Airtel: ನೆಟ್​ಫ್ಲಿಕ್ಸ್​ಗೆ ಹಣ ಕಟ್ಟಬೇಕಿಲ್ಲ: ಏರ್​ಟೆಲ್​ನಿಂದ ಬಂತು ಹೊಸ ಪ್ರಿಪೇಯ್ಡ್ ಪ್ಲಾನ್

|

Updated on: Nov 26, 2023 | 1:53 PM

Netflix subscription: ಏರ್​ಟೆಲ್​ನ ಈ ಹೊಸ ಪ್ರಿಪೇಯ್ಡ್ ಯೋಜನೆ ನೆಟ್‌ಫ್ಲಿಕ್ಸ್ ಹೊರತುಪಡಿಸಿ, ರೂ. 1499 ಪ್ಲಾನ್‌ನೊಂದಿಗೆ ನೀವು ಯಾವ ಪ್ರಯೋಜನಗಳನ್ನು ಪಡೆಯುತ್ತೀರಿ? ಎಷ್ಟು ಸಮಯದ ವ್ಯಾಲಿಡಿಟಿ? ಈ ಕುರಿತ ಮಾಹಿತಿ ಇಲ್ಲಿದೆ.

Airtel: ನೆಟ್​ಫ್ಲಿಕ್ಸ್​ಗೆ ಹಣ ಕಟ್ಟಬೇಕಿಲ್ಲ: ಏರ್​ಟೆಲ್​ನಿಂದ ಬಂತು ಹೊಸ ಪ್ರಿಪೇಯ್ಡ್ ಪ್ಲಾನ್
Airtel Netflix
Follow us on

ನೀವು ಪ್ರತಿ ತಿಂಗಳು ನೆಟ್‌ಫ್ಲಿಕ್ಸ್ (Netflix) ಚಂದಾದಾರಿಕೆಯನ್ನು ಖರೀದಿಸಿ ವೀಕ್ಷಿಸುವವರಾಗಿದ್ದರೆ ಇಲ್ಲೊಂದು ಶುಭಸುದ್ದಿಯಿದೆ. ನೆಟ್‌ಫ್ಲಿಕ್ಸ್ ಚಂದಾದಾರಿಕೆಗೆ ಈಗ ನಿಮ್ಮ ವೆಚ್ಚ ಮತ್ತಷ್ಟು ಕಡಿಮೆಯಾಗಲಿವೆ. ಏಕೆಂದರೆ ಪ್ರಸಿದ್ಧ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಉತ್ತಮ ರೀಚಾರ್ಜ್ ಯೋಜನೆಯನ್ನು ತಂದಿದೆ. ಇದು ಡೇಟಾ, ಕರೆ ಮತ್ತು SMS ಪ್ರಯೋಜನಗಳನ್ನು ಹೊರತುಪಡಿಸಿ, ಉಚಿತ ನೆಟ್‌ಫ್ಲಿಕ್ಸ್‌ ಚಂದಾದಾರಿಕೆಯನ್ನು ನೀಡುತ್ತದೆ. ಈ ಯೋಜನೆಯ ಬೆಲೆ 1499 ರೂ.

ಏರ್​ಟೆಲ್​ನ ಈ ಹೊಸ ಪ್ರಿಪೇಯ್ಡ್ ಯೋಜನೆ ನೆಟ್‌ಫ್ಲಿಕ್ಸ್ ಹೊರತುಪಡಿಸಿ, ರೂ. 1499 ಪ್ಲಾನ್‌ನೊಂದಿಗೆ ನೀವು ಯಾವ ಪ್ರಯೋಜನಗಳನ್ನು ಪಡೆಯುತ್ತೀರಿ? ಎಷ್ಟು ಸಮಯದ ವ್ಯಾಲಿಡಿಟಿ? ಈ ಕುರಿತ ಮಾಹಿತಿ ಇಲ್ಲಿದೆ.

ಏರ್‌ಟೆಲ್ 1499 ರೂ. ಯೋಜನೆ ವಿವರಗಳು

ಏರ್‌ಟೆಲ್​ನ 1499 ರೂ. ಯೋಜನೆಯಲ್ಲಿ ನೀವು ಪ್ರತಿದಿನ 3 GB ಹೈ ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ, ಇದರೊಂದಿಗೆ ಅನಿಯಮಿತ ಉಚಿತ ಕರೆ ಮತ್ತು ಪ್ರತಿದಿನ 100 SMS ಗಳ ಪ್ರಯೋಜನವನ್ನು ಪಡೆಯಬಹುದು. 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಡೇಟಾ, ಕರೆ ಮತ್ತು ಎಸ್‌ಎಂಎಸ್‌ಗಳ ಹೊರತಾಗಿ, ಈ ಪ್ಲಾನ್‌ನೊಂದಿಗೆ ನೀವು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಆನಂದಿಸಬಹುದು. ನೀವು OTT ಪ್ರೇಮಿಯಾಗಿದ್ದರೆ ಈ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಬೇಸಿಕ್‌ಗೆ ಉಚಿತ ಪ್ರವೇಶವನ್ನು ಪಡೆಯಬಹುದು.

ಇದನ್ನೂ ಓದಿ
ಚಾರ್ಜ್ ಫುಲ್ ಮಾಡಿ ಉಪಯೋಗಿಸಿ: ಹೊಸ ಫೋನ್ ಖರೀದಿಸಿದಾಗ ಹೀಗೆ ಹೇಳೋದು ಯಾಕೆ?
ಫೋನ್ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು: ಈ ಕೋಡ್‌ಗಳಿಂದ ತಿಳಿಯಿರಿ
ಅದ್ಭುತ ಕ್ಯಾಮೆರಾ: ಹಾನರ್​ನಿಂದ 100, 100 ಪ್ರೊ ಸ್ಮಾರ್ಟ್​ಫೋನ್ ಬಿಡುಗಡೆ
ಗೂಗಲ್ ಪೇಯಿಂದ ಎಚ್ಚರಿಕೆ: ಈ ಆ್ಯಪ್ ಬಳಸುತ್ತಿದ್ದರೆ ತಕ್ಷಣ ಡಿಲೀಟ್ ಮಾಡಿ

ಭಾರತಕ್ಕೆ ಬಂತು ಸ್ಯಾಮ್​ಸಂಗ್​ನ ಬಜೆಟ್ ಬೆಲೆಯ ಬಂಪರ್ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?

ಇದಲ್ಲದೆ, ನೀವು 5G ಸ್ಮಾರ್ಟ್‌ಫೋನ್ ಹೊಂದಿದ್ದರೆ ಮತ್ತು ನೀವು ಏರ್‌ಟೆಲ್‌ನ 5G ಸೇವೆಗಳು ಲಭ್ಯವಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಈ ಯೋಜನೆಯೊಂದಿಗೆ ಅನಿಯಮಿತ 5G ಡೇಟಾವನ್ನು ಉಪಯೋಗಿಸಬಹುದು. ಈ ಯೋಜನೆಯು ನಿಮಗೆ Apollo 24/7 ವಲಯ ಸದಸ್ಯತ್ವವನ್ನು ಮತ್ತು Wynk ಸಂಗೀತಕ್ಕೆ ಉಚಿತ ಪ್ರವೇಶವನ್ನು ಕೂಡ ನೀಡುತ್ತದೆ.

ನೆಟ್‌ಫ್ಲಿಕ್ಸ್’ನ ಮೂಲ ಚಂದಾದಾರಿಕೆ ಯೋಜನೆಯ ಮಾಸಿಕ ಬೆಲೆ ರೂ. 199 ಆಗಿದೆ. ಇಲ್ಲಿ ನೀವು ಏರ್​ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ನೆಟ್‌ಫ್ಲಿಕ್ಸ್ ಪ್ರಯೋಜನಗಳನ್ನು ಪಡೆಯಬಹುದು. ಅಪ್ಲಿಕೇಶನ್‌ನ, ಡಿಸ್ಕವರ್ ಥ್ಯಾಂಕ್ಸ್ ಬೆನಿಫಿಟ್ ಪುಟದಲ್ಲಿ ನೆಟ್‌ಫ್ಲಿಕ್ಸ್ ಬೆನಿಫಿಟ್ ಆಯ್ಕೆಯನ್ನು ನೋಡುತ್ತೀರಿ. ಇಲ್ಲಿ ಕ್ಲೈಮ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ಈ ಯೋಜನೆಯೊಂದಿಗೆ ಲಭ್ಯವಿರುವ ನೆಟ್‌ಫ್ಲಿಕ್ಸ್ ಪ್ರಯೋಜನವು 84 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ