ಟೀ ಮೀಟಿಂಗ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಭಾಗಿ
ಸಚಿವರಾದ ಕಿರಣ್ ರಿಜಿಜು, ಕಿಂಜರಾಪು ರಾಮಮೋಹನ್ ನಾಯ್ಡು, ಚಿರಾಗ್ ಪಾಸ್ವಾನ್, ಪಿಯೂಷ್ ಗೋಯಲ್ ಮತ್ತು ವಿರೋಧ ಪಕ್ಷದ ಸಂಸದರಾದ ಸುದೀಪ್ ಬಂಡೋಪಾಧ್ಯಾಯ, ಕನಿಮೋಳಿ ಮೊದಲಾದವ ರಾಹುಲ್ ಗಾಂಧಿಯವರ ಸಾಲಿನಲ್ಲಿ ಕುಳಿತಿದ್ದರು. ಪ್ರತಿಪಕ್ಷ ನಾಯಕನ ಇನ್ನೊಂದು ಬದಿಯಲ್ಲಿ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಕುಳಿತಿದ್ದರು.
ದೆಹಲಿ ಆಗಸ್ಟ್ 09: ಲೋಕಸಭೆ (Lok Sabha) ಕಲಾಪ ಶುಕ್ರವಾರ ಮುಂದೂಡಲ್ಪಟ್ಟ ನಂತರ ಸಂಸತ್ತಿನ ಸಂಕೀರ್ಣದಲ್ಲಿ ನಡೆದ ಅನಧಿಕೃತ ಚಹಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಾಹುಲ್ ಗಾಂಧಿ (Rahul Gandhi) ಪರಸ್ಪರ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಬಜೆಟ್ ಅಧಿವೇಶನದ ನಿಗದಿತ ಅಂತ್ಯಕ್ಕೆ ಒಂದು ದಿನ ಮೊದಲು ಈ ಸಭೆ ನಡೆದಿದೆ. ಸಂಸತ್ತಿನ ಪ್ರಸ್ತುತ ಅಧಿವೇಶನವು ಆಗಸ್ಟ್ 12 ರಂದು ಕೊನೆಗೊಳ್ಳಬೇಕಿತ್ತು ಆದರೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು (ಅನಿರ್ದಿಷ್ಟ ಅವಧಿಗೆ) ಮುಂದೂಡಿದರು.
ನಾಯಕರು ನಮಸ್ತೆ ಎಂದು ಹೇಳಿ ಪರಸ್ಪರ ಶುಭಾಶಯ ಕೋರಿ, ನಗುತ್ತಾ ಸ್ವೀಕರಿಸಿದ್ದಾರೆ ಎಂದು ಸಭೆಯಲ್ಲಿದ್ದ ಜನರು ಎನ್‌ಡಿಟಿವಿಗೆ ತಿಳಿಸಿದರು. ಪ್ರಧಾನಿಯವರು ಸೋಫಾದಲ್ಲಿ ಆಸೀನರಾಗಿದ್ದು ಅವರ ಪಕ್ಕದಲ್ಲಿ ಸ್ಪೀಕರ್ ಓಂ ಬಿರ್ಲಾ ಇದ್ದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರ ಬಲಭಾಗದ ಕುರ್ಚಿಯಲ್ಲಿದ್ದರು.
In pictures: After the postponement of the monsoon session, a tea meeting with Lok Sabha Speaker Om Birla was attended by PM Narendra Modi, Congress MP and Leader of Opposition Rahul Gandhi, Defence Minister Rajnath Singh, Home Minister Amit Shah, and several other leaders pic.twitter.com/KNhVkAQkZ8
— IANS (@ians_india) August 9, 2024
ಸಚಿವರಾದ ಕಿರಣ್ ರಿಜಿಜು, ಕಿಂಜರಾಪು ರಾಮಮೋಹನ್ ನಾಯ್ಡು, ಚಿರಾಗ್ ಪಾಸ್ವಾನ್, ಪಿಯೂಷ್ ಗೋಯಲ್ ಮತ್ತು ವಿರೋಧ ಪಕ್ಷದ ಸಂಸದರಾದ ಸುದೀಪ್ ಬಂಡೋಪಾಧ್ಯಾಯ, ಕನಿಮೋಳಿ ಮೊದಲಾದವ ರಾಹುಲ್ ಗಾಂಧಿಯವರ ಸಾಲಿನಲ್ಲಿ ಕುಳಿತಿದ್ದರು. ಪ್ರತಿಪಕ್ಷ ನಾಯಕನ ಇನ್ನೊಂದು ಬದಿಯಲ್ಲಿ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಕುಳಿತಿದ್ದರು.
ಇದನ್ನೂ ಓದಿ: Manish Sisodia:17 ತಿಂಗಳ ನಂತರ ಜೈಲಿನಿಂದ ಹೊರಬಂದ ಮನೀಶ್ ಸಿಸೋಡಿಯಾ
ಮುಖಂಡರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಂತೆ ಸರ್ವರ್ ಟೀ ಟ್ರೇಯೊಂದಿಗೆ ಘಟನಾ ಸ್ಥಳಕ್ಕೆ ಬರುತ್ತಿರುವುದು ಕಂಡು ಬಂತು. ಕೆಲವು ವಾರಗಳ ಹಿಂದೆ, ಲೋಕಸಭೆಯಲ್ಲಿ ಮಾತನಾಡುವಾಗ ನಾಯಕರು, ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ತೀಕ್ಷ್ಣವಾದ ಮಾತುಗಳನ್ನು ವಿನಿಮಯ ಮಾಡಿಕೊಂಡಿದ್ದರು. ಪರಸ್ಪರ ಎದುರಾಳಿಯಾಗಿ ಕುಳಿತಿರುವ ನಾಯಕರ ಚಿತ್ರಣವು ಬಿರುಸಿನ ಚುನಾವಣಾ ಪ್ರಚಾರ ಮತ್ತು ಎರಡು ಪ್ರತಿಸ್ಪರ್ಧಿ ಪಕ್ಷಗಳ ನಡುವೆ ನಡೆಯುತ್ತಿರುವ ಕಹಿಯುದ್ದಕ್ಕೆ ವ್ಯತಿರಿಕ್ತವಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ