Tokyo Olympics 2020: ಒಲಿಂಪಿಕ್ಸ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಸಾಧನೆ ಮಾಡಿದ ಭಾರತ

Tokyo Olympics 2020: ಒಲಿಂಪಿಕ್ಸ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಸಾಧನೆ ಮಾಡಿದ ಭಾರತ
Tokyo Olympics 2020

Neeraj Chopra Gold Medal: 13 ವರ್ಷಗಳ ಬಳಿಕ ಇದೇ ಮೊದಲ ಬಾರಿ ಒಲಿಂಪಿಕ್ಸ್​ನಲ್ಲಿ ಭಾರತ ಚಿನ್ನದ ಪದಕಕ್ಕೆ ಕೊರೊಳೊಡ್ಡಿದೆ. ಈ ಹಿಂದೆ 2008ರಲ್ಲಿ ಅಭಿನವ್ ಬಿಂದ್ರಾ 19ಎಂ ರೈಫಲ್ಸ್ ಶೂಟಿಂಗ್​ನಲ್ಲಿ ಭಾರತಕ್ಕೆ ಚೊಚ್ಚಲ ಸ್ವರ್ಣ ಪದಕ ತಂದುಕೊಟ್ಟಿದ್ದರು.

TV9kannada Web Team

| Edited By: Zahir PY

Aug 07, 2021 | 6:45 PM

ಒಲಿಂಪಿಕ್ಸ್ ( Olympics) ಕ್ರೀಡಾಕೂಟ ಆರಂಭವಾಗಿ 124 ವರ್ಷಗಳು ಕಳೆದಿವೆ. ಕಳೆದ ಒಂದು ಶತಮಾನದಿಂದಲೂ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದರೂ, ಪ್ರಶಸ್ತಿ ಪಟ್ಟಿಯಲ್ಲಿ ಮಹತ್ವದ ಸಾಧನೆ ಮೆರೆಯಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಇದುವೆರೆಗೆ ಭಾರತ ಗೆದ್ದ ಚಿನ್ನದ ಪದಕ ಸಂಖ್ಯೆ ಕೇವಲ ಒಂದು ಆಗಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಮತ್ತೊಮ್ಮೆ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ. ಈ ಪದಕದೊಂದಿಗೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತದ ಪದಕದ ಸಂಖ್ಯೆ 7ಕ್ಕೇರಿದೆ. ಇದರೊಂದಿಗೆ ಭಾರತ ಒಲಿಂಪಿಕ್ಸ್​ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದಂತಾಗಿದೆ.

ಈ ಹಿಂದೆ ಲಂಡನ್ ಒಲಿಂಪಿಕ್ಸ್​ನಲ್ಲಿ ಭಾರತ 6 ಪದಕ ಗೆದ್ದಿರೋದು ಶ್ರೇಷ್ಠ ಪ್ರದರ್ಶನವಾಗಿತ್ತು. ಆ ವೇಳೆ ಎರಡು ಬೆಳ್ಳಿ ಪದಕ ಹಾಗೂ 4 ಕಂಚಿನ ಪದಕಗಳೊಂದಿಗೆ ಭಾರತೀಯ ಕ್ರೀಡಾಪಟುಗಳು ಹಿಂತಿರುಗಿದ್ದರು. ಆದರೆ ಈ ಬಾರಿ ಕ್ರೀಡಾಕೂಟ ಮುಕ್ತಾಯಕ್ಕೂ ಮುನ್ನವೇ ಭಾರತ 7 ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಇದರಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಹಾಗೂ ರಸ್ಲಿಂಗ್‌ನಲ್ಲಿ ರವಿಕುಮಾರ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಹಾಗೆಯೇ ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು, ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್, ಪುರುಷರ ಹಾಕಿ ತಂಡ, ಕುಸ್ತಿಪಟು ಬಜರಂಗ್ ಪುನಿಯಾ ಕಂಚಿನ ಪದಕ ಗೆದ್ದಿದ್ದಾರೆ. ಅಂದರೆ ಒಟ್ಟಾರೆ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕದೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 47ನೇ ಸ್ಥಾನ ಅಲಂಕರಿಸಿದೆ.

ಇನ್ನು 13 ವರ್ಷಗಳ ಬಳಿಕ ಇದೇ ಮೊದಲ ಬಾರಿ ಒಲಿಂಪಿಕ್ಸ್​ನಲ್ಲಿ ಭಾರತ ಚಿನ್ನದ ಪದಕಕ್ಕೆ ಕೊರೊಳೊಡ್ಡಿದೆ. ಈ ಹಿಂದೆ 2008ರಲ್ಲಿ ಅಭಿನವ್ ಬಿಂದ್ರಾ 19ಎಂ ರೈಫಲ್ಸ್ ಶೂಟಿಂಗ್​ನಲ್ಲಿ ಭಾರತಕ್ಕೆ ಚೊಚ್ಚಲ ಸ್ವರ್ಣ ಪದಕ ತಂದುಕೊಟ್ಟಿದ್ದರು. ಇದಾಗಿ 2 ಒಲಿಂಪಿಕ್ಸ್ ಕಳೆದರೂ ಮತ್ತೆ ಭಾರತ ಚಿನ್ನದ ಪದಕವನ್ನು ಗೆದ್ದುಕೊಂಡಿರಲಿಲ್ಲ. ಇದೀಗ ನೀರಜ್ ಚೋಪ್ರಾ ಚಿನ್ನದ ಬೇಟೆಯೊಂದಿಗೆ ಪದಕ ಪಟ್ಟಿಯಲ್ಲಿ ಭಾರತದ ಸ್ವರ್ಣ ಪದಕದ ಖಾತೆ ತೆರೆದಿದ್ದಾರೆ.

ಇದನ್ನೂ ಓದಿ: Neeraj Chopra Gold: ಕೂದಲೆಳೆಯ ಅಂತರದಲ್ಲಿ ತಪ್ಪಿದ ಚಿನ್ನದ ಹುಡುಗನ ವಿಶ್ವ ದಾಖಲೆ

ಇದನ್ನೂ ಓದಿ: Bajrang Punia: ಕಂಚಿನ ಪದಕಕ್ಕೆ ಕೊರೊಳೊಡ್ಡುತ್ತಿದ್ದಂತೆ ಬಜರಂಗ್​ಗೆ ಕರೆ ಮಾಡಿದ ಪ್ರಧಾನಿ ಮೋದಿ

(Tokyo Olympics medal haul India’s largest at any Games)

Follow us on

Most Read Stories

Click on your DTH Provider to Add TV9 Kannada