ಇಷ್ಟಕ್ಕೂ ಟೀಂ ಇಂಡಿಯಾ ಈ ಬಾರಿ ವಿಶ್ವ ಟೆಸ್ಟ್​ ಚಾಂಪಿಯನ್ ಆಗುತ್ತದಾ? ಅಥವಾ ಚೋಕ್​ ಆಗುತ್ತದಾ?

|

Updated on: May 18, 2021 | 9:50 AM

ICC World Test Championship Final: ಇದರ ಹೊರತಾಗಿ ಭಾರತ ಕ್ರಿಕೆಟ್​ ತಂಡದ ಸಾಧನೆ ಇತ್ತೀಚಿನ ವರ್ಷಗಳಲ್ಲಿ ಅತ್ಯದ್ಭುತವಾಗಿಯೇ ಇದೆ. ಆದರೆ ಈ ಚೋಕರ್ಸ್​ ಪಟ್ಟವೂ ಬೆನ್ನುಹತ್ತಿದೆ. ಒಂದೊಂದು ಪಂದ್ಯವೂ ಭಿನ್ನವಾಗಿಯೇ ಇರುತ್ತದೆ. ಇದಂ ಇತ್ತಂ ಎಂದು ಸಾರಾಸಗಟಾಗಿ ಹೇಳಲು ಬರುವುದಿಲ್ಲ. ಮಹಾಮಹಿಮ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಅಂದಿನ ದಿನಕ್ಕೆ ತಕ್ಕಂತೆ ಆಡಬೇಕಿದೆ. ತನ್ಮೂಲಕ ಚೋಕರ್ಸ್​ ಪಟ್ಟ ಕಿತ್ತೆಸೆದು ವಿಜಯ ಪತಾಕೆ ಹಾರಿಸಬೇಕಿದೆ.

ಇಷ್ಟಕ್ಕೂ ಟೀಂ ಇಂಡಿಯಾ ಈ ಬಾರಿ ವಿಶ್ವ ಟೆಸ್ಟ್​ ಚಾಂಪಿಯನ್ ಆಗುತ್ತದಾ? ಅಥವಾ ಚೋಕ್​ ಆಗುತ್ತದಾ?
ವಿರಾಟ್ ಕೊಹ್ಲಿ
Follow us on

ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ವೇದಿಕೆ ಸಜ್ಜಾಗಿದೆ. 38 ವರ್ಷಗಳ ಹಿಂದೆ ಇದೇ ಜೂನ್​ ತಿಂಗಳ ಅಂತ್ಯದಲ್ಲಿ ಅಂದಿನ ಭಾರತ ತಂಡ ಸೀಮಿತ ಓವರುಗಳ ವರ್ಲ್ಡ್​ ಕಪ್ (1983 Prudential World Cup) ಗೆದ್ದು ಬೀಗಿತ್ತು. ಅಂದಿನಿಂದ ಭಾರತದಲ್ಲಿ ಕ್ರಿಕೆಟ್​ ಎಂಬುದು ಮನೆಮಾತಾಗಿತ್ತು. ಅದಾದ ಮೇಲೆ ಭಾರತ ತಂಡದ ಜಯಾಪಜಯಗಳ ಏರುಪೇರು ನಡೆದೇ ಇದೆ. ಆದರೆ ಈ ಬಾರಿಯೂ ಮುಂದಿನ ಜೂನ್ ಅಂತ್ಯದಲ್ಲಿ (ICC World Test Championship) ಮತ್ತೊಮ್ಮೆ ಅಂತಹ ಪ್ರದರ್ಶನ ನೀಡಿ​, ಕ್ರಿಕೆಟ್​ ಜಗತ್ತಿನಲ್ಲಿ ಮೇರುಶಿಖರ ತಲುಪಲು ಸಿದ್ಧತೆ ನಡೆಸಿದೆ. ಈ ಕ್ಷಣಕ್ಕೆ ಬಹುತೇಕ ಕ್ರಿಕೆಟ್​ ಪಂಡಿತರ ಲೆಕ್ಕಾಚಾರವೆಲ್ಲ ನ್ಯೂಜಿಲ್ಯಾಂಡ್​ ತಂಡದ ವಿರುದ್ಧ ಭಾರತದ ಸುಲಭ ಗೆಲುವಿನ ಬಗ್ಗೆಯೇ ಸಕಾರಾತ್ಮಕವಾಗಿ ನಡೆದಿದೆ. ಆದರೆ 2013 ರಿಂದೀಚೆಗೆ ವಿಶ್ವ ಕ್ರಿಕೆಟ್​ನಲ್ಲಿ ಭಾರತದ ಸಾಧನೆ ಬೇರೆಯದ್ದನ್ನೇ ಹೇಳುತ್ತಿದೆ. ಏನದು? ಹಾಗಾದರೆ ಭಾರತಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್ ಮುಕುಟ ದಕ್ಕುವುದಿಲ್ಲವಾ? ಏನದು ಭಾರತ ತಂಡಕ್ಕೆ ಅಂಟಿರುವ ಕಂಟಕ?

ಹೌದು ನ್ಯೂಜಿಲ್ಯಾಂಡ್​ ತಂಡದ ವಿರುದ್ಧ ಜಯಭೇರಿ ಬಾರಿಸಿ, ವಿಶ್ವ ಮುಕುಟ ಧರಿಸಲು ಭಾರತ ಸಜ್ಜಾಗಿದೆ. ಕ್ಯಾಪ್ಟನ್ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡ ಸದ್ಯಕ್ಕೆ ಅದ್ಭುತ ಫಾರಂನಲ್ಲಿರುವುದನ್ನು ನೋಡಿದರೆ ಜಯ ಸುಲಭದ ತುತ್ತು ಅನ್ನಬಹುದು. ಆದರೆ.. ಅದೊಂದು ಭಾರತಕ್ಕೆ ತಗುಲಿಕೊಂಡಿದೆ… Chokers ಎಂಬ ಟ್ಯಾಗ್​! ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಮೆತ್ತಿಕೊಂಡಿರುವಂತೆ ಭಾರತಕ್ಕೂ ಇದು ಕಳಂಕಪ್ರಯವಾಗಿದೆ.

ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ (ICC) ನಡೆಸುತ್ತಾ ಬಂದಿರುವ ಮೇಜರ್​ ಕ್ರಿಕೆಟ್​ ಸ್ಪರ್ಧೆಗಳಲ್ಲಿ ಅಂತಿಮ ಕ್ಷಣಗಳಲ್ಲಿ ಭಾರತ ತಂಡ ಮುಗ್ಗರಿಸುತ್ತಾ ಬಂದಿದೆ. ಇದಕ್ಕೆ ಭಾರತದ ತಂಡದ ಅತಿ ಆತ್ಮವಿಶ್ವಾಸ ಕಾರಣವಾಗಿದೆ ಅನ್ನಬಹುದು… ಆದರೆ ವಾಸ್ತವವಾಗಿ 2013ರಿಂದ ಏನು ನಡೆದಿದೆ ಎಂಬುದನ್ನು ನೋಡಿದಾಗ… ಕೂಲ್​ ಕ್ಯಾಪ್ಟನ್​ ಎಂ ಎಸ್​ ಧೋನಿ ನಾಯಕತ್ವದಲ್ಲಿ ಪ್ರಮುಖವಾದ ಐಸಿಸಿ ಚಾಂಪಿಯನ್​ಶಿಪ್​ ಗೆದ್ದ ಬಳಿಕ ಭಾರತ 2013ರಿಂದೀಚೆಗೆ ಯಾವುದೇ ICC ಕ್ರಿಕೆಟ್​ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿಲ್ಲ. ಹಾಗಾಗಿಯೇ ಭಾರತ ತಂಡದ ಜೊತೆ Chokers ಎಂಬ ಟ್ಯಾಗ್​ ಮುಫತ್ತಾಗಿ ಲಗತ್ತಾಗಿದೆ. ಇದರಿಂದ ಕ್ರಿಕೆಟ್ ಪ್ರೇಮಿಗಳಿಗೂ ತುಸು ನಿರಾಶೆಯಾಗಿದೆ. ​

ಭಾರತ 2013ರಿಂದೀಚೆಗೆ ಯಾವುದೇ ICC ಕ್ರಿಕೆಟ್​ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿಲ್ಲ

2017ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅನುಭವಿಸಿದ ಅಪಜಯ (2017 ICC Champions Trophy final), ಮತ್ತು ನ್ಯೂಜಿಲ್ಯಾಂಡ್​ ವಿರುದ್ಧ 2019ರ ಐಸಿಸಿ ಒಡಿಐ ವರ್ಲ್ಡ್​ ಕಪ್ ಫೈನಲ್​ ಪಂದ್ಯ (2019 ICC ODI World Cup final) ಭಾರತ ತಂಡದ ಕೈಜಾರಿತ್ತು. ಭಾರತ ತಂಡದ ಸಾಮರ್ಥ್ಯ ಪರಿಗಣಿಸಿದರೆ ಭಾರತ ತಂಡದ ಸುಲಭವಾಗಿ ಆ ಎರಡೂ ಮಹತ್ವದ ಪಂದ್ಯಗಳನ್ನು ಗೆಲ್ಲಬೇಕಿತ್ತು. ಆದರೆ ಸೋತು Chokers ಎಂಬ ಟ್ಯಾಗ್​ಗೆ ಜೋತುಬಿತ್ತು. ಇವೆರಡರ ಮಧ್ಯೆ, ವಾಂಖೇಡೆ ಸ್ಟೇಡಿಯಂನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ 2016ರ ಟಿ 20 ವರ್ಲ್ಡ್​ ಕಪ್ ಫೈನಲ್​​ನಲ್ಲಿ (2016 T20 World Cup) ಗೆಲುವಿನ ಸನಿಹದಲ್ಲಿ ಮಗ್ಗರಿಸಿತ್ತು ಭಾರತ ತಂಡ.

ಇದರ ಹೊರತಾಗಿ ಭಾರತ ಕ್ರಿಕೆಟ್​ ತಂಡದ ಸಾಧನೆ ಇತ್ತೀಚಿನ ವರ್ಷಗಳಲ್ಲಿ ಅತ್ಯದ್ಭುತವಾಗಿಯೇ ಇದೆ. ಆದರೆ ಈ ಚೋಕರ್ಸ್​ ಪಟ್ಟವೂ ಬೆನ್ನುಹತ್ತಿದೆ. ಒಂದೊಂದು ಪಂದ್ಯವೂ ಭಿನ್ನವಾಗಿಯೇ ಇರುತ್ತದೆ. ಇದಂ ಇತ್ತಂ ಎಂದು ಸಾರಾಸಗಟಾಗಿ ಹೇಳಲು ಬರುವುದಿಲ್ಲ. ಆದರೂ ತುಸು ಜಾಗ್ರತೆಯಿಂದಲೇ ಭಾರತ ತಂಡ ಜೂನ್ 23ರಂದು ಕಣಕ್ಕೆ ಇಳಿಯಬೇಕಿದೆ. ಮಹಾಮಹಿಮ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಅಂದಿನ ದಿನಕ್ಕೆ ತಕ್ಕಂತೆ ಆಡಬೇಕಿದೆ. ತನ್ಮೂಲಕ ಚೋಕರ್ಸ್​ ಪಟ್ಟ ಕಿತ್ತೆಸೆದು ವಿಜಯ ಪತಾಕೆ ಹಾರಿಸಬೇಕಿದೆ. All Best Team India in ICC World Test Championship Final.

(Why does Team India fail in ICC knockout games? Does the team deserve chokers tag? what is in the store for Team india in ICC World Test Championship final)

ICC World Test Championship: ‘ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಮಣಿಸಲು ಭಾರತ ಇಷ್ಟು ಮಾಡಿದರೆ ಸಾಕು!’

Published On - 9:42 am, Tue, 18 May 21