ಸೊಳ್ಳೆಗಳ ಕಾಟವೇ? ಸೊಳ್ಳೆ ನಿರೋಧಕ ಉಂಗುರ ತಯಾರಿಸಿದ ಜರ್ಮನ್ ವಿಜ್ಞಾನಿ

ಇನ್ನು ಮುಂದೆ ಸೊಳ್ಳೆಗಳ ಕಾಟ ತಪ್ಪಿಸುವುದು ತುಂಬಾನೇ ಸುಲಭ, ಇದಕ್ಕೆ ನೀವು ಎರಡು ಕೈಗಳಿಂದ ಓಡಿಸುವ ಅವಶ್ಯಕತೆ ಇಲ್ಲ. ಬದಲಾಗಿ 3ಡಿ ಮುದ್ರಿತ ಉಂಗುರವನ್ನು ಧರಿಸಿದರೆ ಸಾಕು. ಸೊಳ್ಳೆಗಳು ನಿಮ್ಮ ಸಮೀಪ ನುಸುಳುವುದಿಲ್ಲ.

ಸೊಳ್ಳೆಗಳ ಕಾಟವೇ? ಸೊಳ್ಳೆ ನಿರೋಧಕ ಉಂಗುರ ತಯಾರಿಸಿದ ಜರ್ಮನ್ ವಿಜ್ಞಾನಿ
ಸೊಳ್ಳೆ ನಿರೋಧಕ ಉಂಗುರ
Edited By: Rakesh Nayak Manchi

Updated on: Oct 13, 2022 | 5:18 PM

ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟವೆಂದು ಹಣೆ ಚಚ್ಚಿಕೊಳ್ಳುತ್ತೀರಾ? ಹಾಗಿದ್ದರೆ ಇನ್ನು ಮುಂದೆ ಆ ಚಿಂತೆ ಬಿಡಿ. ಏಕೆಂದರೆ ಜರ್ಮನ್ ವಿಜ್ಞಾನಿಯೊಬ್ಬರು ಒಂದು ಉಂಗುರವನ್ನು ತಯಾರಿಸಿದ್ದು, ಇದನ್ನು 3ಡಿ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ನೀವು ಬೆರಳಿಗೆ ಹಾಕಿಕೊಂಡರೆ ಸೊಳ್ಳೆಗಳು ಮತ್ತು ಇತರ ಕೀಟಗಳನ್ನು ಹೆಚ್ಚು ಕಾಲ ದೂರವಿರಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಜರ್ಮನಿಯ ಮಾರ್ಟಿನ್ ಲೂಥರ್ ವಿಶ್ವವಿದ್ಯಾನಿಲಯದ ಹಾಲೆ ವಿಟ್ಟೆನ್‌ಬರ್ಗ್ (MLU) ಸಂಶೋಧಕರು ಸಾಮಾನ್ಯ ಕೀಟ ನಿವಾರಕ AR 3535 ಅನ್ನು ಬಳಸಿಕೊಂಡು ತಮ್ಮ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. AR 3535 ಹೊಂದಿರುವ ಸೊಳ್ಳೆ ಸ್ಪ್ರೇ ಚರ್ಮದ ಮೇಲೆ ತುಂಬಾ ಸೌಮ್ಯವಾಗಿರುತ್ತದೆ ಎಂದು MLU ಪ್ರೊಫೆಸರ್ ರೆನೆ ಆಂಡ್ರೊಚೆ ಹೇಳುತ್ತಾರೆ. ಇದು ಪ್ರಪಂಚದಾದ್ಯಂತ ಹಲವು ವರ್ಷಗಳಿಂದ ಬಳಸಲ್ಪಡುತ್ತದೆ. ಇದನ್ನು ಸಾಮಾನ್ಯವಾಗಿ ಸ್ಪ್ರೇ ಅಥವಾ ಲೋಷನ್ ರೂಪದಲ್ಲಿ ಅನ್ವಯಿಸಲಾಗುತ್ತದೆ. ಇದು ಸೊಳ್ಳೆಗಳಿಂದ ಹಲವು ಗಂಟೆಗಳ ಕಾಲ ರಕ್ಷಣೆ ನೀಡುತ್ತದೆ ಎಂದು ಅವರು ವಿವರಿಸಿದ್ದಾರೆ.

ಉಂಗುರವನ್ನು ಹೇಗೆ ತಯಾರಿಸಲಾಗಿದೆ?

ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ವಿಜ್ಞಾನಿಗಳ ತಂಡವು ಜೈವಿಕ ವಿಘಟನೀಯ ಪಾಲಿಮರ್‌ಗೆ ಕೀಟ ನಿವಾರಕವನ್ನು ಚುಚ್ಚುವ ಮೂಲಕ ಮತ್ತು ವಿವಿಧ ರೀತಿಯಲ್ಲಿ ವಸ್ತುಗಳ ಮಿಶ್ರಣವನ್ನು ಬಳಸಿಕೊಂಡು ಈ ವಿಶಿಷ್ಟ 3D ಮುದ್ರಣ ತಂತ್ರವನ್ನು ವಿನ್ಯಾಸಗೊಳಿಸಿದೆ. ಕೀಟ ನಿವಾರಕವು ಸೊಳ್ಳೆಗಳಿಗೆ ತಡೆಗೋಡೆಯನ್ನು ಸೃಷ್ಟಿಸುತ್ತದೆ ಎಂದು ಎಂಎಲ್‌ಯು ಡಾಕ್ಟರೇಟ್ ಅಭ್ಯರ್ಥಿ ಫ್ಯಾನ್‌ಫಂಡು ಹೇಳಿದ್ದಾರೆ.

ವಿವಿಧ ಪ್ರಯೋಗಗಳು ಮತ್ತು ಸಿಮ್ಯುಲೇಶನ್‌ಗಳನ್ನು ನಡೆಸಿದ ನಂತರ 37 ಡಿಗ್ರಿ ಸೆಲ್ಸಿಯಸ್ ದೇಹದ ಉಷ್ಣಾಂಶದಲ್ಲಿ ಸೊಳ್ಳೆ ವಿರೋಧಿ ದ್ರವವು ಕರಗಲು ಒಂದು ವಾರಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಶೋಧನಾ ತಂಡವು ಅಂದಾಜಿಸಿದೆ. ಇದರಲ್ಲಿ ಬಳಸಲಾದ ವಸ್ತುಗಳಿಗೆ ಪರ್ಯಾಯಗಳನ್ನು ಸಹ ಅನ್ವೇಷಿಸಬಹುದು. ಆದಾಗ್ಯೂ ನೈಜ ಪ್ರಪಂಚದ ಪರಿಸ್ಥಿತಿಗಳಲ್ಲಿ ಉಂಗುರಗಳು ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಿರ್ಧರಿಸಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Thu, 13 October 22

TV9 Web

TV9 Kannada

Read More
Follow Us