ವಿನೇಶ್ ಫೋಗಟ್‌ಗೆ ರಾಜ್ಯಸಭಾ ಸ್ಥಾನ ನೀಡಲು ಒತ್ತಾಯ; ನಿಯಮಗಳು ಏನು ಹೇಳುತ್ತವೆ?
ಖಾಲಿ ಇರುವ ಸೀಟುಗಳಲ್ಲಿ ಒಂದು ವಿನೇಶ್ ಅವರ ತವರು ರಾಜ್ಯವಾದ ಹರ್ಯಾಣದಿಂದ ಬಂದಿದೆ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಪುತ್ರ ದೀಪೇಂದರ್ ಹೂಡಾ ಅವರು ಜೂನ್‌ನಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಫೋಗಾಟ್‌ಗೆ ಒಲಂಪಿಕ್ಸ್‌ನ ನಿರಾಸೆಯ ನಂತರ ರಾಜ್ಯಸಭಾ ನಾಮನಿರ್ದೇಶನವನ್ನು ಕೋರಿದ ರಾಜಕಾರಣಿಗಳಲ್ಲಿ ಹೂಡಾ ಕೂಡ ಸೇರಿದ್ದಾರೆ.
ದೆಹಲಿ ಆಗಸ್ಟ್ 09: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪಂದ್ಯಕ್ಕೆ ಮುನ್ನ ನಿಗದಿತ ತೂಕಕ್ಕಿಂತ ಜಾಸ್ತಿ ಇದೆ ಎಂದು ಹೇಳಿ ಪಂದ್ಯದಲ್ಲಿ ಭಾಗವಹಿಸಲು ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅನರ್ಹಗೊಂಡಿದ್ದರು. ಐಒಸಿ ಅವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ವಿನೇಶ್ ನಂತರ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದರು. ಕ್ರೀಡಾ ಕಣದಲ್ಲಿ ಒಂದು ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದರೆ ಇತ್ತ ರಾಜಕೀಯ ವಲಯದಲ್ಲಿ ವಿನೇಶ್ ಫೋಗಟ್‌ಗೆ ರಾಜ್ಯಸಭಾ (Rajya Sabha) ಸ್ಥಾನ ನೀಡಬೇಕು ಎಂಬ ಬೇಡಿಕೆ, ಒತ್ತಾಯಗಳು ಕೇಳಿಬಂದಿದೆ.
ರಾಜ್ಯಸಭೆ, ಸಂಸತ್ತಿನ ಮೇಲ್ಮನೆ ಮತ್ತು ‘ಹಿರಿಯರ ಮನೆ’ಯ ಸದಸ್ಯರಾಗಲು ಕನಿಷ್ಠ ವಯಸ್ಸು 30. ಆದರೆ ಫೋಗಟ್ ವಯಸ್ಸು 29. ಆಗಸ್ಟ್ 25 ರಂದು ಅವರಿಗೆ ಮೂವತ್ತು ತುಂಬುತ್ತದೆ. ಪ್ರಸ್ತುತ, ರಾಜ್ಯಸಭೆಯಲ್ಲಿ 12 ಸ್ಥಾನಗಳು ಖಾಲಿ ಇವೆ. ಈ ಖಾಲಿ ಹುದ್ದೆಗಳ ಭರ್ತಿಗೆ ಚುನಾವಣೆ ಸೆಪ್ಟೆಂಬರ್ 3 ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 21 ಆಗಿದೆ. ಹಾಗಾಗಿ ನಾಮಪತ್ರ ಸಲ್ಲಿಸುವ ಹೊತ್ತಿಗೆ ವಿನೇಶ್ಗೆ 30 ವರ್ಷ ಆಗುವುದಿಲ್ಲ. ಆದ್ದರಿಂದ ಆಕೆಗೆ ನಾಮಪತ್ರ ಸಲ್ಲಿಸುವ ಅರ್ಹತೆ ಇರುವುದಿಲ್ಲ.
ಖಾಲಿ ಇರುವ ಸೀಟುಗಳಲ್ಲಿ ಒಂದು ವಿನೇಶ್ ಅವರ ತವರು ರಾಜ್ಯವಾದ ಹರ್ಯಾಣದಿಂದ ಬಂದಿದೆ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಪುತ್ರ ದೀಪೇಂದರ್ ಹೂಡಾ ಅವರು ಜೂನ್‌ನಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಫೋಗಾಟ್‌ಗೆ ಒಲಂಪಿಕ್ಸ್‌ನ ನಿರಾಸೆಯ ನಂತರ ರಾಜ್ಯಸಭಾ ನಾಮನಿರ್ದೇಶನವನ್ನು ಕೋರಿದ ರಾಜಕಾರಣಿಗಳಲ್ಲಿ ಹೂಡಾ ಕೂಡ ಸೇರಿದ್ದಾರೆ. ಆದರೆ ಆಕೆಯ ಕುಟುಂಬವು ಈ ಕರೆಯನ್ನು ತಿರಸ್ಕರಿಸಿತು.
35 ನೇ ವಯಸ್ಸಿನಲ್ಲಿ, ಆಮ್ ಆದ್ಮಿ ಪಕ್ಷದ (ಎಎಪಿ) ರಾಘವ್ ಚಡ್ಡಾ ಅವರು ಹಿರಿಯರ ಸದನದ ಅತ್ಯಂತ ಕಿರಿಯ ಪ್ರಸ್ತುತ ಸದಸ್ಯರಾಗಿದ್ದಾರೆ. ಅವರು ನವೆಂಬರ್ 11 ರಂದು 36 ನೇ ವರ್ಷಕ್ಕೆ ಕಾಲಿಡುತ್ತಾರೆ. ಚಡ್ಡಾ ಅವರು ಮೇ 2, 2022 ರಂದು, 33ನೇ ವಯಸ್ಸಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ: ಟೀ ಮೀಟಿಂಗ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಭಾಗಿ
ಕ್ರೀಡಾಪಟುಗಳು ಸೇರಿದಂತೆ ರಾಜಕೀಯೇತರರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಕೆಲವರು ರಾಜಕೀಯ ಪಕ್ಷಗಳ ಸದಸ್ಯರು ಅಥವಾ ನಾಮನಿರ್ದೇಶಿತರಾಗಿ ಸೇರಿದರೆ, ಹೆಚ್ಚಿನವರು ಭಾರತದ ರಾಷ್ಟ್ರಪತಿಗಳಿಂದ ನಾಮನಿರ್ದೇಶಿತರಾಗುತ್ತಾರೆ. ಲೆಜೆಂಡರಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವಿಶ್ವ ಚಾಂಪಿಯನ್ ಬಾಕ್ಸರ್ ಎಂಸಿ ಮೇರಿ ಕೋಮ್ ರಾಜ್ಯಸಭೆಯಲ್ಲಿದ್ದರು. ನಿವೃತ್ತ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಪ್ರಸ್ತುತ ಸದಸ್ಯರಾಗಿದ್ದಾರೆ, ಅವರು ಎಎಪಿಯ ನಾಮನಿರ್ದೇಶಿತರಾಗಿ ಆಯ್ಕೆಯಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ