ಒಲಿಂಪಿಕ್ಸ್ (Olympics) ಫೈನಲ್ಸ್‌ನಿಂದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅನರ್ಹಗೊಂಡಿದ್ದರು. ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ವಜಾಗೊಳಿಸಿದೆ. ಅನರ್ಹತೆ ಪ್ರಶ್ನಿಸಿ, ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ ಇತ್ತೀಚೆಗೆ ವಿನೇಶ್ ಫೋಗಟ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಾದ, ಪ್ರತಿವಾದ ಆಲಿಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.
ಸೆಮಿಫೈನಲ್ವರೆಗೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಿ ಗೆದ್ದಿದ್ದ ವಿನೇಶ್, ಫೈನಲ್ಗೆ ಲಗ್ಗೆ ಇಟ್ಟಿದ್ದರು. ಆದರೆ ಕೇವಲ 100 ಗ್ರಾಂ ತೂಕ ಹೆಚ್ಚಾಗಿರೋದ್ರಿಂದ ಫೈನಲ್ನಿಂದ ಅನರ್ಹಗೊಳಿಸಲಾಗಿತ್ತು. ಫೈನಲ್ನಲ್ಲಿ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಶನ್ನಲ್ಲಿ ವಿನೇಶ್ ಫೋಗಟ್ ಅರ್ಜಿ ಸಲ್ಲಿಸಿದ್ದರು. ತನಗೆ ಕನಿಷ್ಠ ಬೆಳ್ಳಿ ಪದಕವನ್ನಾದ್ರೂ ನೀಡುವಂತೆ ಒತ್ತಾಯಿಸಿದ್ದರು. ಹೀಗಾಗಿ, ನಿನ್ನೆ ಮೂರನೇ ಬಾರಿಗೆ ಬೆಳ್ಳಿ ಪದಕ ನೀಡುವ ವಿಚಾರವಾಗಿ ಅಂತಾರಾಷ್ಟ್ರೀಯ ಕ್ರೀಡಾ ಮಧ್ಯಸ್ಥಿಕೆ ಕೋರ್ಟ್ ವಿಚಾರಣೆ ಮಾಡಿದ್ದು, ತೀರ್ಪು ಮುಂದೂಡಿತ್ತು.
ಇದನ್ನೂ ಓದಿ: Vinesh Phogat: ವಿನೇಶ್ ಫೋಗಟ್ ಮೇಲ್ಮನವಿ; ಮತ್ತೆ ಗಡುವು ವಿಸ್ತರಣೆ, ಈ ದಿನದಂದು ತೀರ್ಪು ಪ್ರಕಟ
ವಿನೇಶ್ ಫೋಗಟ್ ಅನರ್ಹಗೊಂಡ ಬಳಿಕ ಅನೇಕ ಕ್ರೀಡಾಪಟುಗಳು, ರಾಜಕೀಯ ನಾಯಕರು, ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳು ಅವರು ಬೆಂಬಲಕ್ಕೆ ನಿಂತಿದ್ದರು. ವಿನೇಶ್ಗೆ ನ್ಯಾಯ ಒದಗಿಸಬೇಕು. ಕನಿಷ್ಠ ಬೆಳ್ಳಿ ಪದಕವನ್ನಾದರೂ ನೀಡಬೇಕು ಅಂತ ಆಗ್ರಹಿಸಿ ಅಭಿಯಾನ ಕೂಡ ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿರುವ ಸಿಎಎಸ್ ಕೋರ್ಟ್ ನಿನ್ನೆ ಸತತ 3ನೇ ಬಾರಿ ತೀರ್ಪುವನ್ನು ಮುಂದೂಡಿತ್ತು.
The Indian Olympic Association (IOA) President Dr PT Usha has expressed her shock and disappointment at the decision of the Sole Arbitrator at the Court of Arbitration for Sport (CAS) to dismiss wrestler Vinesh Phogat’s application against the United World Wrestling (UWW) and the… pic.twitter.com/8OWDh3UT8O
— ANI (@ANI) August 14, 2024
ವಿನೇಶ್ ಫೋಗಟ್ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ನಡೆಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಡಾ.ಪಿ.ಟಿ.ಉಷಾ ಅವರು ಆಘಾತಕ್ಕೊಳಗಾಗುವುದರೊಂದಿಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಒಲಿಂಪಿಕ್ಸ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:46 pm, Wed, 14 August 24