AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ರಿಷಭ್ ಪಂತ್ ಪ್ರಪಂಚದ ಅತ್ಯಂತ ರೋಮಾಂಚಕಾರಿ ಬ್ಯಾಟ್ಸ್​ಮನ್ ಎಂದು ಬಣ್ಣಿಸಿದ ವಿರೇಂದ್ರ ಸೆಹ್ವಾಗ್

ಬುಧವಾರ ಪಂದ್ಯದ ಲಂಚ್​ ಸಮಯದ ವೇಳೆ ಒಂದು ಟ್ವೀಟ್​ ಮಾಡಿರುವ ಸೆಹ್ವಾಗ್, ‘ವಿಶ್ದದ ಅತ್ಯಂತ ರೋಮಾಂಚಕಾರಿ ಟೆಸ್ಟ್​ ಆಟಗಾರ ಮೈದಾನದಲ್ಲಿದ್ದಾರೆ. ಮುಂದಿನ 20 ಓವರ್​ಗಳು ಪಂದ್ಯದ ಪಲಿತಾಂಶವನ್ನು ನಿರ್ಧರಿಸಲಿವೆ, ಅಂತ ಹೇಳಿದ್ದಾರೆ.

WTC Final: ರಿಷಭ್ ಪಂತ್ ಪ್ರಪಂಚದ ಅತ್ಯಂತ ರೋಮಾಂಚಕಾರಿ ಬ್ಯಾಟ್ಸ್​ಮನ್ ಎಂದು ಬಣ್ಣಿಸಿದ ವಿರೇಂದ್ರ ಸೆಹ್ವಾಗ್
ರಿಷಭ್ ಪಂತ್
TV9 Web
| Edited By: |

Updated on:Jun 23, 2021 | 6:54 PM

Share

ಭಾರತ ಮತ್ತು ನ್ಯೂಜಿಲೆಂಡ್​ ನಡುವೆ ಇಂಗ್ಲೆಂಡ್​ನ ಸೌತಾಂಪ್ಟನ್​ನಲ್ಲಿ ನಡೆಯುತ್ತಿರುವ ಚೊಚ್ಚಲು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ರಿಸರ್ವ್ ದಿನಕ್ಕೆ ವಿಸ್ತರಣೆಗೊಂಡಿದ್ದು ಕುತೂಹಲಕಾರಿ ಹಂತ ತಲುಪಿದೆ. ಹಾಗೆ ನೋಡಿದರೆ, ಕಿವೀಸ್ ತಂಡ ಕೊಂಚ ಮೇಲುಗೈ ಸಾಧಿಸಿದೆ ಅತ ಹೇಳಿದರೆ ಉತ್ಪ್ರೇಕ್ಷೆಯೆನಿಸದಾದರೂ, ಬಾರತದ ಮಾಜಿ ಆರಂಭ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ವಿಕೆಟ್-ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಅವರು ಕ್ರೀಸ್​ ಮೇಲಿರುವವರೆಗೆ ಟೀಮ್ ಇಂಡಿಯಾ ಆತಂಕಗೊಳ್ಳುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ. ಪಂತ್ ಅವರನ್ನು ಅತ್ಯಂತ ಪ್ರಪಂಚದ ಅತ್ಯಂತ ರೋಮಾಂಚಕಾರಿ ಆಟಗಾರ ಎಂದು ಬಣ್ಣಿಸಿರುವ ಸೆಹ್ವಾಗ್ ಸ್ವಲ್ಪ ಸಮಯದಲ್ಲೇ ಪಂದ್ಯದ ಸ್ಥಿತಿಯನ್ನು ತಿರುಗಿಸಬಲ್ಲ ಸಾಮರ್ಥ್ಯ ಅವರಲ್ಲಿದೆ ಎಂದು ಹೇಳಿದ್ದಾರೆ.

ಬುಧವಾರ ಪಂದ್ಯದ ಲಂಚ್​ ಸಮಯದ ವೇಳೆ ಒಂದು ಟ್ವೀಟ್​ ಮಾಡಿರುವ ಸೆಹ್ವಾಗ್, ‘ವಿಶ್ದದ ಅತ್ಯಂತ ರೋಮಾಂಚಕಾರಿ ಟೆಸ್ಟ್​ ಆಟಗಾರ ಮೈದಾನದಲ್ಲಿದ್ದಾರೆ. ಮುಂದಿನ 20 ಓವರ್​ಗಳು ಪಂದ್ಯದ ಪಲಿತಾಂಶವನ್ನು ನಿರ್ಧರಿಸಲಿವೆ, ಅಂತ ಹೇಳಿದ್ದಾರೆ. ಚೇತೇಶ್ವರ ಪೂಜಾರಾ ಔಟಾದ ನಂತರ ಪಂತ್ ಬ್ಯಾಟಿಂಗ್ ಮಾಡಲು ಕ್ರೀಸಿಗೆ ಆಗಮಿಸಿದರು. ಆಗ ಭಾರತದ ಸ್ಕೋರ್ 72/4 ಆಗಿತ್ತು.

ಹಾಗೆ ನೋಡಿದರೆ, ಇಂದು ಅದೃಷ್ಟವೂ ಪಂತ್ ಅವರೊಂದಿಗಿದೆ. ಆಟಕ್ಕೆ ಕುದುರಿಕೊಳ್ಳುವ ಮೊದಲೇ ಅವರು ಟಿಮ್ ಸೌಥೀ ಅವರಿಂದ ಜೀವದಾನ ಪಡೆದರು. ಕೈಲ್ ಜೇಮಿಸನ್ ನತದೃಷ್ಟ ಬೌಲರ್ ಆಗಿದ್ದರು ಮತ್ತು ಆಗ ಪಂತ್ ಅವರ ವೈಯಕ್ತಿಕ ಸ್ಕೋರ್ ಕೇವಲ 5 ಆಗಿತ್ತು. ಇದರಿಂದ ವಿಚಿಲಿತರಾಗದ ಪಂತ್ ಸಿಂಗಲ್​ಗಳನ್ನು ಕದಿಯುತ್ತಾ, ದುರ್ಬಲ ಎಸೆತ ಸಿಕ್ಕಾಗ ಅದನ್ನು ಬೌಂಡರಿಗಟ್ಟುತ್ತಾ ನಿಧಾನವಾಗಿ ರೋಸ್ ಬೋಲ್​ ಪಿಚ್​ನ ಸ್ಥಿತಿಗೆ ಹೊಂದಿಕೊಳ್ಳುತ್ತಿದ್ದಾರೆ.

ಬುಧವಾರ ಬೆಳಗ್ಗೆ ಓವರ್​ನೈಟ್​ ಸ್ಕೋರ್ 64/2 ನಿಂದ ಆಟ ಮುಂದುವರಿಸಿದ ಭಾರತ ಕೇವಲ 7 ರನ್ ಸೇರಿಸುವಷ್ಟರಲ್ಲಿ ನಾಯಕ ವಿರಾಟ್​ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡಿತು, ಜೇಮಿಸನ್ ಅವರು ಆಫ್​ಸ್ಟಂಪ್​ನಾಚೆ ಪಿಚ್​ ಮಾಡಿದ ಎಸೆತವನ್ನಯ ಬೆನ್ನಟ್ಟಿದ ಕೊಹ್ಲಿ, ವಿಕೆಟ್-ಕೀಪರ್ ಬಿಜೆ ವಾಟ್ಲಿಂಗ್​ಗೆ ಕ್ಯಾಚ್​ ನೀಡಿ ಔಟಾದರು. ಟೀಮಿನ ಮೊತ್ತಕ್ಕೆ ಅವರ ಕಾಣಿಕೆ ಕೇವಲ 13 ರನ್ ಮಾತ್ರ. ಜೇಮಿಸನ್ ಅವರ ಮರು ಓವರ್​ನಲ್ಲೇ ಪೂಜಾರಾ ಸಹ ಪೆವಿಲಿಯನ್ ದಾರಿ ಹಿಡಿದರು. ಅದಾದ ಸ್ವಲ್ಪ ಹೊತ್ತಿನ ನಂತರ ಪಂತ್​​ಗೆ ಜೀವದಾನ ಸಿಕ್ಕಿತು.

ಟೀಮ್ ಇಂಡಿಯಾದ ಉಪನಾಯಕ ಅಜಿಂಕ್ಯಾ ರಹಾನೆ ಅವರನ್ನು ಜೊತೆಗೂಡಿದ ಪಂತ್ 5ನೇ ವಿಕೆಟ್​ಗೆ ಅಮೂಲ್ಯ 37 ರನ್​ ಸೇರಿಸಿದರು. ಭಾರತ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ 15 ರನ್ ಗಳಿಸಿದ್ದ ರಹಾನೆಯನ್ನು ಟ್ರೆಂಟ್​ ಬೌಲ್ಟ್ ಬಲಿ ತೆಗೆದುಕೊಂಡರು. ಆಗ ಭಾರತದ ಸ್ಕೋರ್ 109/5 ಮತ್ತು ಕೇವಲ 77 ರನ್ನಗಳ ಮುನ್ನಡೆ.

ಕ್ರಿಕೆಟ್​ ಪ್ರೇಮಿಗಳಿಗೆ ಗೊತ್ತಿರುವ ಹಾಗೆ ಡಬ್ಲ್ಯೂಟಿಸಿ ಫೈನಲ್ ಪಂದ್ಯದ ಮೊಲದ ಮತ್ತು 4ನೇ ದಿನಾದಾಟ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಹಾಗಾಗೇ, ಪಂದ್ಯವನ್ನು ರಿಸರ್ವ್ ದಿನಕ್ಕೆ ವಿಸ್ತರಿಸಲಾಗಿದೆ. ಪಂದ್ಯ ನಡೆಯುವಾಗ ಮಳೆ ಸುರಿದು ಆಟ ಸ್ಥಗಿತಗೊಂಡರೆ ರಿವರ್ಸ್ ದಿನವನ್ನು ಬಳಿಸಿಕೊಳ್ಳಲಾಗುವುದೆಂದು ಪಂದ್ಯ ಆರಂಭಕ್ಕೆ ಕೆಲ ದಿನಗಳ ಮೊದಲೇ ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಪ್ರಕಟಿಸಿತ್ತು.

ಲಂಚ್​ ವಿರಾಮದ ನಂತರದ ಆಟದಲ್ಲಿ ಭಾರತ ಎಡಗೈ ಆಲ್​ರೌಂಡರ್ ರವೀಂದ್ರ ಜಡೇಜಾ ಅವರ ವಿಕೆಟ್​ ಸಹ ಕಳೆದುಕೊಂಡಿದೆ. ಪಂತ್ ಜೊತೆ ಆಡಲು ಮತ್ತೊಬ್ಬ ಅಲ್​ರೌಂಡರ್ ರವಿಚಂದ್ರನ್ ಅಶ್ವಿನ್ ಬಂದಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಪಂತ್ 36 ರನ್​ ಗಳಿಸಿ ಆಡುತ್ತದ್ದಾರೆ ಮತ್ತು ಅಶ್ವಿನ್ 2 ರನ್ ಗಳಿಸಿದ್ದಾರೆ. ಭಾರತದ ಸ್ಕೋರ್ 147/6 ಅಗಿದ್ದು 115 ರನ್​ಗಳ ಮುನ್ನಡೆ ಲಭ್ಯವಾಗಿದೆ.

ಇದನ್ನೂ ಓದಿ: WTC Final: ಬೌಲಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ಮ್ಯಾಜಿಕ್! ಸಚಿನ್, ಪಾಂಟಿಂಗ್, ಎಬಿಡಿಯನ್ನು ಹಿಂದಿಕ್ಕಿದ ಟಿಮ್ ಸೌಥಿ

Published On - 6:50 pm, Wed, 23 June 21

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ