ಆಂಡ್ರಾಯ್ಡ್ ಸ್ಮಾರ್ಟ್ಫೋನ್ (Android Smartphone) ಬಳಕೆದಾರರು ಉಪಯೋಗಿಸುವ ಗೂಗಲ್ ಪ್ಲೇ ಸ್ಟೋರ್ (Google Play Store) ನಲ್ಲಿ ನಕಲಿ ಆ್ಯಪ್ಗಳ (Fake App) ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಅನೇಕ ಬಾರಿ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಅಪಾಯಕಾರಿ ಆ್ಯಪ್ಗಳನ್ನು ಕಿತ್ತೆಸೆದಿದೆ. ಈಗ ಮತ್ತೆ ಪ್ಲೇ ಸ್ಟೋರ್ನಲ್ಲಿ 35 ಅಪಾಯಕಾರಿ ಆ್ಯಪ್ ಪತ್ತೆಯಾಗಿದೆ. ಈ ಬಗ್ಗೆ ಸೈಬರ್ ಸೆಕ್ಯುರಿಟಿ ತಂತ್ರಜ್ಞಾನ ಕಂಪನಿ ಬಿಟ್ಡೆಫೆಂಡರ್ ಮಾಹಿತಿ ನೀಡಿದ್ದು, ಇದನ್ನು ಉಪಯೋಗಿಸುತ್ತಿರುವರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಕಂಡುಬಂದಿರುವ ಹೊಸ 35 ಅಪಾಯಕಾರಿ ಅಪ್ಲಿಕೇಶನ್ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚಿಸಿದೆ.
ಬಳಕೆದಾರರು ಈ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿದ ತಕ್ಷಣ ಅದರ ಹೆಸರು ಬದಲಾಗುತ್ತದಂತೆ. ಅಲ್ಲದೆ ನಿಮ್ಮ ಸ್ಮಾರ್ಟ್ಫೋನ್ನಿಂದ ಆ ಆ್ಯಪ್ ಹೈಡ್ ಆಗುತ್ತಂತೆ. ಇಂತಹ ದುರುದ್ದೇಶಪೂರಿತ ಚಟುವಟಿಕೆಗಳ ಹಿಂದಿನ ಕಲ್ಪನೆಯು ಜಾಹೀರಾತುಗಳನ್ನು ಒದಗಿಸುವುದು ಮತ್ತು ಅವುಗಳ ಮೂಲಕ ಆದಾಯವನ್ನು ಗಳಿಸುವುದು ಆಗಿದೆ ಎಂದು ಬಿಟ್ಡೆಫೆಂಡರ್ ಹೇಳಿದೆ.
ಈ 35 ಆ್ಯಪ್ಗಳ ಬಗ್ಗೆ ಎಚ್ಚರಿಕೆ ನೀಡಿರುವ ಸೈಬಲ್ ಸೆಕ್ಯುರಿಟಿ ಡೌನ್ಲೋಡ್ ಮಾಡಿರುವ ಬಳಕೆದಾರರಿಗೆ ತಕ್ಷಣವೇ ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ. ಅದರಂತೆ ನೀವು ಜಾಗರೂಕರಾಗಿರಬೇಕಾದ 35 ಅಪಾಯಕಾರಿ ಅಪ್ಲಿಕೇಶನ್ಗಳ ಪಟ್ಟಿ ಹೀಗಿದೆ.
Walls light – Wallpapers Pack
Big Emoji – Keyboard
Grad Wallpapers – 3D Backdrops
Engine Wallpapers – Live & 3D
Stock Wallpapers – 4K & HD
EffectMania – Photo Editor
Art Filter – Deep Photoeffect
Fast Emoji Keyboard
Create Sticker for Whatsapp
Math Solver – Camera Helper
Photopix Effects – Art Filter
Led Theme – Colorful Keyboard
Keyboard – Fun Emoji, Sticker
Smart Wifi
My GPS Location
Image Warp Camera
Art Girls Wallpaper HD
Cat Simulator
Smart QR Creator
Colorize Old Photo
GPS Location Finder
Girls Art Wallpaper
Smart QR Scanner
GPS Location Maps
Volume Control
Secret Horoscope
Smart GPS Location
Animated Sticker Master
Personality Charging Show
Sleep Sounds
QR Creator
Media Volume Slider
Secret Astrology
Colorize Photos
Phi 4K Wallpaper – Anime HD
Published On - 1:20 pm, Sat, 20 August 22