Amazon Prime Day Sale: ಬಹುನಿರೀಕ್ಷಿತ ಅಮೆಜಾನ್ ಪ್ರೈಮ್ ಡೇ ದಿನಾಂಕ ಬಹಿರಂಗ: ಯಾವಾಗ?, ಈ ಬಾರಿ ಏನು ಆಫರ್ ನೋಡಿ

ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ರಿಯಲ್ ಮಿ ನಾರ್ಜೊ N53, ಒನ್​ಪ್ಲಸ್ ನಾರ್ಡ್ CE 3 Lite 5G, ಒನ್​ಪ್ಲಸ್ 11R 5G, ಐಫೋನ್ 14, ರೆಡ್ಮಿ 12C, ಐಕ್ಯೂ Z6 Lite ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಕಾಣಲಿದೆ ಎಂದು ಅಮೆಜಾನ್ ಹೇಳಿದೆ.

Amazon Prime Day Sale: ಬಹುನಿರೀಕ್ಷಿತ ಅಮೆಜಾನ್ ಪ್ರೈಮ್ ಡೇ ದಿನಾಂಕ ಬಹಿರಂಗ: ಯಾವಾಗ?, ಈ ಬಾರಿ ಏನು ಆಫರ್ ನೋಡಿ
Amazon Prime Day Sale

Updated on: Jun 29, 2023 | 12:19 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಭಾರತದಲ್ಲಿ ಪ್ರೈಮ್ ಡೇ ಸೇಲ್ (Amazon Prime Day Sale) ದಿನಾಂಕವನ್ನು ಬಹಿರಂಗ ಪಡಿಸಿದೆ. ಈ ಬಾರಿ ಕೇವಲ 48 ಗಂಟೆಗಳ ಸೇಲ್ ಅನ್ನು ಮಾತ್ರ ಆಯೋಜನೆ ಮಾಡಿದ್ದು, ಇದು ಜುಲೈ 15 ರಿಂದ ಆರಂಭವಾಗಿ ಜುಲೈ 16ರ ವರೆಗೆ ನಡೆಯಲಿದೆ. ಅಮೆಜಾನ್ ಹೇಳಿರುವ ಪ್ರಕಾರ ಈ ಸೇಲ್​ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಾದ ಲ್ಯಾಪ್​ಟಾಪ್ (Laptop), ಇಯರ್​ಫೋನ್ಸ್, ವಾಚ್​ಗಳು ಸೇರಿದಂತೆ ಅನೇಕ ಪ್ರಾಡಕ್ಟ್ ಮೇಲೆ ಶೇ. 75 ರಷ್ಟು ರಿಯಾಯಿತಿ ಇರಲಿದೆಯಂತೆ. ಅಂತೆಯೆ ಸ್ಮಾರ್ಟ್​ಫೋನ್​ಗಳ (Smartphones) ಮೇಲೆ ಶೇ. 40 ರಷ್ಟು ಮತ್ತು ಸ್ಮಾರ್ಟ್ ಟಿವಿ ಹಾಗೂ ಗೃಹುಪಯೋಗಿ ವಸ್ತುಗಳ ಮೇಲೆ ಶೇ. 60 ರಷ್ಟು ಡಿಸ್ಕೌಂಟ್ ಇರುತ್ತದಂತೆ.

ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ರಿಯಲ್ ಮಿ ನಾರ್ಜೊ N53, ಒನ್​ಪ್ಲಸ್ ನಾರ್ಡ್ CE 3 Lite 5G, ಒನ್​ಪ್ಲಸ್ 11R 5G, ಐಫೋನ್ 14, ರೆಡ್ಮಿ 12C, ಐಕ್ಯೂ Z6 Lite ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಕಾಣಲಿದೆ ಎಂದು ಅಮೆಜಾನ್ ಹೇಳಿದೆ. ಆದರೆ, ಈ ಫೋನ್​ಗಳ ನಿಖರವಾದ ಬೆಲೆಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಇನ್ನೂ ಬಹಿರಂಗಪಡಿಸಿಲ್ಲ.

WhatsApp Storage: ವಾಟ್ಸ್​ಆ್ಯಪ್ ಸ್ಟೋರೇಜ್ ಫುಲ್ ಆದರೆ ಏನು ಮಾಡ್ಬೇಕು ಗೊತ್ತಾ?

ಇದನ್ನೂ ಓದಿ
Amazon: ಆಕಸ್ಮಿಕವಾಗಿ ಮೂರು ಸ್ಮಾರ್ಟ್​ಫೋನ್​ಗಳ ಬೆಲೆ ಬಹಿರಂಗ ಪಡಿಸಿದ ಅಮೆಜಾನ್: ಗ್ರಾಹಕರಲ್ಲಿ ಅಚ್ಚರಿ
Realme GT 2: ರಿಯಲ್​ಮಿ ಫೋನ್ ಖರೀದಿಗೆ ಬೆಸ್ಟ್ ಆಫರ್ ನೀಡುತ್ತಿದೆ ಫ್ಲಿಪ್​ಕಾರ್ಟ್
Samsung Galaxy S20 FE: ₹74,999 ಮೌಲ್ಯದ ಗ್ಯಾಲಕ್ಸಿ S20 FE ಫೋನ್ ₹27,959ಕ್ಕೆ ಮಾರಾಟ
Taara: ಭಾರತದಲ್ಲಿ ಬೆಳಕಿನ ಕಿರಣ ಬಳಸಿ ಅತ್ಯಂತ ವೇಗದ, ಅಗ್ಗದ ಇಂಟರ್ನೆಟ್ ಸೌಲಭ್ಯ

ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಉಪಕರಣಗಳು, ಟಿವಿಗಳು ಮತ್ತು ಅನೇಕ ಉಪಕರಣಗಳು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಈ ದಿನದಂದು ಗ್ರಾಹಕರು ಎಕೋ (ಅಲೆಕ್ಸಾ ಜೊತೆ), ಫೈರ್ ಟಿವಿ ಮತ್ತು ಕಿಂಡಲ್ ಸಾಧನಗಳಲ್ಲಿ ಉತ್ತಮ ಡಿಸ್ಕೌಂಟ್ ಪಡೆಯುತ್ತಾರೆ. ಜೊತೆಗೆ ಇತ್ತೀಚಿನ ಸ್ಮಾರ್ಟ್ ಸ್ಪೀಕರ್‌ಗಳು, ಸ್ಮಾರ್ಟ್ ಡಿಸ್ ಪ್ಲೇಗಳು ಮತ್ತು ಫೈರ್ ಟಿವಿ ಉತ್ಪನ್ನಗಳ ಮೇಲೆ ಶೇಕಡಾ 55 ರಷ್ಟು ರಿಯಾಯಿತಿ ಇರುತ್ತದೆ ಎಂದು ಅಮೆಜಾನ್ ಹೇಳಿದೆ.

ಭಾರತದ 25 ನಗರಗಳಿಂದ ಆರ್ಡರ್ ಮಾಡುವ ಪ್ರೈಮ್ ಸದಸ್ಯರು ಅದೇ ದಿನ ಅಥವಾ ಆರ್ಡರ್‌ ಮಾಡಿದ ಮರುದಿನ ಡೆಲಿವರಿ ಆಗುತ್ತದೆ. ಈ 25 ನಗರಗಳಲ್ಲಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಯಮತ್ತೂರು, ದೆಹಲಿ, ಫರಿದಾಬಾದ್, ಗಾಂಧಿ ನಗರ, ಗುಂಟೂರು, ಗುರ್ಗಾಂವ್, ಹೈದರಾಬಾದ್, ಇಂದೋರ್, ಜೈಪುರ, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನೋಯ್ಡಾ, ಪಾಟ್ನಾ, ಪುಣೆ, ಥಾಣೆ, ತಿರುವನಂತಪುರಂ, ವಿಜಯವಾಡ ಮತ್ತು ವಿಶಾಖಪಟ್ಟಣಂ ಸೇರಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Thu, 29 June 23