Android 13: ಆಂಡ್ರಾಯ್ಡ್ 13 ನಲ್ಲಿದೆ ವಿಶೇಷ ಆಯ್ಕೆ: ಈಗ ಆ್ಯಪ್​ಗಳ ಬಾಷೆಯನ್ನೂ ಬದಲಾಯಿಸಬಹುದು

ಇದೀಗ ಆಂಡ್ರಾಯ್ಡ್ 13 ನಲ್ಲಿರುವ ಫೀಚರ್ ಒಂದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದೇನೆಂದರೆ ಇದರಲ್ಲಿ ಎಲ್ಲ ಆ್ಯಪ್​ಗಳ ಬಾಷೆಯಲ್ಲಿ ಬದಲಾವಣೆ ಮಾಡಬಹುದಂತೆ.

Android 13: ಆಂಡ್ರಾಯ್ಡ್ 13 ನಲ್ಲಿದೆ ವಿಶೇಷ ಆಯ್ಕೆ: ಈಗ ಆ್ಯಪ್​ಗಳ ಬಾಷೆಯನ್ನೂ ಬದಲಾಯಿಸಬಹುದು
Android 13
Follow us
TV9 Web
| Updated By: Vinay Bhat

Updated on:Aug 30, 2022 | 1:10 PM

ಇತ್ತೀಚೆಗಷ್ಟೆ ಆಂಡ್ರಾಯ್ಡ್ ಹೊಸ ವರ್ಷನ್ 13 (Android 13) ಅನ್ನು ಬಿಡುಗಡೆ ಮಾಡಲಾಗತ್ತು. ಗೂಗಲ್ ಫಿಕ್ಸೆಲ್ ಹಾಗೂ ಆಯ್ದ ಸ್ಯಾಮ್​ಸಂಗ್ (Samsung) ಗ್ಯಾಲಕ್ಸಿ ಸ್ಮಾರ್ಟ್​ಫೋನ್​ಗಳಲ್ಲಿ ಆಂಡ್ರಾಯ್ಡ್ 13 ಕಾರ್ಯನಿರ್ವಹಿಸುತ್ತಿದೆ. ಪಿಕ್ಸೆಲ್ 4a ಮತ್ತು ಪಿಕ್ಸೆಲ್ 6a ಫೋನ್​ಗಳನ್ನು ಹೊಸ ಅಪ್ಡೇಟ್ ಬಂದಿದೆ. ಆಸಸ್, ನೋಕಿಯಾ, ಐಕ್ಯೂ, ಮೋಟೋರೊಲಾ, ಒನ್​ಪ್ಲಸ್, ಒಪ್ಪೋ, ರಿಯಲ್ ಮಿ (Realme), ಸೋನಿ, ಟೆಕ್ನೋ, ವಿವೋ, ಶವೋಮಿ ಸೇರಿದಂತೆ ಇತರೆ ಫೋನ್​ಗಳಲ್ಲಿ ಈ ವರ್ಷದ ಬಳಿಕ ಆಂಡ್ರಾಯ್ಡ್ 13 ಅಪ್ಡೇಟ್ ಬರಲಿದೆ. ಆಂಡ್ರಾಯ್ಡ್ 13 ನಲ್ಲಿ ಬಳಕೆದಾರರಿಗೆ ಸುಲಭವಾಗುವಂತಹ ಅನೇಕ ಆಯ್ಕೆಗಳಿವೆ ಎಂದು ಹೇಳಲಾಗಿದೆ.

ಇದೀಗ ಆಂಡ್ರಾಯ್ಡ್ 13 ನಲ್ಲಿರುವ ಫೀಚರ್ ಒಂದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದೇನೆಂದರೆ ಇದರಲ್ಲಿ ಎಲ್ಲ ಆ್ಯಪ್​ಗಳ ಬಾಷೆಯಲ್ಲಿ ಬದಲಾವಣೆ ಮಾಡಬಹುದಂತೆ. ನಿಮ್ಮ ಬಳಿ ಗೂಗಲ್ ಅಥವಾ ಕೆಲ ಸ್ಯಾಮ್​ಸಂಗ್ ಸ್ಮಾರ್ಟ್​​ಫೋನ್​ಗಳಿದ್ದರೆ ಅದರಲ್ಲಿ ಈ ಆಯ್ಕೆ ನೀಡಲಾಗಿದೆ. ಸ್ಯಾಮ್​ಸಂಗ್ ಫೋನ್​ನಲ್ಲಿ ನಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.

  • ಆಂಡ್ರಾಯ್ಡ್ 13 ಅಪ್ಡೇಟ್ ಆಗಿರುವ ನಿಮ್ಮ ಸ್ಯಾಮ್​ಸಂಗ್ ಮೊಬೈಲ್​ನಲ್ಲಿ ಸೆಟ್ಟಿಂಗ್ಸ್​ಗೆ ತೆರಳಿ.
  • ಕೆಳಗಡೆ ಬಂದರೆ General Management ಎಂಬ ಆಯ್ಕೆ ಕಾಣಿಸುತ್ತದೆ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಆ್ಯಪ್ ಲಾಂಗ್ವೇಜ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.
  • ಈಗ ನಿಮಗೆ ಭಾಷೆ ಬದಲಾಯಿಸಬೇಕಾದ ಒಂದು ಆ್ಯಪ್ ಅನ್ನು ಆರಿಸಿಕೊಳ್ಳಿ.
  • ನಂತರ ನಿಮಗೆ ಯಾವ ಭಾಷೆ ಬೇಕು ಅದನ್ನು ಆಯ್ಕೆ ಮಾಡಿ ಡನ್ ಕೊಟ್ಟುಬಿಡಿ.

ಗೂಗಲ್ ಫಿಕ್ಸೆಲ್ ಫೋನ್​ನಲ್ಲಿ ಹೇಗೆ?:

ಇದನ್ನೂ ಓದಿ
Image
iPhone 14: ಸೆ. 7ಕ್ಕೆ ಐಫೋನ್ 14 ಸರಣಿ ಬಿಡುಗಡೆ: ಹುಬ್ಬೇರುವಂತೆ ಮಾಡಿದೆ ಇದರಲ್ಲಿರುವ 5 ಫೀಚರ್ಸ್
Image
Vivo Y35: ಭಾರತದಲ್ಲಿ ವಿವೋದಿಂದ ಮತ್ತೊಂದು ಸ್ಮಾರ್ಟ್​​ಫೋನ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?
Image
ಎಂಜಿನ್ ಸೋರಿಕೆ: ನಾಸಾ ಆರ್ಟೆಮಿಸ್ I ಮೂನ್ ಮಿಷನ್ ಉಡಾವಣೆ ಮುಂದೂಡಿಕೆ
Image
Reliance AGM: ಅಲ್ಟ್ರಾ-ಹೈ ಫೈಬರ್ ಸ್ಪೀಡ್​ನೊಂದಿಗೆ ಜಿಯೋದಿಂದ ಬರುತ್ತಿದೆ ಹೊಸ ಹಾಟ್​​ಸ್ಪಾಟ್
  • ಗೂಗಲ್ ಪಿಕ್ಸೆಲ್ ಫೋನ್​ನಲ್ಲಿ ಸೆಟ್ಟಿಂಗ್ಸ್​ಗೆ ತೆರಳಿ.
  • ಸಿಸ್ಟಮ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಕೆಳಗಡೆ ಬಂದು Languages & Input ಸೆಲೆಕ್ಟ್ ಮಾಡಿಕೊಳ್ಳಿ.
  • ಅಲ್ಲಿ ಆ್ಯಪ್ Languages ಕ್ಲಿಕ್ ಮಾಡಿ ಬೇಕಾದ ಆ್ಯಪ್ ಅನ್ನು ಆಯ್ಕೆ ಮಾಡಿರಿ.
  • ನಂತರ ನಿಮಗೆ ಯಾವ ಭಾಷೆ ಬೇಕು ಅದನ್ನು ಆಯ್ಕೆ ಮಾಡಿ ಡನ್ ಕೊಟ್ಟುಬಿಡಿ.
  • ಇವುಗಳ ಜೊತೆಗೆ ಆಂಡ್ರಾಯ್ಡ್ 13 ನಲ್ಲಿ ಹೊಸ ಕಸ್ಟಮೈಸೇಶನ್, ಭದ್ರತೆ ವೈಶಿಷ್ಟ್ಯ ಹೊಂದಿದೆ. ಬಳಕೆದಾರರು ತಮ್ಮ ವಾಲ್‌ಪೇಪರ್‌ನ ಆಧಾರದ ಮೇಲೆ 16 ಪೂರ್ವನಿಗದಿ ಬಣ್ಣದ ಥೀಮ್‌ಗಳನ್ನು ಪಡೆಯುತ್ತಾರೆ ಮತ್ತು ಅವರ ಮುಖಪುಟ ಪರದೆಗಳು, ಐಕಾನ್‌ಗಳು ಮತ್ತು ಕ್ವಿಕ್ ಪ್ಯಾನೆಲ್‌ಗಳಿಗಾಗಿ 12 ಹೆಚ್ಚಿನ ಬಣ್ಣದ ಆಯ್ಕೆಗಳನ್ನು ಪಡೆಯುತ್ತಾರೆ.

ಇನ್ನು ಒಂದೇ ಸ್ಥಳದಲ್ಲಿ ಒಂದೇ ಗಾತ್ರದ ವಿಜೆಟ್‌ಗಳನ್ನು ಸೇರಿಸಿ, ಜಾಗವನ್ನು ಉಳಿಸಿ ಮತ್ತು ಸ್ವಚ್ಛವಾದ, ಹೆಚ್ಚು ಸಂಘಟಿತ ನೋಟವನ್ನು ರಚಿಸುವ ಮೂಲಕ ಬಳಕೆದಾರರು ತಮ್ಮ ಹೋಮ್ ಸ್ಕ್ರೀನ್‌ಗಳನ್ನು ಮತ್ತಷ್ಟು ಕಸ್ಟಮೈಸ್ ಮಾಡಬಹುದು. ರಿಂಗ್‌ಟೋನ್ ಸಂಪುಟಗಳು ಮತ್ತು ಕಂಪನ ತೀವ್ರತೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುವ ಮರುಸಂಘಟಿತ ಮೆನುಗಳೊಂದಿಗೆ ಧ್ವನಿ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

Published On - 1:10 pm, Tue, 30 August 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ