ಇತ್ತೀಚೆಗಷ್ಟೆ ಇನ್ಫಿನಿಕ್ಸ್ ಸಂಸ್ಥೆ ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 6 ಪ್ಲಸ್ ಸ್ಮಾರ್ಟ್‌ಫೋನ್ (Infinix Smart 6 Plus) ಅನ್ನು ಬಿಡುಗಡೆ ಮಾಡಿತ್ತು. ಇದು ಖರೀದಿಗೆ ಕೂಡ ಸಿಗುತ್ತಿದೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು? ಬೆಲೆ ಎಷ್ಟು?, ಖರೀದಿಸಬಹುದೇ? ಎಂಬುದನ್ನು ನೋಡೋಣ.
ಭಾರತದಲ್ಲಿ ಬಜೆಟ್ ಬೆಲೆಯ ಫೋನುಗಳಿಗೆ (Budget Smartphone) ಈಗ ಎಲ್ಲಿಲ್ಲದ ಬೇಡಿಕೆ. 15,000, 10,000 ರೂ. ಒಳಗೆ ಆಕರ್ಷಕ ಫೀಚರ್ಗಳ ಫೋನ್ ಬಿಡುಗಡೆ ಆಯಿತು ಎಂದಾದರೆ ಅದು ಭರ್ಜರಿ ಸೇಲ್ ಕಾಣುತ್ತದೆ. ಇತ್ತೀಚೆಗಷ್ಟೆ ನಡೆದ ಸಮೀಕ್ಷೆಯೊಂದರಲ್ಲಿ ಬಹುಪಾಲು ಭಾರತೀಯರು ಒಂದು ಫೋನನ್ನು ಒಂದು ವರ್ಷ ಕೂಡ ಉಪಯೋಗಿಸುವುದಿಲ್ಲ ಎಂಬ ಮಾಹಿತಿ ಬಹಿರಂಗವಾಗಿತ್ತು. ಇದಕ್ಕೆ ಕಾರಣ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳು ಕೈಗೆ ಸಿಗುತ್ತಿರುವುದು. ಈ ರೀತಿಯ ಫೋನ್ಗಳನ್ನು ಬಿಡುಗಡೆ ಮಾಡುವುದರಲ್ಲಿ ಇನ್ಫಿನಿಕ್ಸ್(Infinix) ಎತ್ತಿದ ಕೈ. ಈಗಾಗಲೇ ಕೈಗೆಟುವ ದರಕ್ಕೆ ಅನೇಕ ಆಕರ್ಷಕ ಫೋನ್ಗಳನ್ನು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಇತ್ತೀಚೆಗಷ್ಟೆ ಸಂಸ್ಥೆ ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 6 ಪ್ಲಸ್ ಸ್ಮಾರ್ಟ್‌ಫೋನ್ (Infinix Smart 6 Plus) ಅನ್ನು ಬಿಡುಗಡೆ ಮಾಡಿತ್ತು. ಇದು ಖರೀದಿಗೆ ಕೂಡ ಸಿಗುತ್ತಿದೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು? ಬೆಲೆ ಎಷ್ಟು?, ಖರೀದಿಸಬಹುದೇ? ಎಂಬುದನ್ನು ನೋಡೋಣ.
ಇನ್ಫಿನಿಕ್ಸ್ ಸ್ಮಾರ್ಟ್ 6 ಪ್ಲಸ್ ಸ್ಮಾರ್ಟ್‌ಫೋನ್ ಒಂದು ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದರ 3GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆಯು ಕೇವಲ 8,299 ರೂ. ಆಗಿದೆ. ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.
ಇದು 6.82 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, 1600 x 720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ.
ಬೆಲೆಗೆ ತಕ್ಕಂತೆ ಮೀಡಿಯಾ ಟೆಕ್ ಹಿಲಿಯೋ G25 SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 (Go ಆವೃತ್ತಿ) ಸಪೋರ್ಟ್ ಪಡೆದಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 6 ಪ್ಲಸ್ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಡಬಲ್ LED ಫ್ಲ್ಯಾಷ್‌ನೊಂದಿಗೆ ಒಳಗೊಂಡಿದೆ.
ಇದನ್ನೂ ಓದಿ
Google: ಜೂನ್ನಲ್ಲಿ 11 ಲಕ್ಷಕ್ಕೂ ಅಧಿಕ ಕಂಟೆಂಟ್ ಅನ್ನು ತೆಗೆದು ಹಾಕಿದ ಗೂಗಲ್
Nokia 8210 4G: ಧೂಳೆಬ್ಬಿಸುತ್ತಿದೆ ನೋಕಿಯಾ 8210: ಕ್ಲಾಸಿಕ್ ಫೋನ್ನೊಂದಿಗೆ ಮತ್ತೆ ಬಂದ ನೋಕಿಯಾ
OnePlus 10T: 150W ಫಾಸ್ಟ್ ಚಾರ್ಜರ್ನ ಒನ್ಪ್ಲಸ್ 10T ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?
Amazon Great Freedom Festival 2022 Sale: ಅಮೆಜಾನ್ನಿಂದ ಸರ್ಪ್ರೈಸ್: ನೂತನ ಸೇಲ್ಗೂ ಮುನ್ನ ನೀಡಿದೆ ಬಂಪರ್ ಆಫರ್
ಇದರಲ್ಲಿರುವ ಎರಡನೇ ಕ್ಯಾಮೆರಾ ಬೇಸಿಕ್ ಸೆನ್ಸಾರ್ ಹೊಂದಿದ್ದು, ಜೊತೆಗೆ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. AI ಫೇಸ್ ಅನ್‌ಲಾಕ್ ಅನ್ನು ಸಹ ಬೆಂಬಲಿಸುತ್ತದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸಪೋರ್ಟ್ ಪಡೆದಿದೆ. 4G LTE ಸಫೊರ್ಟ್ ನೀಡಲಾಗಿದೆ.
ಖರೀದಿಸಬಹುದ?: ನೀವು ಕೈಗೆಟಕುವ ದರಕ್ಕೆ ಒಂದೊಳ್ಳೆ ಫೋನನ್ನು ಹುಡುಕುತ್ತಿದ್ದರೆ ಇನ್ಫಿನಿಕ್ಸ್ ಸ್ಮಾರ್ಟ್ 6 ಪ್ಲಸ್ ಉತ್ತಮ ಆಯ್ಕೆ. ಇದರಲ್ಲಿ ವಾವ್ ಎನ್ನವಂತಹ ಫೀಚರ್ಸ್ ಇಲ್ಲ. ಆದರೆ, ಉತ್ತಮ ಬ್ಯಾಟರಿ ಹಾಗೂ ಡಿಸ್ ಪ್ಲೇ, ಸಾಮಾನ್ಯ ಕ್ಯಾಮೆರಾ ನೀಡಲಾಗಿದೆ. ನೀವು ಗೇಮಿಂಗ್ ಪ್ರಿಯರಾಗಿದ್ದಲ್ಲಿ ದೊಡ್ಡ ಮಟ್ಟದ ಆಟಕ್ಕೆ ಇದು ಸಹಕರಿಸುವುದಿಲ್ಲ.