BSNL ಭರ್ಜರಿ ಆಫರ್: ಒಂದು ವರ್ಷದವರೆಗೆ ಅನಿಯಮಿತ ಕರೆ ಸೌಲಭ್ಯ, 600 GB ಉಚಿತ ಡೇಟಾ

BSNL 1999 Recharge Plan: ಹೊಸ ಪ್ರೀಪೇಯ್ಡ್ ಪ್ಲಾನ್ ಅನ್ನು ಕೂಡ ಬಿಡುಗಡೆ ಮಾಡಿದೆ. ಈ ಪ್ಲ್ಯಾನ್​ನ ವಾಲಿಡಿಟಿ 60 ದಿನಗಳು. ಈ ಯೋಜನೆಯಲ್ಲಿ ಗ್ರಾಹಕರಿಗೆ 100 GB ಡೇಟಾ ಸಿಗಲಿದ್ದು, ದೈನಂದಿನ ಬಳಕೆಯ ಮಿತಿ ಇರುವುದಿಲ್ಲ.

BSNL ಭರ್ಜರಿ ಆಫರ್: ಒಂದು ವರ್ಷದವರೆಗೆ ಅನಿಯಮಿತ ಕರೆ ಸೌಲಭ್ಯ, 600 GB ಉಚಿತ ಡೇಟಾ
BSNL 485 ರೂ. ಪ್ಲ್ಯಾನ್: ಬಿಎಸ್​ಎನ್​ಎಲ್ ಪರಿಚಯಿಸಿರುವ 485 ರೂ.ಗಳ ಈ ಪ್ಲ್ಯಾನ್​ನ ವಾಲಿಡಿಟಿ 90 ದಿನಗಳು. ಈ ರಿಚಾರ್ಜ್​ ಪ್ಲ್ಯಾನ್​ ಮೂಲಕ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 1.5GB ಉಚಿತ ಡೇಟಾ ಹಾಗೂ 100 SMS ಸಿಗಲಿದೆ.
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 08, 2021 | 10:33 PM

ಭಾರತೀಯ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ BSNL ಗ್ರಾಹಕರನ್ನು ಸೆಳೆಯಲು ಅತ್ಯುತ್ತಮ ಮತ್ತು ಅಗ್ಗದ ರಿಚಾರ್ಜ್​ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಬಿಎಸ್‌ಎನ್‌ಎಲ್ ಒಂದು ವರ್ಷದ ವಾಲಿಡಿಟಿ ಹೊಂದಿರುವ ಭರ್ಜರಿ ಪ್ಲ್ಯಾನ್​ವೊಂದನ್ನು ಗ್ರಾಹಕರ ಮುಂದಿಟ್ಟಿದೆ. ಈ ಪ್ಲ್ಯಾನ್​ನಲ್ಲಿ ಅನಿಯಮಿತ ಡೇಟಾ ಕೂಡ ನೀಡುತ್ತಿರುವುದು ವಿಶೇಷ. ಹಾಗಿದ್ರೆ ಬಿಎಸ್​ಎನ್​ಎಲ್​ನ ದೀರ್ಘಾವಧಿಯ ಈ ರಿಚಾರ್ಜ್​ ಪ್ಲ್ಯಾನ್​ನ ವಿಶೇಷತೆಗಳೇನು ಎಂದು ತಿಳಿಯೋಣ.

BSNL ಪರಿಚಯಿಸಿರುವ ಹೊಸ ಪ್ಲ್ಯಾನ್​ನ ಮೊತ್ತ 1,999 ರೂ. ಒಂದು ವರ್ಷದ ವಾಲಿಡಿಟಿ ಹೊಂದಿರುವ ಈ ಪ್ಲ್ಯಾನ್​ನಲ್ಲಿ ಅನಿಯಮಿತ ಕರೆ ಸೌಲಭ್ಯ ನೀಡಲಾಗುತ್ತದೆ. ಜೊತೆಗೆ 600 GB ಡೇಟಾವನ್ನು ನೀಡಲಾಗುತ್ತದೆ. ಅಂದರೆ ಬಳಕೆದಾರರು ವರ್ಷಪೂರ್ತಿ ಈ ಡೇಟಾವನ್ನು ಬಳಸಬಹುದು. ಈ ಡೇಟಾದಲ್ಲಿ ಯಾವುದೇ ದೈನಂದಿನ ಬಳಕೆಯ ಮಿತಿಯನ್ನು ವಿಧಿಸಲಾಗಿಲ್ಲ. ಹೀಗಾಗಿ ಬಳಕೆದಾರರು 600 GB ಯನ್ನು ತಮಗಿಷ್ಟವಿದ್ದಾಗ ಬಳಸಬಹುದು. ಇದರೊಂದಿಗೆ, ಈ ಯೋಜನೆಯಲ್ಲಿ ಬಳಕೆದಾರರಿಗೆ ದಿನಕ್ಕೆ 100 SMS ಗಳನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ.

ಇದಲ್ಲದೆ BSNL ರೂ. 447 ರ ಹೊಸ ಪ್ರೀಪೇಯ್ಡ್ ಪ್ಲಾನ್ ಅನ್ನು ಕೂಡ ಬಿಡುಗಡೆ ಮಾಡಿದೆ. ಈ ಪ್ಲ್ಯಾನ್​ನ ವಾಲಿಡಿಟಿ 60 ದಿನಗಳು. ಈ ಯೋಜನೆಯಲ್ಲಿ ಗ್ರಾಹಕರಿಗೆ 100 GB ಡೇಟಾ ಸಿಗಲಿದ್ದು, ದೈನಂದಿನ ಬಳಕೆಯ ಮಿತಿ ಇರುವುದಿಲ್ಲ. ಇನ್ನು ಡೇಟಾ ಮುಗಿದ ನಂತರ, ಈ ಯೋಜನೆಯಲ್ಲಿ 80Kbps ವೇಗದಲ್ಲಿ ಉಚಿತ ಡೇಟಾ ಸಿಗಲಿದೆ. ಇನ್ನು ಈ ಪ್ಲ್ಯಾನ್ ಮೂಲಕ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಮಾಡಬಹುದು.

ಇದನ್ನೂ ಓದಿ: Airtel: ಏರ್​ಟೆಲ್ ಕಡೆಯಿಂದ ನಿಮಗೆ ಈ ಮೆಸೇಜ್ ಬಂದಿದ್ರೆ ನಿರ್ಲಕ್ಷಿಸಿ

ಇದನ್ನೂ ಓದಿ: Suresh Raina: ರೈನಾ ಜೊತೆ ಸಚಿನ್ ಹೆಂಡ್ತಿಯನ್ನು ವಿಚಾರಿಸಿದ ಏರ್​ ಹೋಸ್ಟೆಸ್: ಆಮೇನಾಯ್ತು?

ಇದನ್ನೂ ಓದಿ: Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್​ಪ್ರೀತ್ ಬುಮ್ರಾ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್