ಟೆಲಿಕಾಂ ಮಾರುಕಟ್ಟೆಯಲ್ಲಿ ಒಂದನೇ ಸ್ಥಾನಕ್ಕೇರಲು ಹರಸಾಹಸ ಪಡುತ್ತಿರುವ ಪ್ರಸಿದ್ಧ ಏರ್ಟೆಲ್ (Airtel) ಕಂಪನಿ ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಈಗಾಗಲೇ ಅನೇಕ ಆಕರ್ಷಕ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಅನಾವರಣ ಮಾಡಿದ “ಆಲ್-ಇನ್-ಒನ್” ಹೊಸ ಯೋಜನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಪ್ಲಾನ್‌ಗಳು 699 ರೂ. ಗಳಿಂದ ಪ್ರಾರಂಭವಾಗಲಿದ್ದು 1,599 ರೂ. ವರೆಗಿನ ಬೆಲೆಯಲ್ಲಿ ಲಭ್ಯವಾಗಲಿವೆ. ವಿಶೇಷ ಎಂದರೆ ಈ ಪ್ಲಾನ್‌ಗಳಲ್ಲಿ ಬರೋಬ್ಬರಿ 14 ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇದಲ್ಲದೆ 350 ಚಾನಲ್‌ಗಳನ್ನು ಸ್ಟ್ರೀಮ್ ಮಾಡುವುದಕ್ಕೆ ಅವಕಾಶವಿದೆ. ಅನಿಯಮಿತವಾದ ಇಂಟರ್‌ನೆಟ್ ಸಂಪರ್ಕ್ ಕೂಡ ಲಭ್ಯವಾಗಲಿದೆ.
ಏರ್ಟೆಲ್ನ 699 ರೂ. ಬ್ರಾಡ್‌ಬ್ಯಾಂಡ್ ಪ್ಲಾನ್ ನಿಮಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ 40 Mbps ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡುತ್ತದೆ. ಜೊತೆಗೆ ಏರ್ಟೆಲ್ ಎಕ್ಸ್‌ಟ್ರೀಮ್ ಪ್ರೀಮಿಯಂ ಸಿಂಗಲ್ ಲಾಗಿನ್ ಮೂಲಕ 14 ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಬಹುದು. ಇನ್ನು ಸೋನಿಲೈವ್, ಇರೋಸ್‌ನೌ, ಲಯನ್ಸ್‌ಗೇಟ್ ಪ್ಲೇ, ಹೂಯ್‌ಚಾಯ್, ಮನೋರಮಾ ಮ್ಯಾಕ್ಸ್, ಶೇಮರೂ, ಅಲ್ಟ್ರಾ, ಹಂಗಾಮಾ ಪ್ಲೇ, ಎಪಿಕಾನ್, ಡಿವೋ ಟಿವಿ, ಕ್ಲಿಕ್, ನಮ್ಮಫ್ಲಿಕ್ಸ್, ಡಾಲಿವುಡ್ ಮತ್ತು ಶಾರ್ಟ್ಸ್ ಟಿವಿಗೆ ಪ್ರವೇಶವಿದೆ. ಏರ್ಟೆಲ್4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ 350 ಚಾನಲ್‌ಗಳನ್ನು ಸಹ ಪಡೆಯಬಹುದು.
Tech Tips: ಗೂಗಲ್ನಲ್ಲಿ ನಿಮ್ಮ ಹೆಸರು ಹಾಕಿ ಸರ್ಚ್ ಮಾಡಿದ್ರೆ ಫೋಟೋ ಬರಬೇಕಾ: ಹಾಗಿದ್ರೆ ಹೀಗೆ ಮಾಡಿ
1,099 ರೂ. ಪ್ಲಾನ್‌ನಲ್ಲಿ ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯವಾಗಲಿದೆ. ಜೊತೆಗೆ 200 Mbps ಅನಿಯಮಿತ ಇಂಟರ್‌ನೆಟ್ ವೇಗವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ 14 OTT ಗಳಿಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ಮತ್ತು ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ 350 ಚಾನಲ್‌ಗಳನ್ನು ವೀಕ್ಷಿಸಬಹುದಾಗಿದೆ. 1,599 ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌ನಲ್ಲಿ ನೀವು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಗಳೊಂದಿಗೆ 300 Mbps ಅನಿಯಮಿತ ಇಂಟರ್ನೆಟ್ ಪ್ರಯೋಜನ ಸಿಗಲಿದೆ. 350 ಟಿವಿ ಚಾನಲ್‌ಗಳ ಜೊತೆಗೆ ಮೇಲಿನ ಎರಡು ಪ್ಲಾನ್‌ಗಳ ಮಾದರಿಯಲ್ಲಿಯೇ ಇದು ಕೂಡ 14 OTT ಗಳಿಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ನೀಡಲಿದೆ.
ಇದೇ ಮಾದರಿಯಲ್ಲಿ ಜಿಯೋದಲ್ಲಿ ಕೂಡ ಆಕರ್ಷಕ ಬ್ರಾಡ್‌ಬ್ಯಾಂಡ್ ಪ್ಲಾನ್ಗಳಿವೆ. ಜಿಯೋದ ಹೊಸ ಪ್ಲಾನ್‌ಗಳು 399 ರೂ. ಮತ್ತು ತಿಂಗಳಿಗೆ 3,999 ರೂ. ವರೆಗಿನ ಬೆಲೆಯಲ್ಲಿ ಲಭ್ಯವಾಗಲಿವೆ. ಈ ಎಲ್ಲಾ ಹೊಸ ಪ್ಲಾನ್‌ಗಳು ಅನಿಯಮಿತ ಇಂಟರ್ನೆಟ್ ಪ್ರವೇಶವನ್ನು ನೀಡುತ್ತವೆ. ಆದರೆ ಈ ಎಲ್ಲಾ ಪ್ಲಾನ್‌ಗಳು ವಿಭಿನ್ನ ಇಂಟರ್‌ನೆಟ್ ವೇಗವನ್ನು ಹೊಂದಿವೆ. 399 ರೂ. ಮತ್ತು 699 ರೂ. ಜಿಯೋ ಫೈಬರ್ ಯೋಜನೆಗಳು ಯಾವುದೇ OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒಳಗೊಂಡಿರುವುದಿಲ್ಲ. ಆದರೆ ಬಳಕೆದಾರರು ಹೆಚ್ಚುವರಿ ಹಣ ಪಾವತಿಸುವ ಮೂಲಕ ಆರು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದು.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Sat, 18 June 22