AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Redmi K50S Pro: ಭಾರತಕ್ಕೆ ಬರುತ್ತಿದೆ 200MP ಕ್ಯಾಮೆರಾ ಸ್ಮಾರ್ಟ್​​ಫೋನ್: ಯಾವುದು?, ಬೆಲೆ ಎಷ್ಟು?

200MP Camera Phone: ನೀವು 108 ಮೆಗಾಫಿಕ್ಸೆಲ್​ನ ಸ್ಮಾರ್ಟ್​​ಫೋನನ್ನು ಮರೆತು ಬಿಡಿ. ಯಾಕೆಂದರೆ ವಿಶ್ವ ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ಶವೋಮಿ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಪರಿಚಯಿಸಲು ಮುಂದಾಗಿದೆ.

Redmi K50S Pro: ಭಾರತಕ್ಕೆ ಬರುತ್ತಿದೆ 200MP ಕ್ಯಾಮೆರಾ ಸ್ಮಾರ್ಟ್​​ಫೋನ್: ಯಾವುದು?, ಬೆಲೆ ಎಷ್ಟು?
Redmi K50S Pro 200MP Camera Phone
TV9 Web
| Updated By: Vinay Bhat|

Updated on: Aug 31, 2022 | 6:04 AM

Share

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ಕ್ಯಾಮೆರಾ ಮೊಬೈಲ್​ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಶವೋಮಿ ಮೊದಲ ಬಾರಿಗೆ ಅದುಕೂಡ ಅತ್ಯಂತ ಕಡಿಮೆ ಬೆಲೆಗೆ 108 ಮೆಗಾಫಿಕ್ಸೆಲ್ ಕ್ಯಾಮೆರಾ ಫೋನ್ ಪರಿಚಯಿಸಿದ್ದೇ ತಡ ಇತರೆ ಬಹುತೇಕ ಬ್ರ್ಯಾಂಡ್​ಗಳು ಮೊಬೈಲ್​​ನಲ್ಲಿನ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮುಖ್ಯವಾಗಿ ಭಾರತದಲ್ಲಿ  (Xiaomi) ಶವೋಮಿ ಕಂಪನಿಯ ಫೋನ್​ಗಳಿಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್​ಗಳು ದೇಶದಲ್ಲಿ ಎಗ್ಗಿಲ್ಲದೆ ಮಾರಾಟ ಆಗುತ್ತಿದೆ. ಆದರೆ ಇನ್ನು ನೀವು ಈ 108 ಮೆಗಾಫಿಕ್ಸೆಲ್​ನ ಸ್ಮಾರ್ಟ್​​ಫೋನನ್ನು ಮರೆತು ಬಿಡಿ. ಯಾಕೆಂದರೆ ವಿಶ್ವ ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ಶವೋಮಿ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು (200MP Camera Phone) ಪರಿಚಯಿಸಲು ಮುಂದಾಗಿದೆ. ಇತ್ತೀಚೆಗಷ್ಟೆ ಮೋಟೋರೊಲಾ ಕಂಪನಿ ತನ್ನ ಮೋಟೋ X30 Pro ಸ್ಮಾರ್ಟ್​ಫೋನ್​ನಲ್ಲಿ 200 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ನೀಡಿತ್ತು.

ಈಗ ಶವೋಮಿ ಕಂಪನಿ ತನ್ನ ರೆಡ್ಮಿ ಬ್ರ್ಯಾಂಡ್​ನ ಅಡಿಯಲ್ಲಿ 200 ಮೆಗಾಫಿಕ್ಸೆಲ್ ಕ್ಯಾಮೆರಾ ಇರುವ ಫೋನನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಫೋನಿನ ಹೆಸರು ರೆಡ್ಮಿ K50S ಪ್ರೊ ಆಗಿರಲಿದೆಯಂತೆ. ಪ್ರಸಿದ್ಧ ಟೆಕ್ ಮಾಹಿತಿಗಾರ ಯೋಗೇಶ್ ಬ್ರಾರ್ ಈ ಬಗ್ಗೆ ಖಚಿತ ಪಡಿಸಿದ್ದು, ರೆಡ್ಮಿ K50S ಪ್ರೊ ಸ್ಮಾರ್ಟ್​​ಫೋನ್​ನ ಮುಖ್ಯ ಕ್ಯಾಮೆರಾ 200 ಮೆಗಾಫಿಕ್ಸೆಲ್​ನಿಂದ ಕೂಡಿರಲಿದೆ ಎಂದು ಹೇಳಿದ್ದಾರೆ. ಈ ಕ್ಯಾಮೆರಾ ಮೂಲಕ ಲೋ ಲೈಟ್ ಇರುವ ಜಾಗದಲ್ಲಿ ತೆಗೆದ ಫೋಟೋ ಕೂಡ ಅದ್ಭುವಾಗಿ ಮೂಡಿಬರುತ್ತಂತೆ.

ರೆಡ್ಮಿ K50S ಪ್ರೊ ಸ್ಮಾರ್ಟ್​​ಫೋನ್​ನಲ್ಲಿ ಅತ್ಯಂತ ಬಲಿಷ್ಠವಾದ ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಇರಲಿದೆಯಂತೆ. 200MP ಮೈನ್ ಕ್ಯಾಮೆರಾದೊಂದಿಗೆ 8 ಮೆಗಾಫಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ ಹಾಗೂ 2 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆಂತೆ. 6.67 ಇಂಚಿನ ಫುಲ್ ಹೆಚ್​ಡಿ+ ಅಮೋಲೆಡ್ ಡಿಸ್​ಪ್ಲೇ ಇರಲಿದೆ ಎಂಬ ಮಾತುಕೂಡ ಇದೆ.

ಇದನ್ನೂ ಓದಿ
Image
Vivo V25e: 64MP ಕ್ಯಾಮೆರಾ, ಬಲಿಷ್ಠ ಬ್ಯಾಟರಿ: ವಿವೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ
Image
Best Smartphones: ಬರೋಬ್ಬರಿ 8 ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಲ್ಲಿದೆ ಕಂಪ್ಲಿಟ್ ಡೀಟೇಲ್ಸ್​
Image
Android 13: ಆಂಡ್ರಾಯ್ಡ್ 13 ನಲ್ಲಿದೆ ವಿಶೇಷ ಆಯ್ಕೆ: ಈಗ ಆ್ಯಪ್​ಗಳ ಬಾಷೆಯನ್ನೂ ಬದಲಾಯಿಸಬಹುದು
Image
iPhone 14: ಸೆ. 7ಕ್ಕೆ ಐಫೋನ್ 14 ಸರಣಿ ಬಿಡುಗಡೆ: ಹುಬ್ಬೇರುವಂತೆ ಮಾಡಿದೆ ಇದರಲ್ಲಿರುವ 5 ಫೀಚರ್ಸ್

MIUI 13 ಮೂಲಕ ಆಂಡ್ರಾಯ್ಡ್ 12 ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆಯಂತೆ. 12GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯ ಇರಲಿದೆ. ಮೂಲಗಳ ಪ್ರಕಾರ ಇದು 5000mAh ನ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಹೊಂದಿರಲಿದೆ. ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇರಲಿದೆ. ಇನ್​ಡಿಸ್​ಪ್ಲೇ ಫಿಂಗರ್ ಪ್ರಿಂಟ್ ಅಳವಡಿಸಲಾಗಿದೆಯಂತೆ. ಇದರ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ