AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯ ದಿನದ ಪ್ರಯುಕ್ತ ಫ್ಲಿಪ್‌ಕಾರ್ಟ್​​ನಲ್ಲಿ ಬಿಗ್​​ ಆಫರ್, ಶೇ. 80ರಷ್ಟು ರಿಯಾಯಿತಿ ​​​​​

ಫ್ಲಿಪ್‌ಕಾರ್ಟ್ ಬಿಗ್​ ಆಫರ್​ ಹಾಗೂ ಭಾರೀ ರಿಯಾಯಿತಿಯನ್ನು ನೀಡಿದ್ದಾರೆ. ಈಗಾಗಲೇ ಅಮೆಜಾನ್​ನಲ್ಲೂ ಬಿಗ್​ ಸೇಲ್​​ ಬಿಡುಗಡೆ ಮಾಡಲಾಗಿದೆ. ಫ್ಲಿಪ್‌ಕಾರ್ಟ್ ಸ್ವಾತಂತ್ರ್ಯ ದಿನದ ಪ್ರಯುಕ್ತ ಶೇಕಾಡ 80ರಷ್ಟು ರಿಯಾಯಿತಿಯನ್ನು ನೀಡಲಾಗಿದೆ. ಯಾವುದಕ್ಕೆಲ್ಲ ರಿಯಾಯಿತಿ ನೀಡಲಾಗಿದೆ.

ಸ್ವಾತಂತ್ರ್ಯ ದಿನದ ಪ್ರಯುಕ್ತ ಫ್ಲಿಪ್‌ಕಾರ್ಟ್​​ನಲ್ಲಿ ಬಿಗ್​​ ಆಫರ್, ಶೇ. 80ರಷ್ಟು ರಿಯಾಯಿತಿ ​​​​​
ಅಕ್ಷಯ್​ ಪಲ್ಲಮಜಲು​​
|

Updated on: Aug 06, 2024 | 4:46 PM

Share

ಇಂದಿನಿಂದ ಫ್ಲಿಪ್‌ಕಾರ್ಟ್​​ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಗ್​​ ಸೇಲ್ ನಡೆಯುತ್ತಿದೆ. ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತಿದೆ. ಇದೀಗ ಅಮೆಜಾನ್​​​ ಕೂಡ ಆರ್ಕಷಕ ಆಫರ್​ಗಳನ್ನು ನೀಡಿದೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಎರಡು ಮಧ್ಯೆ ರಿಯಾಯಿತಿಯಲ್ಲಿ ಭಾರೀ ಪೈಪೋಟಿ ನಡೆದಿದೆ.

ಹಲವಾರು ಜನಪ್ರಿಯ ಸ್ಮಾರ್ಟ್‌ಫೋನ್​​ಗಳಿಗೆ ಆಫರ್

ಐಫೋನ್ 15

Samsung Galaxy S23 ಮತ್ತು Galaxy S23 FE

Vivo T3 5G

ಮೊಟೊರೊಲಾ ಎಡ್ಜ್ 50 ಫ್ಯೂಷನ್

ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ರಿಯಾಯಿತಿ

ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಕ್ಯಾಮೆರಾಗಳು ಸೇರಿದಂತೆ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಶೇಕಾಡ 80ರಷ್ಟು ರಿಯಾಯಿತಿಯನ್ನು ನೀಡಲಾಗಿದೆ. ಫ್ಲಿಪ್‌ಕಾರ್ಟ್ ಆಹಾರ ಮತ್ತು ಕ್ರೀಡಾ ವಸ್ತುಗಳು, ಪೀಠೋಪಕರಣಗಳು ಮತ್ತು ಮನೆಯ ಅಗತ್ಯ ವಸ್ತುಗಳ ಮೇಲೆ 50% ರಿಂದ 80% ರವರೆಗಿನ ರಿಯಾಯಿತಿ ಹಾಗೂ ಕಡಿಮೆ ಬೆಲೆಗೆ ನೀಡುತ್ತಿದೆ.

ಇದನ್ನೂ ಓದಿ: ಪ್ರೈಮ್ ಗ್ರಾಹಕರಿಗೆ ಅಗತ್ಯ ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ

ಕೈಗೆಟುಕುವ ಬೆಲೆಯಲ್ಲಿ ಉತ್ಪನ್ನಗಳನ್ನು ಸೇಲ್ ಮಾಡಲಾಗುತ್ತದೆ. ಹಾಗೂ ಫ್ಲಿಪ್‌ಕಾರ್ಟ್ ತಮ್ಮ ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳನ್ನು ಬಳಸಿಕೊಂಡು ಮಾಡಿದ ಖರೀದಿಗಳ ಮೇಲೆ ಶೇಕಾದ 10ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ICICI ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಯೆಸ್ ಬ್ಯಾಂಕ್​ಗಳೊಂದಿಗೆ ಫ್ಲಿಪ್‌ಕಾರ್ಟ್ ಪಾಲುದಾರಿಕೆ ಹೊಂದಿದ್ದು ಈ ಮೂಲಕ ಕ್ರೆಡಿಟ್ ಕಾರ್ಡ್‌ಗಳು ಮತ್ತು EMIಗಳಿಗೆ ರಿಯಾಯಿತಿ ಬೆಲೆಯಲ್ಲಿ ನೀಡಲಾಗುತ್ತದೆ. ಗ್ರಾಹಕರು ಯಾವುದೇ ವೆಚ್ಚದ EMI ಆಯ್ಕೆಗಳನ್ನು ಮತ್ತು ಆಯ್ದ ಉತ್ಪನ್ನಗಳ ಮೇಲೆ ವಿನಿಮಯ ಕೊಡುಗೆಗಳನ್ನು ಸಹ ಪಡೆಯಬಹುದು.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ