
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅಂತಿಮವಾಗಿ ಇಂದು ಪ್ರಾರಂಭವಾಗಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಿದೆ. ಟಾಸ್ ಬಳಿಕ ಮಾತನಾಡಿದ ಕೊಹ್ಲಿ, ಟಾಸ್ ಗೆದ್ದಿದ್ದರೆ ನಾವು ಸಹ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೇವು ಎಂದರು. ಈ ಟೆಸ್ಟ್ ವಿಶ್ವಕಪ್ ಜೂನ್ 18 ಶುಕ್ರವಾರ ಸೌತಾಂಪ್ಟನ್ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಮೊದಲ ದಿನ ಮಳೆಯಿಂದಾಗಿ ಸಂಪೂರ್ಣವಾಗಿ ರದ್ದಾಯಿತು. ನಿನ್ನೆ ಟಾಸ್ ಪ್ರಕ್ರಿಯೆ ಕೂಡ ಸಾಧ್ಯವಾಗಲಿಲ್ಲ. ಕೆಟ್ಟ ಹವಾಮಾನದ ಭೀತಿ ಇನ್ನೂ ಮುಂದುವರೆದಿದೆ, ಆದರೆ ಇಂದು ಸೌತಾಂಪ್ಟನ್‌ನಲ್ಲಿ ಹವಾಮಾನವು ಬೆಳಿಗ್ಗೆಯಿಂದ ಉತ್ತಮವಾಗಿದೆ ಮತ್ತು ಬಿಸಿಲಿನಿಂದ ಕೂಡಿರುವುದು ತಂಡಗಳಿಗೆ ಮತ್ತು ಅಭಿಮಾನಿಗಳಿಗೆ ಸಮಾಧಾನಕರ ಸಂಗತಿಯಾಗಿದೆ. ಪಂದ್ಯವು ನಿಗದಿತ ಸಮಯಕ್ಕೆ ಭಾರತೀಯ ಸಮಯ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ.
ಭಾರತದ ಇಲೆವೆನ್
ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ.
ನ್ಯೂಜಿಲೆಂಡ್ ಇಲೆವೆನ್
ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲಾಥಮ್, ಡೆವೊನ್ ಕಾನ್ವೇ, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜಾಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್ ಮತ್ತು ಟ್ರೆಂಟ್ ಬೌಲ್ಟ್
Toss: New Zealand have won the toss and opted to bowl first. #WTC21 #TeamIndia pic.twitter.com/K5SGCGqU88
— BCCI (@BCCI) June 19, 2021
Published On - 2:49 pm, Sat, 19 June 21