Best Smartphones: ಬರೋಬ್ಬರಿ 8 ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಲ್ಲಿದೆ ಕಂಪ್ಲಿಟ್ ಡೀಟೇಲ್ಸ್
Price Cut: ನೀವು ಹೊಸ ಸ್ಮಾರ್ಟ್ಫೋನ್ ಅನ್ನು ಆಫರ್ನಲ್ಲಿ ಕಡಿಮೆ ಬೆಲೆಗೆ ಖರೀದಿಸಬೇಕು ಎಂಬ ಪ್ಲಾನ್ನಲ್ಲಿದ್ದರೆ ಇದುವೇ ಸರಿಯಾದ ಸಮಯ. ಇಲ್ಲಿದೆ ನೋಡಿ ಬೆಲೆ ಕಡಿತಗೊಂಡಿರುವ ಫೋನುಗಳ ಪಟ್ಟಿ.
ಈ ಆಗಸ್ಟ್ ತಿಂಗಳು ಭಾರತದಲ್ಲಿ ಅನೇಕ ಸ್ಮಾರ್ಟ್ಫೋನ್ಗಳು (Smartphones) ಬಿಡುಗಡೆ ಆಗಿದೆ. ರೆಡ್ಮಿ (Redmi), ಸ್ಯಾಮ್ಸಂಗ್, ರಿಯಲ್ ಮಿ, ಇನ್ಫಿನಿಕ್ಸ್, ವಿವೋ ಕಂಪನಿಯ ಫೋನುಗಳು ಅನಾವರಣಗೊಂಡಿದೆ. ಇದು ಭರ್ಜರಿ ಸೇಲ್ ಕೂಡ ಕಾಣುತ್ತಿದೆ. ಇದರ ಜೊತೆಗೆ ಈ ತಿಂಗಳು ಬರೋಬ್ಬರಿ ಎಂಟು ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಸ್ಯಾಮ್ಸಂಗ್ (Samsung), ಒಪ್ಪೋ, ಒನ್ಪ್ಲಸ್, ವಿವೋ ಕಂಪಪನಿಯ ಫೋನಿಗಳ ಬೆಲೆಯನ್ನು ಕಡಿಮೆ ಮಾಡಿ ಮಾರಾಟ ಮಾಡಲಾಗುತ್ತಿದೆ. ನೀವು ಹೊಸ ಸ್ಮಾರ್ಟ್ಫೋನ್ ಅನ್ನು ಆಫರ್ನಲ್ಲಿ ಕಡಿಮೆ ಬೆಲೆಗೆ ಖರೀದಿಸಬೇಕು ಎಂಬ ಪ್ಲಾನ್ನಲ್ಲಿದ್ದರೆ ಇದುವೇ ಸರಿಯಾದ ಸಮಯ. ಹಾಗಾದರೆ ಬೆಲೆ ಕಡಿತಗೊಂಡಿರುವ ಫೋನುಗಳ ಯಾವುವು?, ಇಲ್ಲಿದೆ ನೋಡಿ ಕಂಪ್ಲಿಟ್ ಡೀಟೇಲ್ಸ್.
OnePlus Nord CE 2 Lite: ಈ 5G ಫೋನಿನ ಬೆಲೆಯನ್ನು 1,000 ರೂ. ನಷ್ಟು ಕಡಿತಗೊಳಿಸಿದೆ. ಇದು ಈ ವದರ್ಷ ಏಪ್ರಿಲ್‌ನಲ್ಲಿ ಎರಡು ರೂಪಾಂತರಗಳಲ್ಲಿ ಬಿಡುಗಡೆ ಆಗಿತ್ತ. ಇದರ 6GB ಮತ್ತು 8GB ಬೆಲೆ ಕ್ರಮವಾಗಿ 19,999 ರೂ. ಮತ್ತು 21,999 ರೂ. ಆಗಿದೆ. ಇದೀಗ ಬೆಲೆ ಕಡಿತದ ನಂತರ 6GB RAM ಮಾದರಿಯನ್ನು 18,999 ರೂ. ಗೆ ಖರೀದಿಸಬಹುದು. ಅ.ತೆಯೆ 8GB RAM ರೂಪಾಂತರವು ಈಗ 20,999 ರೂ. ಗೆ ಮಾರಾಟವಾಗುತ್ತದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ F42: ಗ್ಯಾಲಕ್ಸಿ F42 ಸ್ಮಾರ್ಟ್ಫೋನ್ ಬೆಲೆಯಲ್ಲಿ 3,000 ರೂ. ಗಳನ್ನು ಇಳಿಕೆ ಮಾಡಲಾಗಿದೆ. 6GB ಹಾಗೂ 8GB ಎರಡು ವೇರಿಯೆಂಟ್ನಲ್ಲಿ ಖರೀದಿಸಬಹುದು. 6GB RAM ಬೆಲೆ 17,999 ರೂ. ಆಗಿದೆ. ಇದರಲ್ಲಿ ಮೀಡಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅಳವಡಿಸಲಾಗಿದೆ. ಬಲಿಷ್ಠವಾದ ಬ್ಯಾಟರಿ, ಅತ್ಯುತ್ತಮ ಕ್ಯಾಮೆರಾ ಕೂಡ ನೀಡಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ A53: ಗ್ಯಾಲಕ್ಸಿ A53 ಇದು 5G ಬೆಂಬಲ ಪಡೆದುಕೊಂಡಿರುವ ಫೋನಾಗಿದ್ದು, 6GB ಹಾಗೂ 8GB ಎರಡು ವೇರಿಯೆಂಟ್ನಲ್ಲಿ ಖರೀದಿಸಬಹುದು. 34,999 ರೂ. ಗೆ ಲಾಂಚ್ ಆದ ಈ ಸ್ಮಾರ್ಟ್ಫೋನ್ ಈಗ 31,999 ರೂ. ಗೆ ನಿಮ್ಮದಾಗಿಸಬಹುದು.
ಸ್ಯಾಮ್ಸಂಗ್ ಗ್ಯಾಲಕ್ಸಿ A03: ಕಳೆದ ವರ್ಷ ಬಿಡುಗಡೆ ಆದ ಗ್ಯಾಲಕ್ಸಿ A03 10,499 ರೂ. ಗೆ ಖರೀದಿಸಬಹುದಿತ್ತು. ಇದೀಗ ಈ ಫೋನಿನ ಬೆಲೆಯಲ್ಲಿ ಕಡಿಮೆ ಮಾಡಲಾಗಿದ್ದು 9,514 ರೂ. ಗೆ ಮಾರಾಟ ಆಗುತ್ತಿದೆ. 3GB ಹಾಗೂ 4GB ಎರಡು ವೇರಿಯೆಂಟ್ನಲ್ಲಿ ಲಭ್ಯವಿದೆ. ನೀಲಿ, ಕಪ್ಪು ಮತ್ತು ಕೆಂಪು ಮೂರು ಬಣ್ಣಗಳಲ್ಲಿ ಈ ಸ್ಮಾರ್ಟ್ಫೋನ್ ಇದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ F22: ಗ್ಯಾಲಕ್ಸಿ F22 ಮೇಲೆ ಬರೋಬ್ಬರಿ 2000 ರೂ. ಗಳನ್ನು ಕಡಿಮೆ ಮಾಡಲಾಗಿದೆ. ಇದರ 4GB RAM + 64GB ಸ್ಟೋರೇಜ್ ಆಯ್ಕೆಯ ಈಗಿನ ಬೆಲೆ 10,499 ರೂ. ಮತ್ತು 6GB RAM + 128GB ಸ್ಟೋರೇಜ್ ಆಯ್ಕೆಯ ಬೆಲೆ 12,4999 ರೂ. ಆಗಿದೆ. ಇದು 6.4 ಇಂಚಿನ HD+ ಸೂಪರ್ ಅಮ್ಲೋಡ್ ಡಿಸ್ ಪ್ಲೇ ಹೊಂದಿದೆ.
ವಿವೋ V23e 5G: 8GB RAM + 128GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್ಫೋನ್ ಮೇಲೆ 1,000 ರೂ. ಗಳನ್ನು ಕಡಿಮೆ ಮಾಡಲಾಗಿದ್ದು, 24,990 ರೂ. ಗೆ ಮಾರಾಟ ಆಗುತ್ತಿದೆ. ಇದಕ್ಕೆ ಮೀಡಿಯಾಟೆಕ್ ಡೈಮೆನ್ಸಿಟಿ 810 ಚಿಪ್ಸೆಟ್ ಅಳವಡಿಸಲಾಗಿದೆ. ಬಲಿಷ್ಠ ಬ್ಯಾಟರಿ, ಉತ್ತಮ ಕ್ಯಾಮೆರಾ ಕೂಡ ನೀಡಲಾಗಿದೆ.
ವಿವೋ Y21T: ಈ ಸ್ಮಾರ್ಟ್ಫೋನ್ ಮೇಲೂ 1,000 ರೂ. ಕಡಿತ ಮಾಡಲಾಗಿದೆ. ಇದರ 4GB RAM + 64GB ಸ್ಟೋರೇಜ್ ಆಯ್ಕೆ ಈಗ 15,499 ರೂ. ಗೆ ನಿಮ್ಮದಾಗಿಸಬಹುದು. ಇದು ಕ್ವಾಲ್ಕಂ ಸ್ನಾಪ್ಡ್ರಾಗನ್ 680 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. 6.58 ಇಂಚಿನ ಫುಲ್ HD+ LCD ಡಿಸ್ ಪ್ಲೇ ನೀಡಲಾಗಿದೆ.
ಒಪ್ಪೋ ರೆನೊ 7 ಪ್ರೊ: ಅತ್ಯುತ್ತಮ ಕ್ಯಾಮೆರಾ ಕ್ವಾಲಿಟಿ ಹೊಂದಿರುವ ಈ ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 3,000 ರೂ. ಕಡಿಮೆ ಮಾಡಲಾಗಿದೆ. 39,999 ರೂ. ಗೆ ಲಾಂಚ್ ಆಗಿದ್ದ ಒಪ್ಪೋ ರೆನೊ 7 ಪ್ರೊ ಅನ್ನು ಈಗ ನೀವು 36,999 ರೂ. ಗೆ ಖರೀದಿಸಬಹುದು. ಇದು ಮೀಡಿಯಾಟೆಕ್ ಡೈಮೆನ್ಸಿಟಿ 1200 ಪ್ರೊಸೆಸರ್ ಹೊಂದಿದ್ದು, 50 ಮೆಗಾಫಿಕ್ಸೆಲ್ನ ಸೋನಿ IMX766 ಸೆನ್ಸಾರ್ನ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ.
Published On - 2:32 pm, Tue, 30 August 22