AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನೇಶ್ ಫೋಗಟ್ ಅರ್ಜಿ ವಜಾ: ಬೆಳ್ಳಿ ಪದಕದ ಕನಸು ಭಗ್ನ

Vinesh Phogat: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಕೈ ತಪ್ಪುತ್ತಿದ್ದಂತೆ ವಿನೇಶ್ ಫೋಗಟ್ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದರು. ಇದಾಗ್ಯೂ ಬೆಳ್ಳಿ ಪದಕದೊಂದಿಗೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುವ ಆಸೆಯಲ್ಲಿದ್ದರು. ಆದರೀಗ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ವಿನೇಶ್ ಫೋಗಟ್ ಅವರ ಪದಕ ಕನಸು ಕಮರಿದೆ.

ವಿನೇಶ್ ಫೋಗಟ್ ಅರ್ಜಿ ವಜಾ: ಬೆಳ್ಳಿ ಪದಕದ ಕನಸು ಭಗ್ನ
Vinesh Phogat
ಝಾಹಿರ್ ಯೂಸುಫ್
|

Updated on:Aug 15, 2024 | 8:22 AM

Share

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವಿನೇಶ್ ಫೋಗಟ್ ಕನಸು ಸಂಪೂರ್ಣ ಭಗ್ನಗೊಂಡಿದೆ. ಆಗಸ್ಟ್ 9 ರಂದು ನಡೆದ ಮಹಿಳೆಯರ 50 ಕೆಜಿ ತೂಕದ ವಿಭಾಗದ ಫೈನಲ್‌ನಿಂದ ಅನರ್ಹಗೊಂಡ ಬಳಿಕ ಬೆಳ್ಳಿ ಪದಕಕ್ಕಾಗಿ ವಿನೇಶ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹಲವಾರು ದಿನಗಳ ಕಾಯುವಿಕೆಯ ನಂತರ ಅಂತಿಮವಾಗಿ ಈ ಮನವಿಯನ್ನು ಸಿಎಎಸ್ ತಿರಸ್ಕರಿಸಿದೆ. ಇದರೊಂದಿಗೆ ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ವಿನೇಶ್ ಫೋಗಟ್ ಅವರ ಕನಸು ಕೂಡ ಕಮರಿದೆ.

ಇದಕ್ಕೂ ಮುನ್ನ ಪ್ಯಾರಿಸ್ ಒಲಿಂಪಿಕ್ಸ್​ನ 50 ಕೆಜಿ ತೂಕದ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವಿನೇಶ್ ಫೋಗಟ್ ಅವರು ಫೈನಲ್​ಗೆ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ನಡೆದ ತೂಕ ಪರಿಶೀಲನೆ ವೇಳೆ ಅವರು ಅನುಮತಿಸಲಾದ ತೂಕಕ್ಕಿಂತ 100 ಗ್ರಾಂ ಹೆಚ್ಚಿರುವುದು ಕಂಡುಬಂದಿದೆ.

ಒಲಂಪಿಕ್ಸ್‌ನಲ್ಲಿ ಕುಸ್ತಿಯನ್ನು ನಿಯಂತ್ರಿಸುವ ಸಂಸ್ಥೆಯಾದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯು) ನಿಯಮಗಳ ಪ್ರಕಾರ, ಯಾವುದೇ ಕುಸ್ತಿಪಟು ಹೆಚ್ಚಿನ ತೂಕವನ್ನು ಹೊಂದಿದ್ದರೆ ಅವರನ್ನು ಇಡೀ ಪಂದ್ಯಾವಳಿಯಿಂದ ಅನರ್ಹಗೊಳಿಸಲಾಗುತ್ತದೆ. ಅದರಂತೆ ವಿನೇಶ್ ಫೋಗಟ್ ಅವರನ್ನು ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಲಾಗಿತ್ತು.

ಆದರೆ ಈ ಅನರ್ಹತೆಯನ್ನು ಪ್ರಶ್ನಿಸಿದ ವಿನೇಶ್ ಫೋಗಟ್ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಸೆಮಿಫೈನಲ್​ವರೆಗೂ ನಿಗದಿತ ತೂಕದಲ್ಲೇ ಸ್ಪರ್ಧಿಸಿದ್ದರಿಂದ ಬೆಳ್ಳಿ ಪದಕವನ್ನು ನೀಡಬೇಕೆಂದು ಫೋಗಟ್ ಪರ ವಕೀಲರು ಮನವಿ ಸಲ್ಲಿಸಿದ್ದರು.

ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಪ್ಯಾರಿಸ್‌ನಲ್ಲಿ ರಚಿಸಲಾದ ಸಿಎಎಸ್ ಅಡ್-ಹಾಕ್ ವಿಭಾಗವು ವಿನೇಶ್ ಅವರ ಮನವಿಯನ್ನು ಸ್ವೀಕರಿಸಿತು ಮತ್ತು ಶುಕ್ರವಾರ ಆಗಸ್ಟ್ 9 ರಂದು ಸಂಜೆ 5.30 ಕ್ಕೆ (ಭಾರತೀಯ ಕಾಲಮಾನ) 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಸಿಎಎಸ್‌ನ ಏಕೈಕ ಆರ್ಬಿಟ್ರೇಟರ್ ಡಾ ಅನ್ನಾಬೆಲ್ ಬೆನೆಟ್ ಅವರ ಮುಂದೆ ನಡೆದ ಈ ವಿಚಾರಣೆಯಲ್ಲಿ ವಿನೇಶ್ ಪರವಾಗಿ ಫ್ರೆಂಚ್ ಕಾನೂನು ತಂಡ ಹಾಗೂ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಪರವಾಗಿ ದೇಶದ ಖ್ಯಾತ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ವಾದ ಮಂಡಿಸಿದ್ದರು.

ಇದನ್ನೂ ಓದಿ: ವಿನೇಶ್ ಫೋಗಟ್​​ಗೆ ರಾಜ್ಯಸಭಾ ಸ್ಥಾನ ನೀಡಲು ಒತ್ತಾಯ; ನಿಯಮಗಳು ಏನು ಹೇಳುತ್ತವೆ?

ಈ ವಾದವನ್ನು ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿದ್ದರು. ಇದಾದ ಬಳಿಕ ಮತ್ತೆ ಕೆಲ ದಾಖಲೆಗಳ ಬೇಡಿಕೆ ಮುಂದಿಟ್ಟು ಆ.13ಕ್ಕೆ ತೀರ್ಪು ನೀಡುವುದಾಗಿ ಹೇಳಿತ್ತು. ಆದರೆ ಆಗಸ್ಟ್ 13 ರಂದು, ಈ ನಿರ್ಧಾರವನ್ನು ಮೂರನೇ ಬಾರಿಗೆ ಆಗಸ್ಟ್ 16 ಕ್ಕೆ ಮುಂದೂಡಲಾಯಿತು. ಈಗ ಇದ್ದಕ್ಕಿದ್ದಂತೆ ಆಗಸ್ಟ್ 14 ರಂದು ಒಂದು ಸಾಲಿನ ನಿರ್ಧಾರವನ್ನು ಪ್ರಕಟಿಸಲಾಗಿದ್ದು, ಈ ತೀರ್ಪಿನಲ್ಲಿ ವಿನೇಶ್ ಫೋಗಟ್ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಲಾಗಿದೆ.

ಕಮರಿದ ಕನಸು:

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಕೈ ತಪ್ಪುತ್ತಿದ್ದಂತೆ ವಿನೇಶ್ ಫೋಗಟ್ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದರು. ಇದಾಗ್ಯೂ ಬೆಳ್ಳಿ ಪದಕದೊಂದಿಗೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುವ ಆಸೆಯಲ್ಲಿದ್ದರು. ಆದರೀಗ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ವಿನೇಶ್ ಫೋಗಟ್ ಅವರ ಪದಕ ಕನಸು ಕೂಡ ಕಮರಿದೆ.

Published On - 7:55 am, Thu, 15 August 24

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು