ರೋಹಿತ್ ಅಲ್ಲಾ: ಯುವರಾಜ್ ಪ್ರಕಾರ ಕೊಹ್ಲಿ ಬಳಿಕ ಭಾರತದ ಕ್ಯಾಪ್ಟನ್ ಯಾರು ಗೊತ್ತೇ?
ದಿಲ್ಲಿ ತಂಡದ ನಾಯಕನಾಗಿ ಅದ್ಭುತ ಕೆಲಸ ಮಾಡಿದ್ದಾರೆ. ಹೀಗಾಗಿ ರಿಷಭ್ ಪಂತ್ ಭಾರತ ತಂಡದ ಭವಿಷ್ಯದ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ" ಎಂಬುದು ಯುವಿ ಅಭಿಪ್ರಾಯ.
ವಿರಾಟ್ ಕೊಹ್ಲಿ ಬಳಿಕ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಇದರಲ್ಲಿ ಉಪ ನಾಯಕನಾಗಿರುವ ರೋಹಿತ್ ಶರ್ಮಾ ಹೆಸರು ಮುಂಚೂಣಿಯಲ್ಲಿದೆ. ಹೀಗಿರುವಾಗ ಸದ್ಯ ಮತ್ತೊಂದು ಹೆಸರು ಕ್ರಿಕೆಟ್ ವಲಯದಲ್ಲಿ ಹರಿದಾಡಲು ಶುರುವಾಗಿದೆ. ಈ ಬಗ್ಗೆ ಮಾತನಾಡಿರುವುದು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್. ಯುವರಾಜ್ ಸಿಂಗ್ ಪ್ರಕಾರ ವಿಕೆಟ್ ಕೀಪರ್ ಬ್ಯಾಟ್ಸ್ಮಾನ್ ರಿಷಭ್ ಪಂತ್ ಅವರು ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕನಾಗಲಿದ್ದಾರಂತೆ. ಅವರಲ್ಲಿ ಕ್ಯಾಪ್ಟನ್ ಆಗುವ ಎಲ್ಲಾ ಗುಣಗಳಿವೆ ಎಂದು ಹೇಳಿದ್ದಾರೆ. ಯುವ ಆಟಗಾರ ಪಂತ್ ಅವರನ್ನು ಆಸ್ಟ್ರೇಲಿಯಾದ ದಿಗ್ಗಜ ಆ್ಯಡಂ ಗಿಲ್ಕ್ರಿಸ್ಟ್ಗೆ ಹೋಲಿಸಿರುವ ಯುವಿ, ಪಂತ್ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.
ಈ ವರ್ಷ ಐಪಿಎಲ್ನಲ್ಲಿ ಪಂತ್ ನಾಯಕನಾಗಿ ಕಾರ್ಯನಿರ್ವಹಿಸಿದ ಬಗ್ಗೆ ಮಾತನಾಡಿದ ಯುವರಾಜ್, “ಪಂತ್ ವಿಕೆಟ್ ಹಿಂಬದಿಯಲ್ಲಿ ಸದಾ ಚುರುಕುತನದಿಂದ ಇರುತ್ತಾರೆ. ಜೊತೆಗೆ ಆಟಕ್ಕೆ ಅಗತ್ಯದ ಬುದ್ಧಿವಂತಿಕೆ ಕೂಡ ಅವರಲ್ಲಿದೆ. ತನಗೆ ಜವಾಬ್ದಾರಿ ನೀಡಿದರೆ ಅದನ್ನು ಯಾವರೀತಿ ನಿರ್ವಹಿಸುತ್ತಾರೆಂದು ನಾವು ಐಪಿಎಲ್ 2021 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವಾಗ ಕಂಡಿದ್ದೇವೆ. ದಿಲ್ಲಿ ತಂಡದ ನಾಯಕನಾಗಿ ಅದ್ಭುತ ಕೆಲಸ ಮಾಡಿದ್ದಾರೆ. ಹೀಗಾಗಿ ರಿಷಭ್ ಪಂತ್ ಭಾರತ ತಂಡದ ಭವಿಷ್ಯದ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ” ಎಂಬುದು ಯುವಿ ಅಭಿಪ್ರಾಯ.
ರಿಷಭ್ ಪಂತ್ ಹೆಸರುಕೂಡ ಕೇಳಲು ಶುರುವಾಗಿದೆ ರಿಷಭ್ ಪಂತ್ ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕನಾಗಿ ಅದ್ಭುತವಾಗಿ ಮುನ್ನಡೆಸಿದ್ದಾರೆ. ಐಪಿಎಲ್ 2021 ರಲ್ಲಿ ಆಡಿದ ಎಂಟು ಪಂದ್ಯಗಳ ಪೈಕಿ ಆರರಲ್ಲಿ ಗೆಲುವು ಸಾಧಿಸಿದೆ. ಲೀಗ್ ಅರ್ಧದಲ್ಲಿ ಮೊಟಕುಗೊಳ್ಳುವ ವೇಳೆಗೆ ಪಾಯಿಂಟ್ ಪಟ್ಟಿಯಲ್ಲಿ ಡೆಲ್ಲಿ ತಂಡ ಅಗ್ರಸ್ಥಾನಕ್ಕೇರಿತ್ತು.
2017 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ತ್ಯಜಿಸಿದ ಬಳಿಕ ಈವರೆಗೆ ವಿರಾಟ್ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರ ನಂತರದಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಬೇಕು ಎಂಬುದು ಕೆಲ ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿದೆ. ಸದ್ಯ ಇವರ ಜೊತೆಗೆ ರಿಷಭ್ ಪಂತ್ ಹೆಸರುಕೂಡ ಕೇಳಲು ಶುರುವಾಗಿದೆ.
2017 ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ರಿಷಭ್ ಪಂತ್, ಆರಂಭದಲ್ಲಿ ಕಳಪೆ ಪ್ರದರ್ಶನದಿಂದಲೇ ಭಾರೀ ಸುದ್ದಿಯಲ್ಲಿದ್ದರು. ಬಳಿಕ ಕಠಿಣ ಪರಿಶ್ರಮದೊಂದಿಗೆ ಅದ್ಭುತ ಕಮ್‌ಬ್ಯಾಕ್ ಮಾಡಿದ ಇವರು ಸದ್ಯ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಕೂಡ ನೀಡುತ್ತಿದ್ದಾರೆ.