Ashleigh Barty: ವೃತ್ತಿ ಬದುಕಿಗೆ ವಿದಾಯ ಹೇಳಿದ ವಿಶ್ವದ ನಂ.1 ಮಹಿಳಾ ಟೆನಿಸ್ ಆಟಗಾರ್ತಿ ಆಶ್ಲೀಗ್ ಬಾರ್ಟಿ..!

| Updated By: ಪೃಥ್ವಿಶಂಕರ

Updated on: Mar 23, 2022 | 8:31 AM

Ashleigh Barty: ತನ್ನ ದೇಹವು ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನಾಡುವಷ್ಟು ಸಿದ್ಧವಾಗಿದೆ ಎಂದು ನಾನು ಭಾವಿಸುವುದಿಲ್ಲ. ತಾನು ಈ ನಿರ್ಧಾರವನ್ನು ಇದ್ದಕ್ಕಿದ್ದಂತೆ ತೆಗೆದುಕೊಂಡಿಲ್ಲ, ಕಳೆದ ವರ್ಷ ವಿಂಬಲ್ಡನ್‌ನಿಂದ ಅದರ ಬಗ್ಗೆ ಯೋಚಿಸುತ್ತಿದ್ದೇನೆ ಎಂದಿದ್ದಾರೆ.

Ashleigh Barty: ವೃತ್ತಿ ಬದುಕಿಗೆ ವಿದಾಯ ಹೇಳಿದ ವಿಶ್ವದ ನಂ.1 ಮಹಿಳಾ ಟೆನಿಸ್ ಆಟಗಾರ್ತಿ ಆಶ್ಲೀಗ್ ಬಾರ್ಟಿ..!
ಆಶ್ಲೀಗ್ ಬಾರ್ಟಿ
Follow us on

ವಿಶ್ವದ ನಂಬರ್ ಒನ್ ಮಹಿಳಾ ಟೆನಿಸ್ ಆಟಗಾರ್ತಿ ಆಶ್ಲೀಗ್ ಬಾರ್ಟಿ (Ashleigh Barty) ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾದ ಬಾರ್ಟಿ ಈ ಹಿಂದೆಯೂ ಟೆನಿಸ್​ನಿಂದ ಬ್ರೇಕ್ ತೆಗೆದುಕೊಂಡಿದ್ದರು ಆದರೆ ಈ ಬಾರಿ ಅವರು ಆಟಕ್ಕೆ ಹಿಂತಿರುಗಲು ಸಿದ್ಧವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಬಾರ್ಟಿ ಈ ನಿರ್ಧಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಬಾರ್ಟಿಯನ್ನು ಆಸ್ಟ್ರೇಲಿಯಾದ ಅತಿದೊಡ್ಡ ಕ್ರೀಡಾ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಅವರು ಆಸ್ಟ್ರೇಲಿಯನ್ ಓಪನ್ (Australian Open) ಪ್ರಶಸ್ತಿಯನ್ನು ಗೆದ್ದಿದ್ದರು. 44 ವರ್ಷಗಳಲ್ಲಿ ಈ ಪ್ರಶಸ್ತಿ ಗೆದ್ದ ಮೊದಲ ಆಸ್ಟ್ರೇಲಿಯನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಬಾರ್ಟಿ ಪ್ರಸ್ತುತ ವಿಶ್ವದ ನಂಬರ್ ಒನ್ ಆಟಗಾರ್ತಿಯಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ನಿವೃತ್ತಿ ಘೋಷಿಸುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅವರ ನಿರ್ಧಾರದಿಂದ ಅಭಿಮಾನಿಗಳ ಜೊತೆಗೆ ಟೆನಿಸ್ ಲೋಕದ ಎಲ್ಲಾ ದಿಗ್ಗಜರು ಕೂಡ ಆಶ್ಚರ್ಯಚಕಿತರಾಗಿದ್ದಾರೆ. ತನ್ನ ಆಪ್ತ ಸ್ನೇಹಿತ ಮತ್ತು ಪತ್ರಕರ್ತೆಯೊಂದಿಗಿನ ಸಂದರ್ಶನದಲ್ಲಿ, ಬಾರ್ಟಿ ತನ್ನ ಟೆನಿಸ್ ವೃತ್ತಿಜೀವನವನ್ನು ಇಲ್ಲಿಗೆ ಕೊನೆಗೊಳಿಸುತ್ತಿರುವುದಾಗಿ ಘೋಷಿಸಿದ್ದಾರೆ. ಬಾರ್ಟಿ ಅವರ ವೃತ್ತಿಜೀವನದಲ್ಲಿ ಮೂರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ದೀರ್ಘಕಾಲದಿಂದ ನಿವೃತ್ತಿ ಚಿಂತನೆ
25 ವರ್ಷದ ಬಾರ್ಟಿ ಈ ಬಗ್ಗೆ ಮಾತನಾಡಿದ್ದು, ತನ್ನ ದೇಹವು ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನಾಡುವಷ್ಟು ಸಿದ್ಧವಾಗಿದೆ ಎಂದು ನಾನು ಭಾವಿಸುವುದಿಲ್ಲ. ತಾನು ಈ ನಿರ್ಧಾರವನ್ನು ಇದ್ದಕ್ಕಿದ್ದಂತೆ ತೆಗೆದುಕೊಂಡಿಲ್ಲ, ಕಳೆದ ವರ್ಷ ವಿಂಬಲ್ಡನ್‌ನಿಂದ ಅದರ ಬಗ್ಗೆ ಯೋಚಿಸುತ್ತಿದ್ದೇನೆ ಎಂದಿದ್ದಾರೆ. ವೀಡಿಯೊದಲ್ಲಿ ಬಾರ್ಟಿ, ನಾನು ನಿವೃತ್ತಿಯ ಬಗ್ಗೆ ಬಹಳ ಸಮಯದಿಂದ ಯೋಚಿಸುತ್ತಿದ್ದೆ. ನನ್ನ ವೃತ್ತಿಜೀವನದಲ್ಲಿ ಬಹಳ ಮುಖ್ಯವಾದ ಅನೇಕ ಅದ್ಭುತ ಕ್ಷಣಗಳಿವೆ. ಕಳೆದ ವರ್ಷ ವಿಂಬಲ್ಡನ್ ಆಟಗಾರ್ತಿಯಾಗಿ ನನ್ನನ್ನು ಸಾಕಷ್ಟು ಬದಲಿಸಿದೆ. ಇದು ನನ್ನ ಕನಸಾಗಿತ್ತು ಎಂದಿದ್ದಾರೆ.

ಜೊತೆಗೆ ನಾನು ಇನ್ನು ಮುಂದೆ ನಂಬರ್ ಒನ್ ಆಗಬೇಕೆಂಬ ಆ ಶಕ್ತಿ ಮತ್ತು ಇಚ್ಛಾಶಕ್ತಿ ಇಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ನಾನು ದೈಹಿಕವಾಗಿ ನನ್ನನ್ನು ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಈಗ ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಈ ಆಟಕ್ಕೆ ನನ್ನ ಸರ್ವಸ್ವವನ್ನು ನೀಡಿದ್ದೇನೆ ಮತ್ತು ಅದರಲ್ಲಿ ನನಗೆ ತುಂಬಾ ಸಂತೋಷವಾಗಿದೆ ಮತ್ತು ಅದು ನನಗೆ ನಿಜವಾದ ಯಶಸ್ಸು ಎಂದಿದ್ದಾರೆ.

ಇದನ್ನೂ ಓದಿ:Daniil Medvedev: ನೊವಾಕ್ ಜೊಕೊವಿಕ್ ಹಿಂದಿಕ್ಕಿ ಟೆನಿಸ್​ನಲ್ಲಿ ನಂ.1 ಪಟ್ಟಕ್ಕೇರಿದ ರಷ್ಯಾದ ಡೇನಿಯಲ್ ಮೆಡ್ವೆಡೆವ್..!