ಕುಸ್ತಿ ಪಟು ವಿನೇಶ್‌ ಫೋಗಟ್ ಬೆಳ್ಳಿ ಪದಕದ ಕನಸು ಭಗ್ನ: ಅರ್ಜಿ ವಜಾಗೊಳಿದ ಸಿಎಎಸ್​​

ಸೆಮಿಫೈನಲ್​ವರೆಗೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಿ ಗೆದ್ದಿದ್ದ ವಿನೇಶ್, ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಆದರೆ ಕೇವಲ 100 ಗ್ರಾಂ ತೂಕ ಹೆಚ್ಚಾಗಿರೋದ್ರಿಂದ ಫೈನಲ್​ನಿಂದ ಅನರ್ಹಗೊಳಿಸಲಾಗಿತ್ತು. ಫೈನಲ್​ನಲ್ಲಿ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಜಾಗೊಳಿಸಲಾಗಿದೆ. ಆ ಮೂಲಕ ವಿನೇಶ್‌ ಫೋಗಟ್ ಬೆಳ್ಳಿ ಪದಕದ ಕನಸು ಭಗ್ನವಾಗಿದೆ.

ಕುಸ್ತಿ ಪಟು ವಿನೇಶ್‌ ಫೋಗಟ್ ಬೆಳ್ಳಿ ಪದಕದ ಕನಸು ಭಗ್ನ: ಅರ್ಜಿ ವಜಾಗೊಳಿದ ಸಿಎಎಸ್​​
ಕುಸ್ತಿ ಪಟು ವಿನೇಶ್‌ ಫೋಗಟ್ ಬೆಳ್ಳಿ ಪದಕದ ಕನಸು ಭಗ್ನ: ಅರ್ಜಿ ವಜಾಗೊಳಿದ ಸಿಎಎಸ್​​
Follow us
ಗಂಗಾಧರ​ ಬ. ಸಾಬೋಜಿ
|

Updated on:Aug 14, 2024 | 10:08 PM

ಒಲಿಂಪಿಕ್ಸ್​​ (Olympics) ಫೈನಲ್ಸ್‌ನಿಂದ ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್ (Vinesh Phogat)​ ಅನರ್ಹಗೊಂಡಿದ್ದರು. ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ವಜಾಗೊಳಿಸಿದೆ. ಅನರ್ಹತೆ ಪ್ರಶ್ನಿಸಿ, ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ ಇತ್ತೀಚೆಗೆ ವಿನೇಶ್‌ ಫೋಗಟ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಾದ, ಪ್ರತಿವಾದ ಆಲಿಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.

ಸೆಮಿಫೈನಲ್​ವರೆಗೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಿ ಗೆದ್ದಿದ್ದ ವಿನೇಶ್, ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಆದರೆ ಕೇವಲ 100 ಗ್ರಾಂ ತೂಕ ಹೆಚ್ಚಾಗಿರೋದ್ರಿಂದ ಫೈನಲ್​ನಿಂದ ಅನರ್ಹಗೊಳಿಸಲಾಗಿತ್ತು. ಫೈನಲ್​ನಲ್ಲಿ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಶನ್​ನಲ್ಲಿ ವಿನೇಶ್ ಫೋಗಟ್ ಅರ್ಜಿ ಸಲ್ಲಿಸಿದ್ದರು. ತನಗೆ ಕನಿಷ್ಠ ಬೆಳ್ಳಿ ಪದಕವನ್ನಾದ್ರೂ ನೀಡುವಂತೆ ಒತ್ತಾಯಿಸಿದ್ದರು. ಹೀಗಾಗಿ, ನಿನ್ನೆ ಮೂರನೇ ಬಾರಿಗೆ ಬೆಳ್ಳಿ ಪದಕ ನೀಡುವ ವಿಚಾರವಾಗಿ ಅಂತಾರಾಷ್ಟ್ರೀಯ ಕ್ರೀಡಾ ಮಧ್ಯಸ್ಥಿಕೆ ಕೋರ್ಟ್ ವಿಚಾರಣೆ ಮಾಡಿದ್ದು, ತೀರ್ಪು ಮುಂದೂಡಿತ್ತು.

ಇದನ್ನೂ ಓದಿ: Vinesh Phogat: ವಿನೇಶ್ ಫೋಗಟ್ ಮೇಲ್ಮನವಿ; ಮತ್ತೆ ಗಡುವು ವಿಸ್ತರಣೆ, ಈ ದಿನದಂದು ತೀರ್ಪು ಪ್ರಕಟ

ವಿನೇಶ್​ ಫೋಗಟ್​ ಅನರ್ಹಗೊಂಡ ಬಳಿಕ ಅನೇಕ ಕ್ರೀಡಾಪಟುಗಳು, ರಾಜಕೀಯ ನಾಯಕರು, ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳು ಅವರು ಬೆಂಬಲಕ್ಕೆ ನಿಂತಿದ್ದರು. ವಿನೇಶ್​ಗೆ ನ್ಯಾಯ ಒದಗಿಸಬೇಕು. ಕನಿಷ್ಠ ಬೆಳ್ಳಿ ಪದಕವನ್ನಾದರೂ ನೀಡಬೇಕು ಅಂತ ಆಗ್ರಹಿಸಿ ಅಭಿಯಾನ ಕೂಡ ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿರುವ ಸಿಎಎಸ್​ ಕೋರ್ಟ್ ನಿನ್ನೆ ಸತತ 3ನೇ ಬಾರಿ ತೀರ್ಪುವನ್ನು ಮುಂದೂಡಿತ್ತು.

ಎಎನ್​ಐ ಟ್ವೀಟ್​

ವಿನೇಶ್​ ಫೋಗಟ್​ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ನಡೆಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಡಾ.ಪಿ.ಟಿ.ಉಷಾ ಅವರು ಆಘಾತಕ್ಕೊಳಗಾಗುವುದರೊಂದಿಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಒಲಿಂಪಿಕ್ಸ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:46 pm, Wed, 14 August 24