iPhone 13 Mini: ಐಫೋನ್ ಖರೀದಿಗೆ ಇದೇ ಬೆಸ್ಟ್​ ಟೈಮ್:​ 13 ಮಿನಿ, 12 ಮಿನಿ ಮೇಲೆ ಬಂಪರ್ ಡಿಸ್ಕೌಂಟ್

iPhone 12 Mini: ಐಫೋನ್ 12 ಮಿನಿ ಫೋನ್​ಗೆ ಫ್ಲಿಪ್​ಕಾರ್ಟ್​​ನಲ್ಲಿ ಶೇ. 16 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದನ್ನು ನೀವು ಕೇವಲ 49,999 ರೂ. ಗೆ ಖರೀದಿಸಬಹುದು. ಇದರ ಜೊತೆಗೆ 12,500 ರೂ. ಗಳ ಎಕ್ಸ್​ಚೇಂಜ್ ಆಫರ್ ಕೂಡ ಇದೆ.

iPhone 13 Mini: ಐಫೋನ್ ಖರೀದಿಗೆ ಇದೇ ಬೆಸ್ಟ್​ ಟೈಮ್:​ 13 ಮಿನಿ, 12 ಮಿನಿ ಮೇಲೆ ಬಂಪರ್ ಡಿಸ್ಕೌಂಟ್
Apple iPhone
Edited By:

Updated on: Jun 27, 2022 | 12:50 PM

ಆ್ಯಪಲ್ (Apple) ಕಂಪನಿಯ ಪ್ರಸಿದ್ಧ ಐಫೋನ್ 13 ಮಿನಿ (iPhone 13 Mini) ಮತ್ತು ಐಫೋನ್ 12 ಮಿನಿ (iPhone 12 Mini) ಸ್ಮಾರ್ಟ್​​ಫೋನ್ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಲಾಗಿದೆ. ಐಫೋನ್ 13 ಮಿನಿ 128GB ಸ್ಟೋರೆಜ್ ಆಯ್ಕೆಯ ಮೇಲೆ ಶೇ. 7 ರಷ್ಟು ರಿಯಾಯಿತಿ ನೀಡಲಾಗಿದ್ದು ಕಡಿಮೆ ದರದಲ್ಲಿ ಮಾರಾಟ ಆಗುತ್ತಿದೆ. ಈ ಫೋನ್ ಕಳೆದ ವರ್ಷ ಬಿಡುಗಡೆ ಆಗಿತ್ತು. ಈ ಫೋನ್ ಈಗ 64,999 ರೂ. ಗೆ ಖರೀದಿಸಬಹುದು. ಇದರ ಜೊತೆಗೆ 12,500 ರೂ. ಗಳ ಎಕ್ಸ್​ಚೇಂಜ್ ಆಫರ್ ಕೂಡ ಇದೆ. SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 10 ರಷ್ಟು ಡಿಸ್ಕೌಂಟ್ ಇದೆ. ಅಂತೆಯೆ ಫ್ಲಿಪ್​ಕಾರ್ಟ್​ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್​ ಉಪಯೋಗಿಸಿದರೆ ಶೇ. 5 ರಷ್ಟು ರಿಯಾಯಿತಿ ನೀಡಲಾಗಿದೆ.

ಇನ್ನು ಐಫೋನ್ 12 ಮಿನಿ ಫೋನ್​ಗೆ ಫ್ಲಿಪ್​ಕಾರ್ಟ್​​ನಲ್ಲಿ ಶೇ. 16 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದನ್ನು ನೀವು ಕೇವಲ 49,999 ರೂ. ಗೆ ಖರೀದಿಸಬಹುದು. ಇದರ ಜೊತೆಗೆ 12,500 ರೂ. ಗಳ ಎಕ್ಸ್​ಚೇಂಜ್ ಆಫರ್ ಕೂಡ ಇದೆ. ಕ್ರೆಡಿಟ್ ಕಾರ್ಡ್​ ಮೂಲಕ ಪಡೆದುಕೊಂಡರೆ ಮತ್ತಷ್ಟು ರಿಯಾಯಿತಿ ನಿಮ್ಮದಾಗಿಸಬಹುದು.

Smartphone Tips: ಸ್ಮಾರ್ಟ್​ಫೋನ್ ಸೇಲ್ ಮಾಡುವ ಪ್ಲಾನ್​ ಇದೆಯೇ?: ಹಾಗಿದ್ರೆ ಇಲ್ಲಿ ಗಮನಿಸಿ

ಇದನ್ನೂ ಓದಿ
Jio vs Airtel: 666 ರೂ. ಪ್ಲಾನ್: ಜಿಯೋ ಏರ್ಟೆಲ್​ನಲ್ಲಿ ಒಂದೇ ಬೆಲೆಯ ಯೋಜನೆ: ಯಾವುದು ಬೆಸ್ಟ್?
POCO F4 5G: ರಿಲೀಸ್ ಆದ ಎರಡೇ ದಿನಕ್ಕೆ ಪೋಕೋ F4 5G ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಡಿಸ್ಕೌಂಟ್
Flipkart Electronics Sale: ಒಂದೇ ದಿನ ಬಾಕಿ: ಎಲೆಕ್ಟ್ರಾನಿಕ್ ಸೇಲ್​ನ ಈ ಆಫರ್ ಮಿಸ್ ಮಾಡ್ಬೇಡಿ
Realme Narzo 50i Prime: ಮಾರುಕಟ್ಟೆಗೆ ಲಗ್ಗೆಯಿಟ್ಟ ಬಜೆಟ್ ಬೆಲೆಯ ರಿಯಲ್‌ ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್​​ಫೋನ್

ಐಫೋನ್ 13 ಮಿನಿ ಫೋನ್‌ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 800nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್‌ ನೀಡಲಾಗಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ. ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಯನ್ನು ಪಡೆದಿದೆ.

USB Charger: ಮುಂದಿನ ದಿನಗಳಲ್ಲಿ ಕೇಬಲ್, ಚಾರ್ಜರ್​ಗಾಗಿ ಪರದಾಡಬೇಕಿಲ್ಲ: ನಡೆಯುತ್ತಿದೆ ಹೊಸ ಆವಿಷ್ಕಾರ