ಟೆಲಿಕಾಂ ಮಾರುಕಟ್ಟೆಯಲ್ಲಿ ಪುನಃ ನಂಬರ್ ಒನ್ ಸ್ಥಾನಕ್ಕೇರಲು ಭಾರ್ತಿ ಏರ್ಟೆಲ್ (Bharti Airtel) ಹರಸಾಹಸ ಪಡುತ್ತಿದೆ. ರಿಲಯನ್ಸ್ ಜಿಯೋವನ್ನು (JIO) ಕೆಳಗಿಳಿಸಿ ಅಗ್ರಸ್ಥಾನಕ್ಕೇರಲು ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ನಡುವೆ ಇದೀಗ ತನ್ನ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ನೀಡಿದೆ. ಅದುವೇ ಮಿಸ್ಡ್ ಕಾಲ್ ಅಲರ್ಟ್ (Smart Missed Call Alerts). ಹೌದು, ಭಾರ್ತಿ ಏರ್ಟೆಲ್ ಇದೀಗ ಸ್ಮಾರ್ಟ್ ಮಿಸ್ಡ್ ಕಾಲ್ ಅಲರ್ಟ್ಸ್ ವೈಶಿಷ್ಟ್ಯತೆಯನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ಮಾದರಿಯಲ್ಲಿ ಇನ್ನು ಮುಂದೆ ಏರ್ಟೆಲ್ ಬಳಕೆದಾರರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಹೆಸರೇ ಸೂಚಿಸುವಂತೆ ನೀವು ತಪ್ಪಿಸಿಕೊಂಡಿರುವ ಕರೆಗಳ ಬಗ್ಗೆ ಇದು ಮಾಹಿತಿ ನೀಡಲಿದೆ. ಅಂದರೆ ಬಳಕೆದಾರರು ನೆಟ್‌ವರ್ಕ್ ಕವರೇಜ್ ಪ್ರದೇಶದ ಹೊರಗಿರುವಾಗ ಕರೆಗಳು ಬಂದಿದ್ದರ ಅದರ ಬಗ್ಗೆ ಮಾಹಿತಿ ನೀಡಲಿದೆ.
ಈ ವೈಶಿಷ್ಟ್ಯತೆಯ ಸೇರ್ಪಡೆಯಿಂದಾಗಿ ಏರ್ಟೆಲ್ ಬಳಕೆದಾರರು ಯಾವುದೇ ಕರೆಗಳು ತಪ್ಪಿತಲ್ಲಾ ಎಂದು ಚಿಂತೆ ಮಾಡುವ ಅಗತ್ಯವಿರುವುದಿಲ್ಲ. ಈ ಸೌಲಭ್ಯವು ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಲಭ್ಯವಿದೆ. ಹಾಗೆಯೆ ಈ ಸೌಲಭ್ಯವನ್ನು ಪಡೆಯಲು ಯಾವುದೇ ನಿಬಂಧನೆ ಇರುವುದಿಲ್ಲ. ಏರ್ಟೆಲ್ ಟೆಲಿಕಾಂ ಪರಿಚಯಿಸಿರುವ ಮಿಸ್ಡ್ ಕಾಲ್ ಅಲರ್ಟ್ ಅನ್ನು ನೋಡಬೇಕಾದರೆ ನೀವು ನೀವು ಏರ್ಟೆಲ್ ಥ್ಯಾಂಕ್ಸ್ ಆ್ಯಪ್‌ಗೆ ಲಾಗ್ ಇನ್ ಆಗಬೇಕಾಗುತ್ತದೆ. ನಂತರ ನಿಮ್ಮ ಕಾಲ್ ಡಿಟೇಲ್ಸ್ ನೋಡುವುದಕ್ಕೆ ಈ ಫೀಚರ್ಸ್ ನಿಮಗೆ ಉಪಯುಕ್ತವಾಗಿರುತ್ತದೆ.
ಸತ್ತ ನಂತರ ನಿಮ್ಮ ಸೋಷಿಯಲ್ ಮೀಡಿಯಾ ಏನಾಗುತ್ತದೆ ಗೊತ್ತೇ?: ಇಲ್ಲಿದೆ ನೋಡಿ ಮಾಹಿತಿ
ಇದುವರೆಗೆ ಗ್ರಾಹಕರ ಸ್ಮಾರ್ಟ್ ಫೋನ್ ಸ್ವಿಚ್ ಆಫ್ ಆಗಿದ್ದರೆ ಅಥವಾ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದರೆ ಮತ್ತು ನಿಮಗೆ ಯಾರಾದರೂ ಕರೆ ಮಾಡಿದರೆ ನೀವು ಕರೆ ಅಥವಾ ಮೆಸೇಜನ್ನು ಸ್ವೀಕರಿಸುತ್ತಿರಲಿಲ್ಲ. ಆದರೆ, ಈಗ ನೀವು ಫೋನನ್ನು ಸ್ವಿಚ್ ಆನ್ ಮಾಡಿದಾಗ, ನೀವು ನೆಟ್ವರ್ಕ್ ಇರುವ ಪ್ರದೇಶಕ್ಕೆ ಬಂದಾಗ ಎಸ್ಎಂಎಸ್ ಮೂಲಕ ನೀವು ತಪ್ಪಿ ಹೋದ ಕರೆ ಬಗ್ಗೆ ಮಾಹಿತಿ ಪಡೆಯಲಿದ್ದೀರಿ.
ಇಷ್ಟೇ ಅಲ್ಲದೇ, ಅಂತರಾಷ್ಟ್ರೀಯ ಅಥವಾ ರಾಷ್ಟ್ರೀಯ ರೋಮಿಂಗ್ ನಲ್ಲಿ ಇರುವ ಸಂದರ್ಭದಲ್ಲಿಯೂ ಈ ಸೇವೆಯನ್ನು ಪಡೆಯಬಹುದಾಗಿದೆ. ಪ್ರಸ್ತುತ ಎಲ್ಲಾ ಏರ್ಟೆಲ್ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರು ಈ ಹೊಸ ಫೀಚರ್ಸ್ ಅನ್ನು ಬಳಸುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಬಳಸುತ್ತಿರುವ ಏರ್ಟೆಲ್ ಸಂಖ್ಯೆಯು ಮಾನ್ಯವಾದ ವಾಯ್ಸ್ ಕಾಲ್ ಪ್ಲಾನ್ ಅನ್ನು ಹೊಂದಿರವೇಕಾಗುತ್ತದೆ. ಇದಲ್ಲದೆ ನೀವು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ