವತ ಶಿಖರಗಳಿಂದ ಕೂಡಿರುವ ನೈಸರ್ಗಿಕ ಸುಂದರ ಕಣಿವೆ ಭೂತಾನ್​ನಲ್ಲೇ ಕೊಹ್ಲಿ ತಮ್ಮ 31 ವರ್ಷದ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಿಕೊಂಡಿದ್ರು.. ಹಾಗೇ ಕೊಹ್ಲಿ ತಮ್ಮ ಟ್ವೀಟರ್ ಅಕೌಂಟ್​ನಲ್ಲಿ ಅಲ್ಲಿನ ಪ್ರಕೃತಿಯ ವರ್ಣನೆಯನ್ನ ಮಾಡಿ, ಜಾಲಿ ಟ್ರಿಪ್​ನ ಅನುಭವವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಕ್ರಿಕೆಟ್​ […]

ಬ್ಯಾಟು ಬಿಟ್ಟು, ಸೌಟು ಹಿಡೀತಾರಂತೆ ಕೊಹ್ಲಿ! ಆದರೆ ಅವರಿಗೆ ಕಷ್ಟ ಯಾವುದು ಗೊತ್ತಾ!?

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಿಂದ ವಿಶ್ರಾಂತಿ ಪಡೆದಿರೋ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಧ್ಯ ಭೂತಾನ್ ಪ್ರವಾಸದಲ್ಲಿದ್ದು ಪತ್ನಿ ಅನುಷ್ಕಾ ಶರ್ಮಾ ಜೊತೆ ಅಲ್ಲಿನ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ.

ಪರ್ವತ ಶಿಖರಗಳಿಂದ ಕೂಡಿರುವ ನೈಸರ್ಗಿಕ ಸುಂದರ ಕಣಿವೆ ಭೂತಾನ್​ನಲ್ಲೇ ಕೊಹ್ಲಿ ತಮ್ಮ 31 ವರ್ಷದ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಿಕೊಂಡಿದ್ರು.. ಹಾಗೇ ಕೊಹ್ಲಿ ತಮ್ಮ ಟ್ವೀಟರ್ ಅಕೌಂಟ್​ನಲ್ಲಿ ಅಲ್ಲಿನ ಪ್ರಕೃತಿಯ ವರ್ಣನೆಯನ್ನ ಮಾಡಿ, ಜಾಲಿ ಟ್ರಿಪ್​ನ ಅನುಭವವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಕ್ರಿಕೆಟ್​ ವಿದಾಯದ ನಂತರದ ಕೊಹ್ಲಿ ಸೀದಾ ಅಡುಗೆ ಮನೆಗೆ: ನಿಜ.. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸದ್ಯ ವಿದಾಯದ ಪ್ಲಾನ್ ಅಂತೂ ಇಲ್ಲ. ಆದ್ರೆ ಕ್ರಿಕೆಟ್​ನಿಂದ ದೂರವಾದ ಬಳಿಕ ಕೊಹ್ಲಿ ತಮ್ಮ ಯೋಜನೆ ಏನು ಅನ್ನೋದನ್ನ ಈಗಲೇ ಬಹಿರಂಗ ಪಡಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟಿಟ್ವೆಂಟಿ ಸರಣಿಯಿಂದ ವಿಶ್ರಾಂತಿ ಪಡೆದಿರೋ ಕೊಹ್ಲಿ, ಟೆಸ್ಟ್ ಸರಣಿಗೆ ನಾಯಕನಾಗಿ ತಂಡವನ್ನ ಸೇರಿಕೊಳ್ಳಲಿದ್ದಾರೆ. ಈ ವಿಶ್ರಾಂತಿ ದಿನದಲ್ಲಿ, ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ನಾಯಕ ಕೊಹ್ಲಿ, ವಿದಾಯ ನಂತರದ ತಮ್ಮ ಪ್ಲಾನ್ ಏನು ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ. ಅದೇ ಕೊಹ್ಲಿ ಅಡುಗೆ ಮಾಡೋದನ್ನ ಕಲಿಯೋದು.. ಹೌದು.. ಕೊಹ್ಲಿಗೆ ಕುಕ್ಕಿಂಗ್ ಅಂದ್ರೆ ಪಂಚಪ್ರಾಣ. ಪಂಜಾಬಿ ಕುಟುಂಬದಲ್ಲಿ ಜನಿಸಿದ ವಿರಾಟ್ ಕೊಹ್ಲಿ, ತಾನು ಸಿಕ್ಕಾಪಟ್ಟೆ ಆಹಾರ ಪ್ರಿಯ ಅಂತಾ ಹೇಳಿಕೊಂಡಿದ್ದಾರೆ.

ವಿಭಿನ್ನ ಬಗೆಯ ಆಹಾರಗಳನ್ನ ಸೇವಿಸೋಕೆ ಇಷ್ಟಪಡುವ ಕೊಹ್ಲಿ ಬೇರೆ ಬೇರೆ ಸ್ಥಳಗಳಿಗೂ ಭೇಟಿ ನೀಡಿ ಅಲ್ಲಿನ ನಾನಾ ಬಗೆಯ ಆಹಾರಗಳನ್ನ ಸೇವಿಸಿದ್ದಾರೆ.. ಆದ್ರೆ ಕೆಲ ವರ್ಷಗಳಿಂದ ಕೊಹ್ಲಿ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಡೈಯಟ್ ಮಾಡುತ್ತಿದ್ದಾರೆ. ಹಾರ್ಡ್ ಕೋರ್ ವರ್ಕೌಟ್ ಮಾಡುತ್ತಿರುವ ನಾಯಕ ಕೊಹ್ಲಿ, ವಿಶ್ವದಲ್ಲಿ ಬೆಸ್ಟ್ ಫಿಟ್ನೆಸ್ ಸ್ಪೋರ್ಟ್ಸ್​ಮೆನ್ ಕೂಡ ಹೌದು. ನಿಯಮಿತ ಭೋಜನ ಕ್ರಮ ಅನುಸರಿಸುವ ಕೊಹ್ಲಿ ಡಯಟ್ ಅನ್ನ ಅದೆಷ್ಟೋ ಮಂದಿ ಫಾಲೋ ಮಾಡ್ತಿದ್ದಾರೆ. ಇದೇ ಫಿಟ್ಟೆಸ್ಟ್ ಕ್ರಿಕೆಟರ್ ವಿರಾಟ್ ಕೊಹ್ಲಿ ತಾವು, ಕ್ರಿಕೆಟ್​ಗೆ ಗುಡ್ ಬೈ ಹೇಳಿದ ಬಳಿಕ ಕುಕ್ಕಿಂಗ್ ಕಲಿಯುವ ಆಸಕ್ತಿ ಇದೆ ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ.

ಬ್ಯಾಟು ಹಿಡಿಯೋದೆ ಸಲೀಸು, ಸೌಟು ನೆಟ್ಟಗೆ ಹಿಡಿಯೋದನ್ನ ಇನ್ನೂ ಕಲೀಬೇಕು!

ನನಗೆ ಅಡುಗೆ ಮಾಡಲು ಬರೋದಿಲ್ಲ. ಆದ್ರೆ ನಾನು ಆಹಾರವನ್ನ ರುಚಿಯಿಂದ ಗುರುತಿಸುತ್ತೇನೆ. ರುಚಿಕರ ಆಹಾರವನ್ನ ಹೇಗೆ ತಯಾರಿಸಬೇಕೆಂದು ಅರ್ಥಮಾಡಿಕೊಳ್ಳುತ್ತೇನೆ. ಆದ್ರೆ ಕಲಿಯುವ ಆಸಕ್ತಿ ತುಂಬಾ ಇದೆ. ನೋಡಿ.. ಕ್ರಿಕೆಟ್ ಜೀವನದ ಬಳಿಕ ನನಗೆ ಈ ಬಗ್ಗೆ ಕಲಿಯೋಕೆ ತುಂಬಾ ಸಮಯವಿದೆ. ನನಗೆ ಅನ್ನಿಸಿದ ರೀತಿಯಲ್ಲಿ ಅಡುಗೆ ಮಾಡುವ ಬಗ್ಗೆ ನನಗೆ ತುಂಬಾ ಆಸಕ್ತಿ ಇದೆ. ಆದರೂ ಹೇಳುವೆ ಬ್ಯಾಟು ಹಿಡಿಯೋದೆ ಸಲೀಸು, ಸೌಟು ನೆಟ್ಟಗೆ ಹಿಡಿಯೋದನ್ನ ಇನ್ನೂ ಕಲೀಬೇಕು ಎಂದು ಸಿಎನ್​ ಎಸ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ವಿರಾಟ್ ನಗಾಡಿದ್ದಾರೆ​.

ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಬಳಿಕ ಅಡುಗೆ ಕಲಿಯೋ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ನಾಯಕ ಕೊಹ್ಲಿ, ಕಿಚನ್ ಕೆಲಸದಲ್ಲೂ ಪರ್ಫೆಕ್ಟ್ ಆಗ್ತೀನಿ ಅಂತಿದ್ದಾರೆ. ನಾಯಕ ಕೊಹ್ಲಿ ನಿರ್ಧಾರ ಕೇಳಿ ಸಂತಸಗೊಂಡಿರುವ ಅವರ ಅಭಿಮಾನಿಗಳು, ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. Source: CNN (ರಾಜೇಶ್, ಸ್ಪೋಟ್ಸ್ ಬ್ಯೂರೋ- ಟಿವಿ 9)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada