ವಿಶ್ವದಲ್ಲಿ ಸೈಬರ್ ದರೋಡೆಕೋರರ (Cyber Fraud) ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದೆ. ಭಾರತದಲ್ಲಿ ಇದರ ಪ್ರಮಾಣ ತುಸು ಹೆಚ್ಚಾಗಿದೆ ಎಂದೇ ಹೇಳಬಹುದು. ಸೈಬರ್ ವಂಚಕರು ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ (OTP) ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇದೆ. ಈ ಹಿಂದೆ ವಿದ್ಯುತ್ ಬಿಲ್, ಓಟಿಪಿ, ಮಿಸ್ಡ್‌ಕಾಲ್ (Missed Call) ಕೊಡುವ ಮೂಲಕ ಫೋನ್‌ಗೆ ಸಿಮ್ ಸ್ವ್ಯಾಪ್ ಮಾಡಿ ಹಣ ದೋಚಿಕೊಳ್ಳುತ್ತಿದ್ದ ಖದೀಮರು ಈಗ ಹಣ ಖದಿಯುವ ರಹಸ್ಯ ದಾರಿಯನ್ನೂ ಹುಡುಕಿದ್ದಾರೆ. ಮುಂಬೈನಲ್ಲಿ ಸೈಬರ್ ವಂಚನೆ ಬಗ್ಗೆ ಹೊಸ ಪ್ರಕರಣ ವರದಿ ಆಗಿದ್ದು, ವ್ಯಕ್ತಿಯೊಬ್ಬರು ಕ್ರೆಡಿಟ್ ಕಾರ್ಡ್ ಸ್ಕ್ಯಾಮ್ನಿಂದಾಗಿ 22,396 ರೂ. ಕಳೆದುಕೊಂಡಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ಮಾಡಿರುವ ವರದಿಯ ಪ್ರಕಾರ, ಮುಂಬೈ ಮೂಲದ ರಾಮ್ಸಿಂಗ್ ರಜಪೂತ್ ಎಂಬ 29 ವರ್ಷದ ವ್ಯಕ್ತಿ ಸೈಬರ್ ವಂಚನೆಗೆ ಗುರಿಯಾಗಿದ್ದಾರೆ. ಕೋಟಕ್ ಮಹೀಂದ್ರ ಕ್ರೆಡಿಟ್ ಕಾರ್ಡ್ನಲ್ಲಿ ಹಣವನ್ನು ಹೆಚ್ಚಿಸುವ ಆಮೀಷ ಒಡ್ಡಿ ಬಂದ ಕರೆಯಿಂದ ಇವರು 22,396 ರೂ. ಕಳೆದುಕೊಂಡಿದ್ದಾರೆ. ಜನವರಿ 15 ರಂದು ಪ್ರಿಯಾಂಕ ಧರ್ಮಾ ಎಂಬವರಿಂದ ರಾಮ್ಸಿಂಗ್ಗೆ ಕರೆಯೊಂದು ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಅನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ನಂಬಿದ ರಾಮ್ಸಿಂಗ್ ತನಗೆ ಬಂದ ಒಟಿಪಿ ಅನ್ನು ಕರೆ ಮಾಡಿದವರೊಂದಿಗೆ ಹಂಚಿಕೊಂಡಿದ್ದಾರೆ. ಇದಾದ ತಕ್ಷಣ ತನ್ನ ಖಾತೆಯಲ್ಲಿದ್ದ ಹಣವನ್ನು ರಾಮ್ಸಿಂಗ್ ಕಳೆದುಕೊಂಡಿದ್ದಾರೆ.
Shocking News: 200 ಮಿಲಿಯನ್ ಟ್ವಿಟರ್ ಬಳಕೆದಾರರ ಇಮೇಲ್ ವಿಳಾಸ ಹ್ಯಾಕ್, ನೀವು ಹೀಗೆ ಪರಿಶೀಲಿಸಿ
ಇತ್ತೀಚೆಗಷ್ಟೆ ಸ್ಮಾರ್ಟ್‌ಫೋನ್‌ಗೆ ಮಿಸ್ ಕಾಲ್ ನೀಡಿ ಹಣವನ್ನು ಎಗರಿಸಿದ ಘಟನೆ ಕೂಡ ನಡೆದಿತ್ತು. ಇದಕ್ಕಾಗಿ ಖದೀಮರು ಸಿಮ್ ಸ್ವ್ಯಾಪ್ ಮಾಡಿದ್ದರು. ಹಣ ಕಳೆದುಕೊಳ್ಳುವುದಕ್ಕೂ ಮುನ್ನ ವ್ಯಕ್ತಿಗೆ ಪದೇ ಪದೇ ಮಿಸ್ಡ್ ಕಾಲ್‌ಗಳು ಬಂದಿವೆ. ಮೊದಲಿಗೆ ಮಿಸ್ ಕಾಲ್‌ಗಳನ್ನು ನಿರ್ಲಕ್ಷ್ಯ ಮಾಡಿದ್ದ ವ್ಯಕ್ತಿ ನಂತರ ಒಂದು ನಂಬರ್‌ನಿಂದ ಬಂದ ಕರೆಯನ್ನು ಸ್ವೀಕರಿಸಿದ್ದಾರೆ. ಕರೆಯನ್ನು ಸ್ವಿಕರಿಸಿದಾಗ ಅತ್ತ ಕಡೆಯಿಂದ ಯಾರೂ ಮಾತನಾಡಲಿಲ್ಲ, ಬದಲಿಗೆ ಸ್ವಲ್ಪ ಸಮಯದ ನಂತರ ಅವರ ಮೊಬೈಲ್‌ಗೆ RTGS ಸಂದೇಶ ಬಂದಿದೆ. ಆರ್‌ಟಿಜಿಎಸ್ ಮೂಲಕ 50 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಆಗಸ್ಟ್ 2019 ರಿಂದ ಡಿಸೆಂಬರ್ 12, 2022 ರವರೆಗೆ ಭಾರತದಲ್ಲಿ ಸೈಬರ್ ವಂಚನೆಯ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲಾಗಿವೆ. 1 ಲಕ್ಷದ 11 ಸಾವಿರ ದೂರುಗಳಲ್ಲಿ 188 ಸಾವಿರ ಕೋಟಿ ರೂಪಾಯಿ ವಂಚನೆಯಿಂದ ಉಳಿಸಲಾಗಿದೆ. ಯಾರಾದರೂ ಸೈಬರ್ ವಂಚನೆ ಮೂಲಕ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯಾದ 1930ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೆ ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ನಿಮ್ಮ ಮಾಹಿತಿಯನ್ನು ಆಧರಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುತ್ತಾರೆ. ಇದರಿಂದ ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ