AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

30ರ ಹರಯದಲ್ಲಿ ಮೊಣಕಾಲು ನೋವು ಹೆಚ್ಚಾಗಿ ಕಂಡುಬರುತ್ತಿರುವುದಕ್ಕೆ ಕಾರಣವೇನು? ತಜ್ಞರು ನೀಡಿರುವ ಕಾರಣ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಮೊಣಕಾಲು ನೋವಿನ ಸಮಸ್ಯೆ ಚಿಕ್ಕ ವಯಸ್ಸಿನಲ್ಲೇ ಶುರುವಾಗಿದೆ. 30 ರಿಂದ 35 ವರ್ಷ ವಯಸ್ಸಿನವರಿಗೂ ಮೊಣಕಾಲು ನೋವು ಬರುತ್ತಿದೆ. ಹಾಗಾದರೆ ಚಿಕ್ಕ ವಯಸ್ಸಿನಲ್ಲಿ ಮೊಣಕಾಲು ನೋವು ಬರುವುದಕ್ಕೆ ಕಾರಣವೇನು? ಯಾವ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸಬಾರದು, ಜೊತೆಗೆ ಅದನ್ನು ಹೇಗೆ ತಡೆಯಬಹುದು ಮತ್ತು ಮೊಣಕಾಲು ಆರೋಗ್ಯವಾಗಿರಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

30ರ ಹರಯದಲ್ಲಿ ಮೊಣಕಾಲು ನೋವು ಹೆಚ್ಚಾಗಿ ಕಂಡುಬರುತ್ತಿರುವುದಕ್ಕೆ ಕಾರಣವೇನು? ತಜ್ಞರು ನೀಡಿರುವ ಕಾರಣ ಇಲ್ಲಿದೆ
Knee PainImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: May 21, 2026 | 9:20 PM

Share

ಒಂದು ಕಾಲದಲ್ಲಿ ಮೊಣಕಾಲು ನೋವು (Knee Pain), ಸಂಧಿ ಗಟ್ಟಿತನ ಮತ್ತು ನಡೆಯಲು ತೊಂದರೆ ಎನ್ನುವುದು ಹೆಚ್ಚಾದ ವಯಸ್ಸಿನ ಸಮಸ್ಯೆ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ 25ರಿಂದ 35 ವರ್ಷದ ಯುವಕರಲ್ಲಿಯೇ ಮೊಣಕಾಲು ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ವೈದ್ಯರ ಪ್ರಕಾರ, ಒಂದೇ ಕಡೆ ಕುಳಿತು ಕೆಲಸ ಮಾಡುವ ಜೀವನಶೈಲಿ, ದೈಹಿಕ ಚಟುವಟಿಕೆ ಕೊರತೆ, ಹೆಚ್ಚುತ್ತಿರುವ ತೂಕ ಮತ್ತು ಅಸಮತೋಲಿತ ಫಿಟ್ನೆಸ್ ರುಟೀನ್ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಆರ್ಥೋಪೆಡಿಕ್ ತಜ್ಞ ಡಾ. ನವಲ್ ಭಾಟಿಯಾ ಅವರ ಪ್ರಕಾರ, ಮೊಣಕಾಲು ದೇಹದ ಅತ್ಯಂತ ಪ್ರಮುಖ ಸಂಧಿಗಳಲ್ಲೊಂದು. ನಡೆಯುವುದು, ಓಡುವುದು, ಮೆಟ್ಟಿಲೇರುವುದು ಸೇರಿದಂತೆ ಪ್ರತಿಯೊಂದು ಚಟುವಟಿಕೆಯಲ್ಲಿ ಮೊಣಕಾಲಿನ ಪಾತ್ರ ಮುಖ್ಯವಾಗಿದೆ. ಆದರೆ ದೇಹಕ್ಕೆ ಸರಿಯಾದ ಚಲನೆ ಸಿಗದಿದ್ದರೆ ಮತ್ತು ಸುತ್ತಲಿನ ಸ್ನಾಯುಗಳು ದುರ್ಬಲವಾದರೆ ಮೊಣಕಾಲಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಕಾರ್ಟಿಲೇಜ್ ನಿಧಾನವಾಗಿ ಹಾನಿಗೊಳಗಾಗಿ ನೋವು ಶುರುವಾಗುತ್ತದೆ.

ಯುವಕರಲ್ಲಿ ಮೊಣಕಾಲು ನೋವಿಗೆ ಪ್ರಮುಖ ಕಾರಣಗಳು:

ದೀರ್ಘ ಸಮಯ ಕುಳಿತು ಕೆಲಸ ಮಾಡುವುದು: ಇಂದಿನ ಡೆಸ್ಕ್ ಜಾಬ್‌ಗಳು ದೊಡ್ಡ ಕಾರಣವಾಗಿವೆ. ಗಂಟೆಗಳ ಕಾಲ ಕುಳಿತಿರುವುದರಿಂದ ರಕ್ತ ಸಂಚಾರ ಕಡಿಮೆಯಾಗುತ್ತದೆ ಮತ್ತು ಸಂಧಿಗಳ ಚಲನೆ ಕಡಿಮೆಯಾಗುತ್ತದೆ. ಇದರಿಂದ ಎದ್ದಾಗ ಗಟ್ಟಿತನ ಮತ್ತು ನೋವು ಕಾಣಿಸಬಹುದು.

ಹೆಚ್ಚುತ್ತಿರುವ ತೂಕ ಮತ್ತು ಅತಿಯಾಗಿ ದಪ್ಪವಿರುವುದು: ದೇಹದ ಹೆಚ್ಚುವರಿ ತೂಕ ನೇರವಾಗಿ ಮೊಣಕಾಲಿನ ಮೇಲೆ ಒತ್ತಡ ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ಪ್ರತಿಯೊಂದು ಹೆಚ್ಚುವರಿ ಕಿಲೋ ತೂಕವೂ ಮೊಣಕಾಲಿನ ಮೇಲೆ ಹಲವು ಪಟ್ಟು ಒತ್ತಡ ಉಂಟುಮಾಡುತ್ತದೆ.

ಕಾರ್ಟಿಲೇಜ್ ನಿಧಾನವಾಗಿ ಹಾಳಾಗುವುದು: ಮೊಣಕಾಲಿನ ಒಳಭಾಗದಲ್ಲಿರುವ ಕಾರ್ಟಿಲೇಜ್ ನಿಧಾನವಾಗಿ ಹಾನಿಯಾಗತೊಡಗಿದರೂ ಆರಂಭದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸದೇ ಇರಬಹುದು. ನಂತರ ಅದು ಆಸ್ಟಿಯೋಆರ್ಥ್ರೈಟಿಸ್‌ಗೆ ಕಾರಣವಾಗಬಹುದು.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:

  • ಮೆಟ್ಟಿಲೇರುವಾಗ ಅಥವಾ ಇಳಿಯುವಾಗ ನೋವು
  • ಹೆಚ್ಚು ಸಮಯ ಕುಳಿತ ಬಳಿಕ ಗಟ್ಟಿತನ
  • ಮೊಣಕಾಲಿನಲ್ಲಿ ಊತ ಅಥವಾ ಅಸ್ಥಿರತೆ
  • ನಡೆಯುವಾಗ ಶಬ್ದ ಕೇಳಿಸಿಸುವುದು
  • ವ್ಯಾಯಾಮದ ನಂತರವೂ ನೋವು ಮುಂದುವರಿಯುವುದು

ಮೊಣಕಾಲು ಆರೋಗ್ಯವಾಗಿರಲು ಏನು ಮಾಡಬೇಕು?

ತಜ್ಞರ ಸಲಹೆಯಂತೆ ದೇಹದ ತೂಕ ನಿಯಂತ್ರಣದಲ್ಲಿ ಇರಬೇಕು. ಪ್ರತೀ 40-45 ನಿಮಿಷಕ್ಕೊಮ್ಮೆ ಎದ್ದು ಸ್ವಲ್ಪ ನಡೆಯುವುದು ಉತ್ತಮ. ವಾಕಿಂಗ್, ಸೈಕ್ಲಿಂಗ್ ಮತ್ತು ಸ್ವಿಮ್ಮಿಂಗ್‌ನಂತಹ ಲೋ-ಇಂಪ್ಯಾಕ್ಟ್ ವ್ಯಾಯಾಮಗಳು ಸಹಾಯಕವಾಗುತ್ತವೆ. ಜೊತೆಗೆ ಪ್ರೋಟೀನ್ ಸಮೃದ್ಧ ಆಹಾರ ಮತ್ತು ಸಾಕಷ್ಟು ನಿದ್ರೆ ಕೂಡ ಅಗತ್ಯ. ಯುವ ವಯಸ್ಸಿನಲ್ಲೇ ಮೊಣಕಾಲು ನೋವು ಕಾಣಿಸಿಕೊಳ್ಳುತ್ತಿರುವುದರಿಂದ ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸದೆ, ಆರಂಭಿಕ ಹಂತದಲ್ಲೇ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನಲಪಾಡ್​ಗೆ ಮತ್ತೆ ಶಾಕ್: SIT ಚಾರ್ಜ್​ಶೀಟ್ ಬೆನ್ನಲ್ಲೇ ಇಡಿ 3ನೇ ಸಮನ್ಸ್
ನಲಪಾಡ್​ಗೆ ಮತ್ತೆ ಶಾಕ್: SIT ಚಾರ್ಜ್​ಶೀಟ್ ಬೆನ್ನಲ್ಲೇ ಇಡಿ 3ನೇ ಸಮನ್ಸ್
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ