ಭಾರತದಲ್ಲಿ ಟ್ವಿಟರ್ ಉದ್ಯೋಗಿಗಳ ವಜಾ ಆರಂಭಿಸಿದ ಎಲಾನ್ ಮಸ್ಕ್

| Updated By: ಗಂಗಾಧರ​ ಬ. ಸಾಬೋಜಿ

Updated on: Nov 04, 2022 | 8:28 PM

ಭಾರತದಲ್ಲಿರುವ ಉದ್ಯೋಗಿಯೊಬ್ಬರು ಅನಾಮಧೇಯ ಷರತ್ತಿನ ಮೇಲೆ ತಮ್ಮನ್ನು ವಜಾ ಮಾಡಿರುವ ಬಗ್ಗೆ ಪಿಟಿಐಗೆ ತಿಳಿಸಿದ್ದಾರೆ. ಭಾರತದಲ್ಲಿ ಎಷ್ಟು ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬ ಸಂಪೂರ್ಣ ವಿವರಗಳು ಲಭ್ಯವಿಲ್ಲ.

ಭಾರತದಲ್ಲಿ ಟ್ವಿಟರ್ ಉದ್ಯೋಗಿಗಳ ವಜಾ ಆರಂಭಿಸಿದ ಎಲಾನ್ ಮಸ್ಕ್
ಸಂಗ್ರಹ ಚಿತ್ರ
Follow us on

ದೆಹಲಿ: ಟ್ವಿಟರ್ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಆರಂಭಿಸಿರುವ ಎಲಾನ್ ಮಸ್ಕ್ (Elon Musk) ಒಡೆತನದ ಟ್ವಿಟರ್ (Twitter) ಇದೀಗ ಭಾರತದಲ್ಲಿ ಸಿಬ್ಬಂದಿ ವಜಾ ಪ್ರಕ್ರಿಯೆ ಆರಂಭಿಸಿದೆ. ನೂತನ ಮಾಲೀಕ ಎಲಾನ್ ಮಸ್ಕ್ ಈಗ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿ ಮಸ್ಕ್ ಕಳೆದ ವಾರ ಟ್ವಿಟರ್‌ನ ಸಿಇಒ ಪರಾಗ್ ಅಗರವಾಲ್ ಮತ್ತು ಸಿಎಫ್‌ಒ, ಇತರ ಕೆಲವು ಉನ್ನತ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ತಮ್ಮ ಇನ್ನಿಂಗ್ಸ್ ಆರಂಭಿಸಿದ್ದರು. ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿಗಳ ವಜಾಗೊಳಿಸಿದ ನಂತರ ಟ್ವಿಟರ್ ಜಾಗತಿಕ ಮಟ್ಟದಲ್ಲಿ ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ. ವಜಾ ಮಾಡಿರುವ ಬಗ್ಗೆ ತನ್ನ ಸಹೋದ್ಯೋಗಿಗಳಿಗೆ ಎಲಾನ್ ಮಸ್ಕ್ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಇದೀಗ ಭಾರತದಲ್ಲಿರುವ ಉದ್ಯೋಗಿಯೊಬ್ಬರು ಅನಾಮಧೇಯ ಷರತ್ತಿನ ಮೇಲೆ ತಮ್ಮನ್ನು ವಜಾ ಮಾಡಿರುವ ಬಗ್ಗೆ ಪಿಟಿಐಗೆ ತಿಳಿಸಿದ್ದಾರೆ.

ಭಾರತದಲ್ಲಿ ಎಷ್ಟು ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬ ಸಂಪೂರ್ಣ ವಿವರಗಳು ಲಭ್ಯವಿಲ್ಲ. ಉದ್ಯೋಗಿಗಳ ಸುರಕ್ಷತೆ, ಟ್ವಿಟರ್ ವ್ಯವಸ್ಥೆಗಳು ಮತ್ತು ಗ್ರಾಹಕರ ಡೇಟಾಕ್ಕಾಗಿ ಕಂಪನಿಯ ಎಲ್ಲಾ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನೀವು ಕಚೇರಿಯಲ್ಲಿದ್ದರೆ ಅಥವಾ ಕಚೇರಿಗೆ ಹೋಗುತ್ತಿದ್ದರೆ ದಯವಿಟ್ಟು ಯಾರೂ ಹೋಗುವುದು ಬೇಡ ಎಂದು ಟ್ವಿಟರ್​ನ ಅಧಿಕೃತ ಮೇಲ್​ನಿಂದ ಉದ್ಯೋಗಿಗಳಿಗೆ ಸಂದೇಶ ರವಾನಿಸಲಾಗಿದೆ.

ಭಾರತದ ಕೆಲ ಕಡೆಗಳಲ್ಲಿ ಟ್ವಿಟರ್ ಡೌನ್:

ಕಳೆದ ಕೆಲವು ವಾರಗಳಿಂದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದೆ. ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್ (WhatsApp), ಇನ್​ಸ್ಟಾಗ್ರಾಮ್ ದಿಢೀರ್ ಕಾರ್ಯನಿರ್ವಹಿಸದೆ ತೊಂದರೆಗೆ ಒಳಗಾಗಿತ್ತು. ಇದೀಗ ಟ್ವಿಟರ್ ಸರದಿ. ಟೆಸ್ಲಾ ಸಿಎಒ ಎಲಾನ್ ಮಸ್ಕ್ ಒಡೆತನದ ಟ್ವಿಟರ್ (Twitter) ಭಾರತದ ಕೆಲ ಭಾಗಗಳಲ್ಲಿ ಡೌನ್ ಆಗಿದೆ. ಬಳಕೆದಾರರು ಎಷ್ಟೇ ಪ್ರಯತ್ನಿಸಿದರು ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಡೌನ್​ಡಿಟೆಕ್ಟರ್ ಮಾಹಿತಿ ನೀಡಿದ್ದು, ಡೆಸ್ಕ್​ಟಾಪ್ (Desktop) ಬಳಕೆದಾರರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆಯಂತೆ. ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಸಮಸ್ಯೆ ಕಂಡುಬಂದಿದೆ.

ಅನೇಕ ಭಾಗದಲ್ಲಿ ಟ್ವಿಟರ್ ಡೌನ್ ಆಗಿದ್ದರ ಕುರಿತು ಅಲ್ಲಿನ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದರು. ಟ್ವಿಟರ್​ನಲ್ಲಿ ಪ್ರಸ್ತುತ ಟ್ವಿಟರ್ ಡೌನ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಬಳಕೆದಾರರು ಮೀಮ್​ಗಳನ್ನು ಹರಿಬಿಡುತ್ತಿದ್ದು, ಟ್ವಿಟರ್ ಡೌನ್ ಆಗಿರುವುದೋ, ನಮ್ಮ ಇಂಟರ್​ನೆಟ್ಟೋ ತಿಳಿಯುತ್ತಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.