
ಬೆಂಗಳೂರು (ಮೇ. 09): ಭಾರತ-ಪಾಕಿಸ್ತಾನ (India Pakistan) ಉದ್ವಿಗ್ನತೆಯ ನಡುವೆ ಸೈಬರ್ ದಾಳಿಯ ಪ್ರಯತ್ನಗಳು ಮುಂದುವರೆದಿವೆ. ವರದಿಗಳ ಪ್ರಕಾರ, ಪಾಕಿಸ್ತಾನವು ಭಾರತೀಯ ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಏತನ್ಮಧ್ಯೆ, ‘ಡ್ಯಾನ್ಸ್ ಆಫ್ ದಿ ಹಿಲರಿ’ ಎಂಬ ವೈರಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ಈ ವೈರಸ್ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತು ಟೆಲಿಗ್ರಾಮ್ ಅಪ್ಲಿಕೇಶನ್‌ಗಳ ಮೂಲಕ ಹರಡುತ್ತಿದೆ. ಡ್ಯಾನ್ಸ್ ಆಫ್ ದಿ ಹಿಲರೀಸ್ ವೈರಸ್‌ಗಳು ವಿಡಿಯೋಗಳು ಅಥವಾ ಡಾಕ್ಯುಮೆಂಟ್ ರೂಪದಲ್ಲಿ ಜನರ ಫೋನ್‌ಗಳನ್ನು ಪ್ರವೇಶಿಸಬಹುದು. ವಿಡಿಯೋ ಅಥವಾ ಡಾಕ್ಯುಮೆಂಟ್ ತೆರೆದ ತಕ್ಷಣ, ಅದು ಬಳಕೆದಾರರ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತದೆ ಎಂಬ ಆರೋಪಗಳಿವೆ.
ಟೈಮ್ಸ್ ನೌ ವರದಿಯ ಪ್ರಕಾರ, ‘ಡ್ಯಾನ್ಸ್ ಆಫ್ ದಿ ಹಿಲರಿ’ ಒಂದು ಅಪಾಯಕಾರಿ ವೈರಸ್. ಇದು ವೈಯಕ್ತಿಕ ಮಾಹಿತಿಯನ್ನು ಕದಿಯಲು ಮಾತ್ರ ವಿನ್ಯಾಸಗೊಳಿಸಲಾಗಿಲ್ಲ, ಅದು ನಿಮ್ಮ ಸಾಧನಕ್ಕೂ ಹಾನಿ ಮಾಡಬಹುದು. ವಾಟ್ಸ್ಆ್ಯಪ್ನಲ್ಲಿ ಬರುವ ವಿಡಿಯೋ ಮತ್ತು ಡಾಕ್ಯುಮೆಂಟ್ ಫೈಲ್‌ಗಳನ್ನು ನೋಡಿದ ನಂತರ, ಇದು ವೈರಸ್ ಇರಬಹುದೆಂದು ಯಾರೂ ನಂಬುವುದಿಲ್ಲ. ಹೀಗಾಗಿ ಈ ವೈರಸ್ ಜನರನ್ನು ಮೋಸಗೊಳಿಸುತ್ತದೆ.
ವರದಿಯ ಪ್ರಕಾರ, ಬಳಕೆದಾರರು ವಿಡಿಯೋ ಅಥವಾ ಡಾಕ್ಯುಮೆಂಟ್ ಅನ್ನು ತೆರೆದರೆ, ವೈರಸ್ ಫೋನ್‌ನ ಬ್ಯಾಕ್ಗ್ರೌಂಡ್ನಲ್ಲಿ ಇನ್ಸ್ಟಾಲ್ ಆಗಿ ರನ್ ಆಗುತ್ತದೆ. ಇದು ಹ್ಯಾಕರ್‌ಗಳಿಗೆ ನಿಮ್ಮ ಫೋನ್ ಮೇಲೆ ನಿಯಂತ್ರಣವನ್ನು ನೀಡಬಹುದು. ಇದು ಕೂಡ ಕಳವಳಕಾರಿ ವಿಷಯ ಏಕೆಂದರೆ ನಿಮಗೆ ತಿಳಿಯದೆ ಮಾಲ್‌ವೇರ್ ಫೋನ್‌ಗೆ ಪ್ರವೇಶಿಸುತ್ತದೆ.
ಮಾಧ್ಯಮ ವರದಿಗಳ ಪ್ರಕಾರ, “tasksche.exe” ಎಂಬ ಫೈಲ್ ನಿಮ್ಮ ಫೋನ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ಗೆ ಬರುತ್ತದೆ. ಅದನ್ನು ತೆರೆಯಬೇಡಿ. exe ನೊಂದಿಗೆ ಕೊನೆಗೊಳ್ಳುವ ಯಾವುದೇ ಫೈಲ್ ಅನುಮಾನಾಸ್ಪದವಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಫೈಲ್‌ನಲ್ಲಿ ಅಡಗಿರುವ ಮಾಲ್‌ವೇರ್ ಮಾಹಿತಿಯನ್ನು ಕದಿಯುವುದಲ್ಲದೆ, ಫೋನನ್ನು ಕ್ರ್ಯಾಶ್ ಮಾಡಬಹುದು. ಹ್ಯಾಕರ್‌ಗಳು ಸಹ ಇದನ್ನು ನಿಯಂತ್ರಿಸಬಹುದು.
ನೀವು ಆಕಸ್ಮಿಕವಾಗಿ ಅಪರಿಚಿತ ಫೈಲ್ ಅನ್ನು ಕ್ಲಿಕ್ ಮಾಡಿದರೆ ಮತ್ತು ಗೊತ್ತಿಲ್ಲದೆ ನಿಮಗೆ ನಷ್ಟವಾದರೆ, ತಕ್ಷಣ 1930 (ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ) ಗೆ ಕರೆ ಮಾಡಿ ಮತ್ತು ನಿಮಗೆ ಸಂಭವಿಸಿದ ಘಟನೆಯ ಬಗ್ಗೆ ವಿವರಗಳನ್ನು ನೀಡುವ ದೂರು ದಾಖಲಿಸಿ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ