ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಹೊಸದಾಗಿ ಕಂಪನಿ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ (Infinix Smart 8 Plus) ಎಂಬ ಮೊಬೈಲ್ ಅನ್ನು ಅನಾವರಣ ಮಾಡಿದೆ. ಇದು ಸ್ಮಾರ್ಟ್ 8 ಸರಣಿಗೆ ಸೇರ್ಪಡೆಯಾದ ಮತ್ತೊಂದು ಫೋನ್ ಆಗಿದೆ. ಈ ಫೋನ್ 6.6 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. AI ಕ್ಯಾಮೆರಾ ನೀಡಲಾಗಿದೆ. ಇದು ಬಜೆಟ್ ಬೆಲೆಯಿಂದ ಕೂಡಿದೆ ಎಂದು ಹೇಳಲಾಗಿದೆ. ಹಾಗಾದರೆ, ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಸ್ಮಾರ್ಟ್ಫೋನ್ನ ಬೆಲೆ ಎಷ್ಟು?, ಫೀಚರ್ಸ್ ಏನಿದೆ ಎಂಬುದನ್ನು ನೋಡೋಣ.
ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಬೆಲೆಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಇದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈ ಫೋನ್ ಅನ್ನು ಟಿಂಬರ್ ಬ್ಲಾಕ್, ಗ್ಯಾಲಕ್ಸಿ ವೈಟ್, ಮತ್ತು ಶೈನಿ ಗೋಲ್ಡ್ ಬಣ್ಣಗಳ ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ.
ವೊಡಾಫೋನ್ ಐಡಿಯಾದಿಂದ ರಿಪಬ್ಲಿಕ್ ಡೇ ಆಫರ್: ಬರೋಬ್ಬರಿ 50GB ಉಚಿತ ಡೇಟಾ
ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಪಂಚ್ ಹೋಲ್ ವಿನ್ಯಾಸದೊಂದಿಗೆ 6.6 ಇಂಚಿನ IPS LCD ಡಿಸ್ಪ್ಲೇ ಹೊಂದಿದೆ. ಇದು 720 x 1612 ಪಿಕ್ಸೆಲ್‌ಗಳೊಂದಿಗೆ HD Plus ರೆಸಲ್ಯೂಶನ್ನಿಂದ ಕೂಡಿದೆ. 90Hz ರಿಫ್ರೆಶ್ ದರವಿದೆ. ಈ ಫೋನ್‌ನ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ AI ಲೆನ್ಸ್ ರೂಪದೊಂದಿಗೆ ಬರುತ್ತದೆ. ಮುಂಭಾಗ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಈ ಫೋನ್ 4 GB RAM ಮತ್ತು 64 GB/128 GB ಸಂಗ್ರಹಣೆಯೊಂದಿಗೆ ಹೆಲಿಯೊ G36 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಮೈಕ್ರೊ ಎಸ್ ಡಿ ಕಾರ್ಡ್ ಸಹಾಯದಿಂದ ಸ್ಟೋರೇಜ್ ಹೆಚ್ಚಿಸಿಕೊಳ್ಳುವ ಆಯ್ಕೆಯನ್ನೂ ಕಂಪನಿ ನೀಡಿದೆ. ಈ ಫೋನ್ ಆಂಡ್ರಾಯ್ಡ್ 13 Go ನೊಂದಿಗೆ ಬರುತ್ತದೆ. ಭದ್ರತೆಗಾಗಿ ಸೈಡ್ ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ. ಬಲಿಷ್ಠವಾದ 6000 mAh ನ ದೊಡ್ಡ ಬ್ಯಾಟರಿಯನ್ನು ನೀಡಲಾಗಿದ್ದು, ಇದರೊಂದಿಗೆ 18W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವೂ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ