ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2022 (Amazon Great Indian Festival Sale) ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಸೇಲ್ ಅಡಿಯಲ್ಲಿ ಎಕ್ಸ್ಟ್ರಾ ಹ್ಯಾಪಿನೆಸ್ ಡೇಸ್ (Amazon Extra Happiness Days Sale) ನಡೆಯುತ್ತಿದ್ದು ಕೆಲ ಪ್ರಾಡಕ್ಟ್ಗಳಿಗೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಆರ್ಬಿಎಲ್ ಬ್ಯಾಂಕ್, ಸಿಟಿ ಬ್ಯಾಂಕ್, ಒನ್ಕಾರ್ಡ್ ಬ್ಯಾಂಕ್ ಮತ್ತು ರೂಪೆ ಬಳಕೆದಾರರಿಗೆ ಈ ಸೇಲ್‌ನಲ್ಲಿ ಶೇ. 10 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದರಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ ಟೆಕ್ನೋ, ಆ್ಯಪಲ್, ಐಕ್ಯೂ ಮತ್ತು ಶವೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಕೂಡ ಡಿಸ್ಕೌಂಟ್ ಪಡೆದುಕೊಂಡಿವೆ. ಜೊತೆಗೆ ಲ್ಯಾಪ್‌ಟಾಪ್‌ಗಳು, ಟಿವಿಗಳು ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಮುಖ್ಯವಾಗಿ ಐಫೋನ್ 12 (iPhone 12) ಅತ್ಯುತ್ತಮ ಆಫರ್ ಪಡೆದುಕೊಂಡಿದೆ.
ಐಫೋನ್ 14 ಸರಣಿ ಬಿಡುಗಡೆಗೊಂಡ ಮೇಲೆ ಹಿಂದಿನ ಐಫೋನ್ ಸರಣಿಗಳು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಇದೀಗ ಅಮೆಜಾನ್ ಹ್ಯಾಪಿನೆಸ್ ಅಪ್ಗ್ರೇಡ್ ಡೇಸ್ನಲ್ಲಿ ಐಫೋನ್ 12 ಅನ್ನು 25 ಸಾವಿರ ರೂ. ಒಳಗಡೆ ನಿಮ್ಮದಾಗಿಸಬಹುದು. ಇದರ 64GB ಸ್ಟೋರೇಜ್ ಸಾಮರ್ಥ್ಯದ ಮೂಲಬೆಲೆ 65,900 ರೂ. ಆಗಿದೆ. ಆದರೀಗ ಆಫರ್ನಲ್ಲಿ ಶೇ. 27 ರಷ್ಟು ಡಿಸ್ಕೌಂಟ್ ಪಡೆದು ಕೇವಲ 47,999 ರೂ. ಗೆ ನಿಮ್ಮದಾಗಿಸಬಹುದು. 128GB ಸ್ಟೋರೇಜ್ ಸಾಮರ್ಥ್ಯದ ಐಫೋನ್ 12 ಈಗ 54,490 ರೂ. ಗೆ ಮಾರಾಟ ಆಗುತ್ತಿದೆ. ಇದರ ಜೊತೆಗೆ 25,000 ರೂ. ವರೆಗೆ ಎಕ್ಸ್ಚೇಂಜ್ ಆಫರ್ ಕೂಡ ನೀಡಲಾಗಿದೆ. ಹೀಗಾಗಿ ಐಫೋನ್ 12 ಅನ್ನು ನೀವು 25,000 ರೂ. ಒಳಗೆ ಖರೀದಿಸಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್ ಕೇವಲ 16,999 ರೂ. ಗೆ ಲಭ್ಯವಿದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವುದರಿಂದ ಗ್ರಾಹಕರು 12,400 ರೂ. ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದು 6.6-ಇಂಚಿನ ಪೂರ್ಣ HD+ ಇನ್ಫಿನಿಟಿ V ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಆಕ್ಟಾ-ಕೋರ್ Exynos 1280 SoC ಪ್ರೊಸೆಸರ್ ನೀಡಲಾಗಿದೆ.
ಇನ್ನು ಲ್ಯಾಪ್‌ಟಾಪ್ ವಿಚಾರಕ್ಕೆ ಬರುವುದಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್2 ಮೂಲದರ 83,990 ರೂ. ಗಳಾಗಿದ್ದು, ಅಮೆಜಾನ್‌ನ ಈ ಸೇಲ್‌ನಲ್ಲಿ 59,990 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 15.6 ಇಂಚಿನ FHD LED ಡಿಸ್‌ಪ್ಲೇ ಹೊಂದಿದ್ದು, 12 ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್ ಮತ್ತು ಇಂಟೆಲ್ ಐರಿಸ್ Xe ಗ್ರಾಫಿಕ್ಸ್‌ನೊಂದಿಗೆ ಸಿದ್ಧವಾಗಿದೆ. ಇನ್ನುಳಿದಂತೆ 8GBRAM ಹಾಗೂ 512GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಇದರಲ್ಲಿದೆ. ಅಂತೆಯೆ 1,06,290 ರೂ. ಗಳ ಲೆನೊವೊ ಯೋಗ ಸ್ಲಿಮ್ 7 ಪ್ರೊ ಲ್ಯಾಪ್‌ಟಾಪ್ ಸೇಲ್‌ನಲ್ಲಿ 72,990 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.
ಅಮೆಜಾನ್ ಹ್ಯಾಪಿನೆಸ್ ಅಪ್ಗ್ರೇಡ್ ಡೇಸ್ನಲ್ಲಿ ಗ್ರಾಹಕರು ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಬಜಾಜ್ ಫಿನ್‌ಸರ್ವ್ ಮತ್ತು ಅಮೆಜಾನ್ ಪೇ ಲೇಟರ್‌ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಕೂಡ ಪಡೆಯಬಹುದಾಗಿದೆ. ಅಮೆಜಾನ್ ಪೇ UPI ಮೂಲಕ ಪಾವತಿ ಮಾಡುವ ಗ್ರಾಹಕರು 600 ರೂ. ವರೆಗೆ ವೆಲ್ಕಮ್ ರಿವಾರ್ಡ್‌ಗಳನ್ನು ಪಡೆಯಲು ಸಾದ್ಯವಾಗಲಿದೆ. ಸೀಮಿತ ಅವಧಿಯಲ್ಲಿ ‘ಡೈಮಂಡ್ಸ್ ಧಮಾಕಾ’ವನ್ನು ಕೂಡ ಗ್ರಾಹಕರು ಪಡೆಯಲು ಅವಕಾಶ ಸಿಗಲಿದೆ. 1,500 ರೂ. ಮತ್ತು ಅದಕ್ಕಿಂತ ಹೆಚ್ಚಿನ ಬಿಲ್‌ನಲ್ಲಿ 150 ರೂ. ವರೆಗಿನ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು.
Published On - 2:14 pm, Sat, 8 October 22