ಗ್ರಾಹಕರು ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಅಮೆಜಾನ್ ಪ್ರೈಮ್ ಡೇ ಸೇಲ್ (Amazon Prime Day Sale) ಮುಕ್ತಾಯಗೊಂಡಿದ್ದು, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ. 95ರಷ್ಟು ಪ್ರೈಮ್ ಸಮಸ್ಯರು ಪ್ರೈಮ್ ಡೇ ಸೇಲ್‌ನಲ್ಲಿ ಖರೀದಿ ಮಾಡಿದ್ದಾರೆ ಎಂದು ಅಮೆಜಾನ್ ಇಂಡಿಯಾ ಮಾಹಿತಿ ನೀಡಿದೆ. ಈ ಕುರಿತು ಮಾತನಾಡಿದ ಅಮೆಜಾನ್ (Amazon) ಇಂಡಿಯಾದ ಪ್ರೈಮ್ ನಿರ್ದೇಶಕ ಅಕ್ಷಯ್ ಸಾಹಿ (Akshay Sahi), ಜುಲೈ 23 ಮತ್ತು 24 ರಂದು ಅಮೇಜಾನ್ ಪ್ರೈಮ್ ಸದಸ್ಯರಿಗಾಗಿಯೇ ಪ್ರೈಮ್ ಡೇ ಸೇಲ್ ಘೋಷಣೆ ಮಾಡಲಾಗಿತ್ತು. ಈ ಎರಡು ದಿನಗಳ ಸೇಲ್‌ನಲ್ಲಿ ಜನರು ನಿರೀಕ್ಷೆಗೂ ಮೀರಿ ಭಾಗವಹಿಸಿದ್ದಾರೆ ಎಂದು ಹೇಳಿದ್ದಾರೆ.
ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಎಲೆಕ್ಟ್ರಿಕ್, ಸೌಂದರ್ಯ, ದೈನಂದಿನ ಬಳಕೆಯ ವಸ್ತುಗಳು ಸೇರಿದಂತೆ ಬಹುತೇಕ ಎಲ್ಲ ವಸ್ತುಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಿತ್ತು. ಈ ರಿಯಾಯಿತಿ ಪ್ರಯೋಜನವನ್ನು ಪ್ರೈಮ್ ಸದಸ್ಯರು ಸಂಪೂರ್ಣವಾಗಿ ಉಪಯೋಗಿಸಿಕೊಂಡಿದ್ದಾರಂತೆ.
ಇನ್ನು ಪ್ರೈಮ್ ಡೇ ಸೇಲ್‌ನಲ್ಲಿ ಭಾಗವಹಿಸಲು ಪ್ರೈಮ್ ಕುಟುಂಬಕ್ಕೆ ಹೊಸಬರು ಕೂಡ ಸೇರ್ಪಡೆಗೊಂಡಿದ್ದಾರಂತೆ. ಕಳೆದ ವರ್ಷದ ಪ್ರೈಮ್ ಸದಸ್ಯತ್ವಕ್ಕೆ ಹೋಲಿಸಿದರೆ ಈ ವರ್ಷ 1.5 ಪಟ್ಟು ಹೆಚ್ಚು ಹೊಸ ಪ್ರೈಮ್ ಸದಸ್ಯರು ಸೈನ್ ಅಪ್ ಮಾಡಿದ್ದಾರೆ. ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್, ಸೋನಿ, ಹೈಸೆನ್ಸ್, ಬೋಟ್, ಫೇಬರ್, ಯುರೇಕಾ ಫೋರ್ಬ್ಸ್, ಕೋಲ್ಗೇಟ್, ಅಡಿಡಾಸ್, ಸಫಾರಿ, ಎಲ್‌ಜಿ, ಫಿಲಿಪ್ಸ್, ವ್ಯಾನ್ ಹುಸೆನ್, ಪುಮಾ, ಡಾಬರ್, ಟ್ರೆಸ್ಸೆಮೆ, ಮಾಮಾಅರ್ಥ್‌ನಂತಹ 500ಕ್ಕೂ ಹೆಚ್ಚು ಪ್ರಮುಖ ಬ್ರ್ಯಾಂಡ್‌ಗಳು ರಿಯಾಯಿತಿ ಘೋಷಿಸಿ, ಸಾವಿರಾರು ಉತ್ಪನ್ನಗಳ ಮಾರಾಟ ಮಾಡಲಾಗಿದೆ.
ಒಟ್ಟು, ದೇಶಾದ್ಯಂತ 11,738 ಪಿನ್‌ಕೋಡ್‌ಗಳಿಗೆ ಡೆಲಿವೆರಿ ಮಾಡಲಾಗಿದೆ ಎಂದು ಅಮೆಜಾನ್ ಹೇಳಿದೆ. ಕಳೆದ ಪ್ರೈಮ್ ಡೇಗೆ ಹೋಲಿಸಿದರೆ ಸುಮಾರು 18% ಹೆಚ್ಚು ಮಾರಾಟಗಾರರು 1 ಕೋಟಿ ರೂ. ಹಾಗೂ ಸುಮಾರು 38% ಹೆಚ್ಚು ಮಾರಾಟಗಾರರು 1 ಲಕ್ಷಕ್ಕೂ ಹೆಚ್ಚು ವ್ಯವಹಾರ ನಡೆಸಿದ್ದಾರೆ.
ಕರ್ನಾಟಕದಲ್ಲಿ ಮಂಗಳೂರಿಗರೇ ಹೆಚ್ಚು:
ಈ ಬಾರಿ ಪ್ರೈಮ್ ಡೇನಲ್ಲಿ ಅತಿ ಹೆಚ್ಚು ಆರ್ಡರ್ ಸ್ವೀಕರಿಸಿದ ನಗರಗಳ ಪೈಕಿ ಮಂಗಳೂರು ಮುಂದಿದ್ದು, ಶೇ.70ರಷ್ಟು ಆರ್ಡರ್ ಸ್ವೀಕರಿಸಲಾಗಿದೆ. ಜೊತೆಗೆ, ಕೊಲ್ಹಾಪುರ, ಸೂರತ್, ಗಾಜಿಯಾಬಾದ್, ರಾಯಪುರ, ಕೊಯಮತ್ತೂರು, ಜಲಂಧರ ಮತ್ತು ಕಟಕ್‌ನಂತಹ 2, 3, 4ನೇ ಹಂತದ ನಗರಗಳಿಂದ ಮಾರಾಟಗಾರರ ಆರ್ಡರ್ ಸ್ವೀಕರಿಸಲಾಗಿದೆ ಎಂದು ಅಮೆಜಾನ್ ತನ್ನ ವರದಿಯಲ್ಲಿ ತಿಳಿಸಿದೆ.
Published On - 2:30 pm, Fri, 29 July 22