AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೈಕ್ರೋಮ್ಯಾಕ್ಸ್​ IN 2B ಸ್ಮಾರ್ಟ್​ಫೋನನ್ನು ಕೇವಲ 549 ರೂ. ಗೆ ಖರೀದಿಸುವ ಅವಕಾಶ

ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಈ ಸ್ಮಾರ್ಟ್​ಫೋನ್ ಮಾರಾಟ ಆಗುತ್ತಿದ್ದು, 4GB RAM ಮತ್ತು 64GB ಶೇಖರಣಾ ಆಯ್ಕೆಗೆ 10,499 ರೂ. ಆದರೆ, ಆಫರ್​ನಲ್ಲಿ ಇದನ್ನು 7,999 ರೂ. ಗೆ ಖರೀದಿಸಬಹುದು.

ಭಾರತದ ಮೈಕ್ರೋಮ್ಯಾಕ್ಸ್​ IN 2B ಸ್ಮಾರ್ಟ್​ಫೋನನ್ನು ಕೇವಲ 549 ರೂ. ಗೆ ಖರೀದಿಸುವ ಅವಕಾಶ
Micromax In 2b
TV9 Web
| Edited By: |

Updated on: Aug 08, 2021 | 1:36 PM

Share

ಒಂದು ವಾರದ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆದ ದೇಶೀಯ ಬ್ರ್ಯಾಂಡ್ ಮೈಕ್ರೋಮ್ಯಾಕ್ಸ್ (Micromax)​ ತನ್ನ ಇನ್ ಆವೃತ್ತಿಯಲ್ಲಿ ಮೈಕ್ರೋಮ್ಯಾಕ್ಸ್​ IN 2B (Micromax In 2b) ಸ್ಮಾರ್ಟ್​ಫೋನ್ ಅನ್ನು ಲಾಂಚ್ ಮಾಡಿತ್ತು. ಈಗ ಈ ಫೋನ್ ಖರೀದಿಗೆ ಲಭ್ಯವಿದ್ದು ಬಂಪರ್ ಆಫರ್​ನೊಂದಿಗೆ ನಿಮ್ಮದಾಗಿಸುವ ಅವಕಾಶವಿದೆ. ಇದು ಮೈಕ್ರೋಮ್ಯಾಕ್ಸ್ ಇನ್ 1b ಯ ಮುಂದಿನ ಆವೃತ್ತಿಯಾಗಿದೆ. ಹೊಸ ಇನ್ 2 ಬಿ ಸ್ಮಾರ್ಟ್​ಫೋನ್ ಬಜೆಟ್ ಬೆಲೆಯ ಫೋನ್ ಆಗಿದ್ದು ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಈ ಸ್ಮಾರ್ಟ್​ಫೋನ್ ಮಾರಾಟ ಆಗುತ್ತಿದ್ದು, 4GB RAM ಮತ್ತು 64GB ಶೇಖರಣಾ ಆಯ್ಕೆಗೆ 10,499 ರೂ. ಆದರೆ, ಆಫರ್​ನಲ್ಲಿ ಇದನ್ನು 7,999 ರೂ. ಗೆ ಖರೀದಿಸಬಹುದು. 6GB RAM ಮತ್ತು 64GB ಸ್ಟೋರೇಜ್ ಮಾದರಿಗೆ 11,999 ರೂ. ಆಗಿದ್ದು ಆಫರ್​ನಲ್ಲಿ ಕೇವಲ 8,999 ರೂ. ಗೆ ಲಭ್ಯವಾಗುತ್ತಿದೆ. ಅಷ್ಟೇ ಅಲ್ಲದೆ ವಿಶೇಷವಾಗಿ ಈ ಫೋನಿನ ಮೇಲೆ 8,450 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ನೀಡಲಾಗಿದೆ. ಅಷ್ಟೂ ಮೊತ್ತಕ್ಕೆ ನಿಮ್ಮ ಹಳೆಯ ಸ್ಮಾರ್ಟ್​ಫೋನ್ ಸೇಲ್ ಆದಲ್ಲಿ ಕಡಿಮೆ ARM ಆಯ್ಕೆ ಹೊಸ ಮೈಕ್ರೋಮ್ಯಾಕ್ಸ್​ IN 2B ಕೇವಲ 549 ರೂ. ಗೆ ಖರೀದಿಸಬಹುದಾಗಿದೆ.

ಮೈಕ್ರೊಮ್ಯಾಕ್ಸ್ ಇನ್‌ 2b ಸ್ಮಾರ್ಟ್‌ಫೋನ್‌ 6.52-ಇಂಚಿನ HD+ ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸಾಕ್ ಟಿ 610 ಆಕ್ಟಾ-ಕೋರ್ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ನೈಟ್ ಮೋಡ್, ಹಿನ್ನೆಲೆ ಭಾವಚಿತ್ರ, ಸೌಂದರ್ಯ ಮೋಡ್, ಚಲನೆಯ ಫೋಟೋ, ಪ್ಲೇ ಮತ್ತು ವಿರಾಮ ವೀಡಿಯೊ ಶೂಟ್, ಮತ್ತು ಪೂರ್ಣ-ಎಚ್ಡಿ ಫ್ರಂಟ್ ಮತ್ತು ಬ್ಯಾಕ್ ರೆಕಾರ್ಡಿಂಗ್ ಸೇರಿವೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 160 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್, 20 ಗಂಟೆಗಳ ವೆಬ್ ಬ್ರೌಸಿಂಗ್, 15 ಗಂಟೆಗಳ ವಿಡಿಯೋ ಸ್ಟ್ರೀಮಿಂಗ್ ಮತ್ತು 50 ಗಂಟೆಗಳ ಟಾಕ್ಟೈಮ್ ಅನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

ಇಂದು ಮಾತ್ರ: ಭರ್ಜರಿ ಆಫರ್​ನಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್

ಬ್ಲೂಟೂತ್ ಹೆಡ್​ಫೋನ್ ಸ್ಪೋಟ, ಯುವಕ ಸಾವು..!

(Micromax In 2b This smartphone you can buy a just Rs 549 on Flipkart Here is the tricks)

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!