ಪ್ರಪಂಚದ ಅತೀ ದೊಡ್ಡ ಕಂಪೆನಿಯಾಗಿ ಹೊರಹೊಮ್ಮಿರುವ ಆ್ಯಪಲ್(Apple), ಇನ್ನೂ ಕೂಡ ಅದೇ ಕ್ರೇಜ್ ಜನರಲ್ಲಿ ಉಳಿದುಕೊಳ್ಳುವಂತೆ ಮಾಡಿದೆ. ಇದಕ್ಕೆ ಪ್ರಮುಖ ಕಾರಣ ಇದರ ಗುಣಮಟ್ಟ. ಇಂದಿನ ಯುವ ಪೀಳಿಗೆಗಂತೂ ಆ್ಯಪಲ್ ಫೋನ್(Apple iPhone) ಸಕ್ಕತ್ತ್ ಫೇವರೇಟ್. ಎಷ್ಟೇ ದುಬಾರಿಯಾಗಿದ್ದರೂ ಕೂಡ ಅದೆಷ್ಟೋ ಜನರಿಗೆ ಒಂದು ಆ್ಯಪಲ್ ಬ್ರ್ಯಾಂಡ್ ಫೋನ್ ಖರೀದಿಸಬೇಕೆಂಬ ಕನಸಿರುತ್ತದೆ. ಅಷ್ಟರ ಮಟ್ಟಿಗೆ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡಿದೆ ಈ ಬ್ರ್ಯಾಂಡ್. ಇದರ ಈ ಯಶಸ್ಸಿಗೆ ಪ್ರಮುಖ ಕಾರಣ ಇದರ ಸಂಸ್ಥಾಪಕ, ಸಿಇಒ ಸ್ಟೀವ್ ಜಾಬ್ಸ್. ಈ ಐಫೋನ್ ನ ಆ್ಯಪಲ್ ಲೋಗೋ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ, ಅದೇನು ಗೊತ್ತಾ? ಈ ಸ್ಟೋರಿ ಓದಿ.
ಆ್ಯಪಲ್ ಕಂಪೆನಿಯು ಅತ್ಯಂತ ಚಿಕ್ಕದಾಗಿ 1976 ರಲ್ಲಿ ಕ್ಯಾಲಿಫೋರ್ನಿಯಾದ ಲಾಸ್ ಆಲ್ಟೋಸ್‌ನಲ್ಲಿ ಪ್ರಾರಂಭವಾಯಿತು. ಸ್ಟೀವ್ ಜಾಬ್ಸ್ ಇದರ ಸೃಷ್ಟಿಕರ್ತ. ಅತ್ಯಂತ ಚಿಕ್ಕದಾಗಿ ಪ್ರಾರಂಭಗೊಂಡ ಈ ಕಂಪೆನಿ ಇಂದು ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದೆ. 1977 ರಲ್ಲಿ, ಅಧಿಕೃತವಾಗಿ ಆ್ಯಪಲ್ ಕಂಪನಿಯಾಯಿತು. ಮೊದಲಿಗೆ ಕಂಪ್ಯೂಟರ್‌ಗಳನ್ನು ಮಾರಾಟ ಮಾಡುತ್ತಿದ್ದ ಈ ಕಂಪೆನಿ, ನಂತರ ಮೊಬೈಲ್ ಪ್ರಾರಂಭಿಸಿ, ಈಗ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಕೂಡ ಆರಂಭಿಸಿದೆ.
ಸ್ಟೀವ್ ಜಾಬ್ಸ್ ಅವರಿಗೆ ಬಹಳ ಪ್ರಿಯವಾದ ಹಣ್ಣು ಸೇಬು ಹಾಗೂ ಅವರಿಗೆ ಬಹಳ ಇಷ್ಟವಾದ ವಿಜ್ಞಾನಿ ಸರ್ ಐಸಾಕ್ ನ್ಯೂಟನ್. ಆದ್ದರಿಂದಲೇ 1976ರಲ್ಲಿ ಮೊದಲ ಬಾರಿ ತಯಾರಿಸಿದ ಈ ಕಂಪೆನಿಯ ಮೊದಲ ಲೋಗೊದಲ್ಲಿ ಸೇಬು ಮರದ ಕೆಳಗೆ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಕಾಣಬಹುದು. ಆದರೆ ಈ ಲೋಗೋ ಸ್ಟೀವ್ ಜಾಬ್ಸ್ಗೆ ಅಷ್ಟೊಂದು ಇಷ್ಟವಾಗದ ಕಾರಣದಿಂದಾಗಿ 1977ರಲ್ಲಿ ರಾಬ್ ಜಾನೋಫ್ ಎಂಬ ಹೆಸರಿನ ಗ್ರಾಫಿಕ್ ಡಿಸೈನರ್ನ ನೇಮಿಸಿ ಹೊಸ ಆಪಲ್ ಡಿಸೈನ್ ಕ್ರಿಯೇಟ್ ಮಾಡ್ತಾರೆ. ಇದು ಅರ್ಥ ಕಚ್ಚಿದ ಸೇಬು ಹಣ್ಣಿನ ಆಕಾರವನ್ನು ಯಾಕೆ ಹೊಂದಿದೆ ಎಂಬ ಪ್ರಶ್ನೆ ಸಾಕಷ್ಟು ಮಟ್ಟಿಗೆ ಹರಿದಾಡುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಸ್ಟೀವ್ ಜಾಬ್ಸ್ ಉತ್ತರ ನೀಡುತ್ತಾರೆ.
ಇದನ್ನು ಓದಿ: ಪ್ರಪಂಚದ ಅತಿದೊಡ್ಡ ಕಪ್ಪೆ ಗೊಲಿಯತ್, ಗುಲಾಬಿ ಬಣ್ಣದ ಹಾಲು ನೀಡುವ ಪ್ರಾಣಿ ನೀರಾನೆ
ಪ್ರಾರಂಭದಲ್ಲಿ ಪೂರ್ತಿಯಾಗಿ ಸೇಬು ಹಣ್ಣನ್ನು ಬಿಡಿಸಲಾಗಿದ್ದರೂ ಸಹ ಅದು ಚೆರಿ ಹಣ್ಣನ್ನು ಹೋಲುತ್ತದೆ ಎಂಬ ಕಾರಣಕ್ಕಾಗಿ, ಈ ರೀತಿಯಾಗಿ ಲೋಗೋ ತಯಾರಿಸಲಾಯಿತು ಎಂದು ಹೇಳುತ್ತಾರೆ. ಇದು ಹೊಸ ರೀತಿಯ ಮಾರ್ಕೆಟಿಂಗ್ ಸ್ಟಾಟರ್ಜಿಯಾಗಿರುವುದನ್ನು ಕಾಣಬಹುದು. ಇದಲ್ಲದೇ ಆಧುನಿಕ ಕಂಪ್ಯೂಟರ್‌ನ ಪಿತಾಮಹ ಅಲನ್ ಟ್ಯೂರಿಂಗ್ ಸೈನೈಡ್ ಮಿಶ್ರಿತ ಸೇಬನ್ನು ತಿಂದ ಕಾರಣ ಮೃತಪಟ್ಟಿದ್ದರು. ಆದ್ದರಿಂದ ಅವರ ಗೌರವಾರ್ಥವಾಗಿ ಆ್ಯಪಲ್ ಹಣ್ಣಿನ ಲೋಗೋ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.
1977ರಲ್ಲಿ ಕಾಮನಬಿಲ್ಲಿನ ಬಣ್ಣದಲ್ಲಿ ರಚಿಸಲಾಗಿದ್ದ ಈ ಲೋಗೋವನ್ನು ಮುಂದಿನ 20 ವರ್ಷಗಳ ವರೆಗೆ ಅಂದರೆ 1977 ರಿಂದ 1998ವರೆಗೆ ಬಳಸಲಾಯಿತು. ಸ್ಟೀವ್ ಜಾಬ್ಸ್ 1997 ರಲ್ಲಿ ಆಪಲ್‌ಗೆ ಹಿಂದಿರುಗಿದ ಒಂದು ವರ್ಷದ ನಂತರ ಅಂದರೆ 1998ರಿಂದ 2000ರವರೆಗೆ ಗಾಢ ಕಪ್ಪು ಬಣ್ಣದ ಆಪಲ್ ಲೋಗೋ, 2001ರಿಂದ 2007ರ ವರೆಗೆ ಆಕಾಶ ನೀಲಿ ಬಣ್ಣದಲ್ಲಿ ತ್ರಿಡಿ ಲೋಗೋ ವಿನ್ಯಾಸಗೊಳಿಸಲಾಯಿತು. ಪ್ರಸ್ತುತ ಈಗ ಬಿಳಿ ಬಣ್ಣದಲ್ಲಿ ಕಾಣಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:17 pm, Sun, 29 January 23