Shocking News: 200 ಮಿಲಿಯನ್ ಟ್ವಿಟರ್ ಬಳಕೆದಾರರ ಇಮೇಲ್ ವಿಳಾಸ ಹ್ಯಾಕ್, ನೀವು ಹೀಗೆ ಪರಿಶೀಲಿಸಿ

ಜಗತ್ತಿನ 200 ಮಿಲಿಯನ್ (24,20,266) ಟ್ವಿಟರ್ ಬಳಕೆದಾರರ ಇಮೇಲ್ ವಿಳಾಸಗಳು ಮತ್ತು ಇತರ ಪ್ರಮುಖ ಡೇಟಾ ಹ್ಯಾಕ್ ಆಗಿದೆ. ಈ ಮೂಲಕ 200 ಮಿಲಿಯನ್ ಟ್ವಿಟರ್ ಖಾತೆಗಳ ಪ್ರಮುಖ ದಾಖಲೆಗಳು ಸೋರಿಕೆಯಾಗಿದೆ

Shocking News: 200 ಮಿಲಿಯನ್ ಟ್ವಿಟರ್ ಬಳಕೆದಾರರ ಇಮೇಲ್ ವಿಳಾಸ ಹ್ಯಾಕ್, ನೀವು ಹೀಗೆ ಪರಿಶೀಲಿಸಿ
ಸಾಂದರ್ಭಿಕ ಚಿತ್ರ Image Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 06, 2023 | 11:10 AM

ಜಗತ್ತಿನ 200 ಮಿಲಿಯನ್ (24,20,266) ಟ್ವಿಟರ್ (Twitter) ಬಳಕೆದಾರರ ಇಮೇಲ್ ವಿಳಾಸಗಳು (Email Address)  ಮತ್ತು ಇತರ ಪ್ರಮುಖ ಡೇಟಾ ಹ್ಯಾಕ್ ಆಗಿದೆ. ಈ ಮೂಲಕ 200 ಮಿಲಿಯನ್ ಟ್ವಿಟರ್ ಖಾತೆಗಳ ಪ್ರಮುಖ ದಾಖಲೆಗಳು ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಭದ್ರತಾ ಸಂಶೋಧಕರ ಪ್ರಕಾರ, ಹ್ಯಾಕರ್‌ಗಳು ಆನ್‌ಲೈನ್ ಹ್ಯಾಕಿಂಗ್ ಫೋರಂನಲ್ಲಿ 200 ಮಿಲಿಯನ್ ಟ್ವಿಟರ್ ಬಳಕೆದಾರರ ಇಮೇಲ್ ಐಡಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆಯು ಇಂತಹ ಘಟನೆಗಳು ನಡೆಸಿದ್ದು, ಆದರೆ ಇದು ವಿಫಲವಾಗಿತ್ತು. ಇದರಿಂದ ಟಾರ್ಗೆಟೆಡ್ ಫಿಶಿಂಗ್ ಮತ್ತು ಡಾಕ್ಸಿಂಗ್‌ಗೆ ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್ ಇನ್ನೂ ಪ್ರತಿಕ್ರಿಯಿಸಿಲ್ಲ.

ಇಸ್ರೇಲಿ ಸೈಬರ್ ಸೆಕ್ಯುರಿಟಿ ಸಂಸ್ಥೆ, ಮಾನಿಟರಿಂಗ್ ಸಂಸ್ಥೆ ಹಡ್ಸನ್ ರಾಕ್‌ನಲ್ಲಿ ಕೆಲಸ ಮಾಡುತ್ತಿರುವ ಭದ್ರತಾ ಸಂಶೋಧಕ ಅಲೋನ್ ಗಾಲ್, ಟ್ವಿಟರ್ ಹ್ಯಾಕ್ ಆಗಿರುವ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಡೇಟಾಬೇಸ್ ಟ್ವಿಟರ್ ಬಳಕೆದಾರರ 235,000,000 ಅನನ್ಯ ದಾಖಲೆಗಳನ್ನು ಮತ್ತು ಅವರ ಇಮೇಲ್ ವಿಳಾಸಗಳು ಹ್ಯಾಕಿಂಗ್ ಆಗಿದ್ದು, ಇದೀಗ ಇದು ಫಿಶಿಂಗ್ ಮತ್ತು ಡಾಕ್ಸಿಂಗ್‌ಗೆ ಕಾರಣವಾಗುತ್ತದೆ. ಇದು ನಾನು ನೋಡಿದ ಅತ್ಯಂತ ಮಹತ್ವದ ಸೋರಿಕೆಯಾಗಿದೆ ಎಂದು ಗಾಲ್ ಬರೆದುಕೊಂಡಿದ್ದಾರೆ.

ಇದನ್ನು ಓದಿ:Shocking News: 6 ಲಕ್ಷ ಭಾರತೀಯರ ವೈಯಕ್ತಿಕ ಡೇಟಾ ಹ್ಯಾಕ್, ಮಾಲ್‌ವೇರ್‌ ಸಾಧನ ತಡೆಯಲು ಹೀಗೆ ಮಾಡಿ

ಡಿಸೆಂಬರ್ 24ರಂದು ಟ್ವಿಟರ್ ಹ್ಯಾಕ್ ಕುರಿತು ಗಾಲ್ ಮೊದಲ ಬಾರಿಗೆ ಪೋಸ್ಟ್ ಮಾಡಿದ್ದಾರೆ. ಒಂದು ವಾರದ ಹಿಂದೆ, 400,000,000 ಟ್ವಿಟ್ಟರ್ ಬಳಕೆದಾರರ ಡೇಟಾವನ್ನು ಹೊಂದಿದ್ದಾರೆ ಮತ್ತು ಅದನ್ನು ಮಾರಾಟ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದು ಲಿಂಕ್ಡ್‌ಇನ್‌ನಲ್ಲಿ ಗಾಲ್ ಹಂಚಿಕೊಂಡಿದ್ದಾರೆ. “ಡೇಟಾಬೇಸ್ ಅವರ ಪ್ರಕಾರ ಇದು ಖಾಸಗಿಯಾಗಿದೆ ಮತ್ತು ಹೆಚ್ಚಿನ ಪ್ರೊಫೈಲ್ ಬಳಕೆದಾರರಿಗೆ ಇಮೇಲ್‌ಗಳು ಮತ್ತು ಫೋನ್ ಸಂಖ್ಯೆಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ಒಳಗೊಂಡಿದೆ ಎಂದು ಅವರು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

ಹ್ಯಾಕರ್ 1,000 ಗಮನಾರ್ಹ ಖಾತೆಗಳ ಮಾನ್ಯ ಮಾದರಿಯನ್ನು ಒದಗಿಸಿದ್ದಾರೆ ಮತ್ತು AOC, ಬ್ರಿಯಾನ್ ಕ್ರೆಬ್ಸ್, ವಿಟಾಲಿಕ್ ಬುಟೆರಿನ್, ಕೆವಿನ್ ಒ’ಲಿಯರಿ, ಡೊನಾಲ್ಡ್ ಟ್ರಂಪ್ ಜೆಆರ್ ಮತ್ತು ಇನ್ನೂ ಅನೇಕರ ಖಾಸಗಿ ಮಾಹಿತಿಯನ್ನು ಮಾರಾಟ ಮಾಡಿದ್ದಾರೆ ಎಂದು ಗಾಲ್ ಉಲ್ಲೇಖಿಸಿದ್ದಾರೆ.

ನಿಮ್ಮ ಇಮೇಲ್ ಐಡಿ ಹ್ಯಾಕ್ ಆಗಿದೆ ಎಂಬುದನ್ನು ಹೀಗೆ ಪರಿಶೀಲಿಸಬಹುದು

https://haveibeenpwned.com/ – ವೆಬ್‌ಸೈಟ್‌ಗೆ ಹೋಗಿ

ನಂತರ ನೀವು Twitter ನಲ್ಲಿ ಲಾಗ್ ಇನ್ ಮಾಡಲು ಬಳಸಿದ ನಿಮ್ಮ ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ.

– ನಿಮ್ಮ ಇಮೇಲ್ ವಿಳಾಸವನ್ನು ಹ್ಯಾಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ವೆಬ್‌ಸೈಟ್ ನಿಮಗೆ ತೋರಿಸುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:10 am, Fri, 6 January 23

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ