
ಪ್ಯಾರಿಸ್ ಒಲಿಂಪಿಕ್ಸ್ಗಾಗಿ ದಿನಗಣನೆ ಶುರುವಾಗಿದೆ. ಜುಲೈ 26 ರಿಂದ ಆರಂಭವಾಗಲಿರುವ 33ನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 206 ದೇಶಗಳು ಪಾಲ್ಗೊಳ್ಳಲಿವೆ. ಈ ಎಲ್ಲಾ ದೇಶಗಳು ಒಲಿಂಪಿಕ್ಸ್ ಚಿಹ್ನೆಯ ಅಡಿಯಲ್ಲಿ ಕಣಕ್ಕಿಳಿಯಲಿರುವುದು ವಿಶೇಷ. ಅಂದರೆ ಒಲಿಂಪಿಕ್ಸ್ ಧ್ಯೇಯವಾಕ್ಯಗಳೊಂದಿಗೆ ಒಪ್ಪಿತವಾಗಿರುವ ದೇಶಗಳಿಗೆ ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಹೀಗಾಗಿಯೇ ಪ್ರತಿ ಕ್ರೀಡಾಪಟುಗಳ ವಸ್ತ್ರದ ಮೇಲೆ ಒಲಿಂಪಿಕ್ ಚಿಹ್ನೆಯನ್ನು ಬಳಸಲಾಗುತ್ತದೆ. ಹೀಗೆ ಬಳಸಲಾಗುವ ಐದು ಬಣ್ಣದ ರಿಂಗ್ ಚಿಹ್ನೆ ವಿಶೇಷ ಅರ್ಥವಿದೆ ಎಂಬುದೇ ವಿಶೇಷ.
ಪ್ರತಿ ಒಲಿಂಪಿಕ್ಸ್ ವೇಳೆಯು ಕಾಣಿಸಿಕೊಳ್ಳುವ ಒಲಿಂಪಿಕ್ ಧ್ವಜದಲ್ಲಿ ಐದು ವಿಭಿನ್ನ ಬಣ್ಣಗಳಿಂದ ಕೂಡಿದ ರಿಂಗ್ಗಳನ್ನು ನೀವು ನೋಡಿರುತ್ತೀರಿ. ಇಲ್ಲಿ (ಎಡದಿಂದ ಬಲಕ್ಕೆ)- ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು ಬಣ್ಣಗಳನ್ನು ಬಳಸಲಾಗಿದೆ. ಈ ಐದು ಬಣ್ಣಗಳು ಮತ್ತು ರಿಂಗ್ಗಳು 5 ಜನವಸತಿಯ ಖಂಡಗಳನ್ನು ಪ್ರತಿನಿಧಿಸುತ್ತದೆ. ಆ ಖಂಡಗಳೆಂದರೆ…
ರಿಂಗ್ಗೆ ನೀಡಲಾದ ಬಣ್ಣಗಳ ಅರ್ಥವೇನು?
ಒಲಿಂಪಿಕ್ಸ್ ಧ್ವಜದ ರಿಂಗ್ಗೆ ಐದು ಬಣ್ಣಗಳನ್ನು ನೀಡಲಾಗಿದೆ. ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ಧ್ವಜಗಳಿಗೆ ಸಾಮಾನ್ಯವಾಗಿರುವ ಬಣ್ಣಗಳನ್ನು (ನೀಲಿ, ಕಪ್ಪು, ಕೆಂಪು, ಹಳದಿ ಮತ್ತು ಹಸಿರು) ಪ್ರತಿನಿಧಿಸಲು ಈ ಬಣ್ಣಗಳನ್ನು ಬಳಸಲಾಗಿದೆ. ಇದಾಗ್ಯೂ ನಿರ್ದಿಷ್ಟ ರಾಷ್ಟ್ರ ಅಥವಾ ಸಮುದಾಯವನ್ನು ಈ ಬಣ್ಣಗಳು ಪ್ರತಿನಿಧಿಸುವುದಿಲ್ಲ. ಬದಲಾಗಿ ಜನವಸತಿಯಿರುವ ಇದು ಐದು ಖಂಡಗಳ ಒಕ್ಕೂಟ ಮತ್ತು ಒಲಿಂಪಿಕ್ ಕ್ರೀಡಾಕೂಟದಲ್ಲಿ ಪ್ರಪಂಚದಾದ್ಯಂತದ ಕ್ರೀಡಾಪಟುಗಳನ್ನು ಈ ಬಣ್ಣ ಮತ್ತು ಚಿಹ್ನೆ ಪ್ರತಿನಿಧಿಸುತ್ತದೆ.
ಒಲಂಪಿಕ್ನ ಮೂಲ ಧ್ಯೇಯವಾಕ್ಯವೆಂದರೆ ಹೆಂಡಿಯಾಟ್ರಿಸ್ ಸಿಟಿಯಸ್, ಅಲ್ಟಿಯಸ್, ಫೋರ್ಟಿಯಸ್. ಅಂದರೆ ಲ್ಯಾಟಿನ್ ಭಾಷೆಯಲ್ಲಿ “ವೇಗ, ಉನ್ನತ, ಶಕ್ತಿಶಾಲಿ”. ಈ ಧ್ಯೇಯವಾಕ್ಯವನ್ನು 1924 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪರಿಚಯಿಸಲಾಯಿತು.
ಇದಾದ ಬಳಿಕ 2021 ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಧ್ಯೇಯವಾಕ್ಯವಾಗಿ ಜೊತೆಯಾಗಿ ಯನ್ನು ಸೇರಿಸಲಾಯಿತು. ಅದರಂತೆ ಇದೀಗ ಶತಮಾನದ ಬಳಿಕ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ವೇಗ, ಉನ್ನತ, ಶಕ್ತಿಶಾಲಿ ಮತ್ತು ಜೊತೆಯಾಗಿ ಧ್ಯೇಯ ವಾಕ್ಯದಲ್ಲಿ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: Paris Olympics 2024: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರತಿಕ್ರೀಡೆ: 3 ಲಕ್ಷ ಕಾಂಡೋಮ್ ವಿತರಣೆ
ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಸಮ್ಮರ್ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 29 ರಿಂದ ಶುರುವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
Published On - 12:01 pm, Wed, 17 July 24