ಬ್ಲೂಟೂತ್ ಹೆಡ್​ಫೋನ್ ಸ್ಪೋಟ, ಯುವಕ ಸಾವು..!

| Updated By: ಝಾಹಿರ್ ಯೂಸುಫ್

Updated on: Aug 07, 2021 | 10:25 PM

ಸ್ಮಾರ್ಟ್​ಫೋನ್​ ಸ್ಪೋಟಗಳು ಹೊಸದೇನಲ್ಲ. ಈ ಹಿಂದೆ ಚೀನಾ ಮೇಡ್ ಮೊಬೈಲ್​ಗಳು ಹಾಗೂ ಸ್ಯಾಮ್​ಸಂಗ್​ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್​ಫೋನ್​ಗಳು ಸ್ಪೋಟಗೊಂಡಿದ್ದವು.

ಬ್ಲೂಟೂತ್ ಹೆಡ್​ಫೋನ್ ಸ್ಪೋಟ, ಯುವಕ ಸಾವು..!
Bluetooth Headphone
Follow us on

ಸ್ಮಾರ್ಟ್​ಫೋನ್ ಬ್ಲೂಟೂತ್ ಹೆಡ್​ಫೋನ್ ಸ್ಪೋಟಗೊಂಡು ಯುವಕನೊಬ್ಬ ಮೃತಪಟ್ಟ ಘಟನೆ ರಾಜಸ್ಥಾನದ ಚೌಮು ಪಟ್ಟಣದ ಉದೈಪುರಿಯಾ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು 28 ವರ್ಷದ ರಾಕೇಶ್ ಕುಮಾರ್. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿದ್ದ ರಾಕೇಶ್ ಬ್ಲೂಟೂತ್ ಹೆಡ್​ಫೋನ್ ಕಿವಿಗೆ ಹಾಕಿಕೊಂಡಿದ್ದರು. ಇದೇ ವೇಳೆ ಹೆಡ್​ಫೋನ್ ಚಾರ್ಜ್ ಕಡಿಮೆಯಾಗಿದ್ದರಿಂದ ಚಾರ್ಜಿಂಗ್ ಪ್ಲಗ್​ಗೆ ಸಂಪರ್ಕಿಸಿದ್ದಾನೆ. ಈ ವೇಳೆ ಹೆಡ್​ಫೋನ್ ಸ್ಪೋಟಗೊಂಡು ಯುವಕ ಪ್ರಜ್ಞಾಹೀನನಾಗಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾಕೇಶ್ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿದ್ದಿವಿನಾಯಕ ಆಸ್ಪತ್ರೆಯ ಡಾ.ಎಲ್.ಎನ್.ರುಂಡ್ಲ, ಯುವಕನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಈ ಹಿಂದೆ OnePlus Nord 2 ಸ್ಮಾರ್ಟ್ ಫೋನಿನ ಬ್ಯಾಟರಿ ಕೂಡ ಸ್ಪೋಟಗೊಂಡಿತು. ಮಹಿಳೆಯೊಬ್ಬರು ಬೈಕ್ ಚಲಾಯಿಸುತ್ತಿದ್ದಾಗ ತನ್ನ ಫೋನ್ ಸ್ಫೋಟಗೊಂಡಿದೆ ಎಂದು ತಿಳಿಸಿದ್ದರು. ಈ ಸುದ್ದಿ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಒನ್‌ಪ್ಲಸ್ ಕಂಪೆನಿ ಈ ಸಮಸ್ಯೆಯನ್ನು ಒಪ್ಪಿಕೊಂಡಿತ್ತು. ಅಲ್ಲದೆ ಫೋನ್‌ನ ಬ್ಯಾಟರಿ ಏಕೆ ಸ್ಫೋಟಗೊಂಡಿದೆ ಎಂಬುದನ್ನು ಪತ್ತೆ ಹಚ್ಚುವುದಾಗಿ ತಿಳಿಸಿತ್ತು.

ಇನ್ನು ಸ್ಮಾರ್ಟ್​ಫೋನ್​ ಸ್ಪೋಟಗಳು ಹೊಸದೇನಲ್ಲ. ಈ ಹಿಂದೆ ಚೀನಾ ಮೇಡ್ ಮೊಬೈಲ್​ಗಳು ಹಾಗೂ ಸ್ಯಾಮ್​ಸಂಗ್​ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್​ಫೋನ್​ಗಳು ಸ್ಪೋಟಗೊಂಡಿದ್ದವು. ಇದೀಗ ಬ್ಲೂಟೂತ್ ಹೆಡ್​ಫೋನ್ ಸ್ಪೋಟಗೊಂಡಿರುವ ವರದಿಯಾಗಿದೆ. ಹೀಗಾಗಿ ಯಾವುದೇ ಮೊಬೈಲ್​ನ್ನು ಚಾರ್ಜಿಂಗ್ ಹಾಕಿ ಬಳಸದಿರಿ. ಅದರಲ್ಲೂ ಚಾರ್ಜಿಂಗ್ ವೇಳೆ ಮೊಬೈಲ್​ ಹೆಡ್​ಫೋನ್ ಅನ್ನು ಬಳಸುವುದು ಅಪಾಯಕಾರಿ. ಅದರ ತಾಜಾ ಉದಾಹರಣೆ ರಾಕೇಶ್ ಕುಮಾರ್ ಮೃತಪಟ್ಟಿರುವುದು. ಹೀಗಾಗಿ ಸ್ಮಾರ್ಟ್​ಫೋನ್ ಬಳಕೆ ವೇಳೆ ಸಾಧ್ಯವಾದಷ್ಟು ಎಚ್ಚರದಿರುವುದು ಉತ್ತಮ.

ಇದನ್ನೂ ಓದಿ: Neeraj Chopra: ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತಕ್ಕಿದು 2ನೇ ಚಿನ್ನದ ಪದಕ

ಇದನ್ನೂ ಓದಿ: Tokyo Olympics 2020: ಒಲಿಂಪಿಕ್ಸ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಸಾಧನೆ ಮಾಡಿದ ಭಾರತ

ಇದನ್ನೂ ಓದಿ: Neeraj Chopra: ಆಸ್ಪತ್ರೆಯ ಬೆಡ್​ನಿಂದ ಚಿನ್ನದ ಬೇಟೆ ತನಕ: ನೀರಜ್ ಚೋಪ್ರಾ ಎಂಬ ಗೋಲ್ಡನ್ ಸ್ಟಾರ್

 

(bluetooth headphone blast while charging, 28 year old boy died)