2024ರ ಮೊದಲ ಫೋನ್ ಪರಿಚಯಿಸಿದ ಆಸಸ್: ಹೇಗಿದೆ ನೋಡಿ ಈ ದುಬಾರಿ ಬೆಲೆಯ ಸ್ಮಾರ್ಟ್​ಫೋನ್

Asus ROG Phone 8 Pro, ROG Phone 8: ಆಸಸ್ ರಾಗ್ ಫೋನ್ 8 ಸರಣಿ ಅಡಿಯಲ್ಲಿ ರಾಗ್ ಫೋನ್ 8 ಮತ್ತು ರಾಗ್ ಫೋನ್ 8 ಪ್ರೊ ಎಂಬ ಎರಡು ಫೋನುಗಳಿವೆ. ಇದು 5,500mAh ಜೊತೆಗೆ 65W ಹೈಪರ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಮತ್ತು 15W Qi ವೈರ್‌ಲೆಸ್ ಚಾರ್ಜಿಂಗ್​ನಿಂದ ಕೂಡಿದೆ. 50MP ಸೋನಿ IMX890 ಪ್ರಾಥಮಿಕ ಸಂವೇದಕವಿದೆ.

2024ರ ಮೊದಲ ಫೋನ್ ಪರಿಚಯಿಸಿದ ಆಸಸ್: ಹೇಗಿದೆ ನೋಡಿ ಈ ದುಬಾರಿ ಬೆಲೆಯ ಸ್ಮಾರ್ಟ್​ಫೋನ್
ASUS ROG Phone 8 series
Follow us
|

Updated on:Jan 09, 2024 | 2:16 PM

ಪ್ರಸಿದ್ಧ ಆಸಸ್ ಕಂಪನಿ 2024ರ ಮೊಟ್ಟ ಮೊದಲ ಸ್ಮಾರ್ಟ್​ಫೋನ್ ಅನ್ನು ಪರಿಚಯಿಸಿದೆ. ಹೊಸ ಆಸಸ್ ರಾಗ್ ಫೋನ್ 8 ಸರಣಿಯನ್ನು (Asus ROG Phone 8 Series) ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಆಸಸ್ ರಾಗ್ ಫೋನ್ 7 ಶ್ರೇಣಿಯ ಉತ್ತರಾಧಿಕಾರಿಯಾಗಿದೆ. ಆಸಸ್ ರಾಗ್ ಫೋನ್ 8 ಸರಣಿ ಅಡಿಯಲ್ಲಿ ರಾಗ್ ಫೋನ್ 8 ಮತ್ತು ರಾಗ್ ಫೋನ್ 8 ಪ್ರೊ ಎಂಬ ಎರಡು ಫೋನುಗಳಿವೆ. ಇದರ ವಿನ್ಯಾಸವು ಹೆಚ್ಚು ಬದಲಾಗಿಲ್ಲ, ಆದರೆ ಫೀಚರ್ಸ್​ನಲ್ಲಿ ಹೊಸತನವನ್ನು ಕಾಣಬಹುದು. ಹಾಗಾದರೆ ಆಸಸ್ ರಾಗ್ ಫೋನ್ 8 ಮತ್ತು 8 ಪ್ರೊ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಆಸಸ್ ರಾಗ್ ಫೋನ್ 8 ಸರಣಿಯ ಬೆಲೆ, ಮಾರಾಟ:

  • ಆಸಸ್ ರಾಗ್ ಫೋನ್ 8 ಬೆಲೆ 16GB + 256GB ಮಾದರಿಗೆ $1,099.99 (ಅಂದಾಜು ರೂ 91,400) ಆಗಿದೆ.
  • ಆಸಸ್ ರಾಗ್ ಫೋನ್ 8 ಪ್ರೊ 16GB + 512GB ಆವೃತ್ತಿಗೆ $1,199.99 (ಸುಮಾರು ರೂ 99,700) ನಿಗದಿ ಮಾಡಲಾಗಿದೆ.
  • ಆಸಸ್ ರಾಗ್ ಫೋನ್ 8 ರೆಬೆಲ್ ಗ್ರೇ ಮತ್ತು ಫ್ಯಾಂಟಮ್ ಬ್ಲ್ಯಾಕ್ ಬಣ್ಣಗಳಲ್ಲಿ ಬರುತ್ತದೆ. 8 ಪ್ರೊ ಕೇವಲ ಫ್ಯಾಂಟಮ್ ಬ್ಲ್ಯಾಕ್ ಬಣ್ಣದಲ್ಲಿ ಬರುತ್ತದೆ.

Lava Storm 5G: ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ದೇಸಿ ಬ್ರ್ಯಾಂಡ್ ಲಾವಾ ಫೋನ್

ಆಸಸ್ ರಾಗ್ ಫೋನ್ 8 ಮತ್ತು ಫೋನ್ 8 ಪ್ರೊ ಫೀಚರ್ಸ್:

ಡಿಸ್‌ಪ್ಲೇ : ಆಸಸ್ ರಾಗ್ ಫೋನ್ 8 ಸರಣಿಯು 6.78-ಇಂಚಿನ FHD+ ಸ್ಯಾಮ್​ಸಂಗ್ E6 AMOLED ಡಿಸ್‌ಪ್ಲೇ ಜೊತೆಗೆ 2400×1080 ಪಿಕ್ಸೆಲ್‌ಗಳು, 1-120Hz LTPO (ಗೇಮಿಂಗ್‌ಗಾಗಿ ಗರಿಷ್ಠ 165Hz), HDR ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ.

ಇದನ್ನೂ ಓದಿ
Image
ಈ ಫೋನ್ ಇದ್ರೆ DSLR ಮರೆತುಬಿಡಿ, ಒಪ್ಪೋದಿಂದ ಹೊಸ ಫೈಂಡ್ X7 ಸರಣಿ ಬಿಡುಗಡೆ
Image
ರೈಲಿನಿಂದ ಫೋನ್ ಕೆಳಗೆ ಬಿದ್ದರೆ ಏನು ಮಾಡಬೇಕು?, ಮರಳಿ ಪಡೆಯುವುದು ಹೇಗೆ?
Image
ಭಾರತಕ್ಕೆ ಬಂತು ವಿವೋದ ಹೊಚ್ಚ ಹೊಸ ಬಜೆಟ್ ಸ್ಮಾರ್ಟ್​ಫೋನ್ ವಿವೋ Y28 5G
Image
ಸ್ಯಾಮ್​ಸಂಗ್ ಗ್ಯಾಲಕ್ಸಿ ಸ್ಮಾರ್ಟ್​ಫೋನ್ ಖರೀದಿಗೆ ಡಿಸ್ಕೌಂಟ್

ಪ್ರೊಸೆಸರ್ : ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 3 4nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno 750 GPU. 8 ಪ್ರೊ 24GB LPDDR5X RAM ಮತ್ತು 1TB ವರೆಗೆ UFS4.0 ಸಂಗ್ರಹಣೆಯನ್ನು ಪ್ಯಾಕ್ ಮಾಡುತ್ತದೆ.

RAM ಮತ್ತು ಸಂಗ್ರಹಣೆ : 12GB/16GB/24GB LPDDR5X RAM ಮತ್ತು 256GB/512GB/1TB UFS 4.0 ಸಂಗ್ರಹಣೆ.

OS : ಆಂಡ್ರಾಯ್ಡ್ 14 ಜೊತೆಗೆ ROG UI

ಕ್ಯಾಮೆರಾಗಳು : f/1.9 ದ್ಯುತಿರಂಧ್ರದೊಂದಿಗೆ 50MP ಸೋನಿ IMX890 ಪ್ರಾಥಮಿಕ ಸಂವೇದಕ, 13MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು OIS ಜೊತೆಗೆ 32MP 3x ಟೆಲಿಫೋಟೋ ಸಂವೇದಕವಿದೆ. ಮುಂಭಾಗದ ಕ್ಯಾಮೆರಾ 32MP ಇದೆ. ರಾಗ್ ಫೋನ್ 8 ಮುಂಭಾಗದಲ್ಲಿ 12-ಮೆಗಾಪಿಕ್ಸೆಲ್ RGBW ಕ್ಯಾಮೆರಾವನ್ನು ಹೊಂದಿದೆ

ಬ್ಯಾಟರಿ : 5,500mAh ಜೊತೆಗೆ 65W ಹೈಪರ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಮತ್ತು 15W Qi ವೈರ್‌ಲೆಸ್ ಚಾರ್ಜಿಂಗ್. ವೇಗದ ಚಾರ್ಜಿಂಗ್ ತಂತ್ರಜ್ಞಾನವು 39 ನಿಮಿಷಗಳಲ್ಲಿ 0 ರಿಂದ 100 ಪ್ರತಿಶತದಷ್ಟು ಬ್ಯಾಟರಿಯನ್ನು ತುಂಬುತ್ತದೆ.

ಇತರೆ : 3.5mm ಆಡಿಯೋ ಜ್ಯಾಕ್, ಡ್ಯುಯಲ್ ಸ್ಪೀಕರ್‌ಗಳು, ಆಸಸ್ ನಾಯ್ಸ್ ರಿಡಕ್ಷನ್ ಟೆಕ್ನಾಲಜಿಯೊಂದಿಗೆ ಟ್ರೈ-ಮೈಕ್ರೋಫೋನ್‌ಗಳು, ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, 5G SA/NSA, ಡ್ಯುಯಲ್ 4G VoLTE, Wi-Fi 7, Bluetooth 5.4, USB Type-C, ಮತ್ತು NFC ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Tue, 9 January 24

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ