Kannada News Technology Asus Zenfone 9 Asus has unveiled its latest Zenfone smartphone in select global markets Check specs and Price
Asus Zenfone 9: ಬಲಿಷ್ಠ ಪ್ರೊಸೆಸರ್, ಅದ್ಭುತ ಕ್ಯಾಮೆರಾ: ಏಸಸ್ ಜೆನ್‌ಫೋನ್ 9 ಬಿಡುಗಡೆ, ಬೆಲೆ ಎಷ್ಟು?
ಏಸಸ್ ಇದೀಗ ಜೆನ್‌ಫೋನ್ (Asus Zenfone) ಸರಣಿಯಲ್ಲಿ ವಿನೂತನ ಫೋನ್ ಅನ್ನು ಲಾಂಚ್ ಮಾಡಿದೆ. ಅದುವೇ ಜೆನ್‌ಫೋನ್ 9 (Asus Zenfone 9).
Asus Zenfone 9
Follow us on
ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಏಸಸ್(Asus) ಸದ್ಯ ಹೊಸ ಮೊಬೈಲ್ನೊಂದಿಗೆ ಮತ್ತೆ ಬಂದಿದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್ಫೋನ್ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ರೋಗ್ ಸರಣಿಯ ಒಂದು ಫೋನನ್ನು ಅನಾವರಣ ಮಾಡಿತ್ತು. ಇದೀಗ ಜೆನ್‌ಫೋನ್ (Asus Zenfone) ಸರಣಿಯಲ್ಲಿ ವಿನೂತನ ಫೋನ್ ಅನ್ನು ಲಾಂಚ್ ಮಾಡಿದೆ. ಅದುವೇ ಜೆನ್‌ಫೋನ್ 9 (Asus Zenfone 9). ನೂತನ ಏಸಸ್ ಜೆನ್‌ಫೋನ್ 9 ಈ ಹಿಂದಿನ ಜೆನ್‌ಫೋನ್‌ಗಳಿಗಿಂತ ಸಾಕಷ್ಟು ಅಪ್‌ಡೇಟ್ ಆಗಿದ್ದು, ಆಕರ್ಷಕ ಫೀಚರ್ಗಳಿಂದ ಕೂಡಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ನ ಬೆಲೆ ಎಷ್ಟು?, ಫೀಚರ್ಸ್ ಏನು ಎಂಬ ಕುರಿತ ಎಲ್ಲ ಮಾಹಿತಿ ಇಲ್ಲಿದೆ.
ಏಸಸ್ ಜೆನ್‌ಫೋನ್ 9 ಸ್ಮಾರ್ಟ್ಫೋನಿನ ಖಚಿತ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಇದು 8GB RAM + 128GB, 8GB RAM + 256G2B, and 16GB RAM + 256GB ಸ್ಟೋರೇಜ್ ಆಯ್ಕೆಯೊಂದಿಗೆ ಬರಲಿದೆ.
ಈ ಫೋನಿನ ಬೆಲೆ ಭಾರತದಲ್ಲಿ ಅಂದಾಜು 65,000 ರೂ. ಇರಬಹುದು ಎನ್ನಲಾಗಿದೆ. ಯುರೋಪ್ನಲ್ಲಿ ಜೆನ್‌ಫೋನ್ 9 ಬೆಲೆ EUR 800 ಆಗಿದೆ.
ಜೆನ್‌ಫೋನ್ 9 ಸ್ಮಾರ್ಟ್‌ಫೋನ್ 5.92 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದರ ಡಿಸ್‌ಪ್ಲೇಯು 1,080 x 2,400 ಪಿಕ್ಸಲ್ ರೆಸಲ್ಯೂಶನ್ ಹೊಂದಿರಲಿದ್ದು, ಜೊತೆಗೆ 120Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿರಲಿದೆ.
ಅತ್ಯಂತ ಬಲಿಷ್ಠವಾದ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಸಹ ಪಡೆದಿರಲಿದೆ.
ಇದನ್ನೂ ಓದಿ
ಈ ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದು ಸೋನಿ IMX766 ಸೆನ್ಸಾರ್ನಿಂದ ಕೂಡಿದೆ.
ಇನ್ನೊಂದು ಕ್ಯಾಮೆರಾವು ಅಲ್ಟ್ರಾ–ವೈಡ್ 12 ಮೆಗಾ ಪಿಕ್ಸಾಲ್ ಸೆನ್ಸಾರ್ ಸಾಮರ್ಥ್ಯದಲ್ಲಿರಲಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 12 ಮೆಗಾ ಪಿಕ್ಸಾಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಸೆಲ್ಫಿ ಕ್ಯಾಮೆರಾವು ವಿಡಿಯೋ ಕರೆ ಹಾಗೂ ಫೋಟೋಗಳಿಗೆ ಪೂರಕ ಇದೆ.
ಏಸಸ್ ಜೆನ್‌ಫೋನ್ 9 ಫೋನಿನ ಬ್ಯಾಟರಿಗೆ ಸಂಬಂಧಿಸಿದಂತೆ ನೋಡುವುದಾರೆ, ಈ ಫೋನ್ 4,300mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರಲಿದೆ. ಇದಕ್ಕೆ ಪೂರಕವಾಗಿ 30W ವೇಗದ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ.