AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

X AI Grok: ಎಕ್ಸ್​ನಲ್ಲೂ ಬಂತು ಎಐ: ಬಳಕೆದಾರರಿಗಾಗಿ ಗ್ರೋಕ್ ಎಐ ಬಿಡುಗಡೆ

ಇತ್ತೀಚೆಗಷ್ಟೆ ಗ್ರೂಕ್ ಎಐ ಆಯ್ಕೆಯನ್ನು ಬಿಡುಗಡೆ ಮಾಡುವ ಬಗ್ಗೆ ಎಕ್ಸ್ ಹೇಳಿತ್ತು. ಈ ವೈಶಿಷ್ಟ್ಯವನ್ನು ಬೀಟಾ ಪರೀಕ್ಷೆಯ ಹಂತದಲ್ಲಿರುವ ಬಗ್ಗೆ ಮಾಹಿತಿ ನೀಡಿತ್ತು. ಜೊತೆಗೆ ಆರಂಭದಲ್ಲಿ ಕಂಪನಿಯು ಈ ವೈಶಿಷ್ಟ್ಯವನ್ನು ಎಕ್ಸ್ ಪ್ರೀಮಿಯಂ ಪ್ಲಸ್ ಸದಸ್ಯರಿಗೆ ಲಭ್ಯವಾಗುವಂತೆ ಮಾಡಿತ್ತು. ಇದೀಗ ಭಾರತದಲ್ಲಿ ಎಲ್ಲ ಬಳಕೆದಾರರಿಗೆ ಈ ಫೀಚರ್ ಸಿಗುತ್ತಿದೆ.

X AI Grok: ಎಕ್ಸ್​ನಲ್ಲೂ ಬಂತು ಎಐ: ಬಳಕೆದಾರರಿಗಾಗಿ ಗ್ರೋಕ್ ಎಐ ಬಿಡುಗಡೆ
X Ai Grok
ಮಾಲಾಶ್ರೀ ಅಂಚನ್​
| Edited By: |

Updated on: Jan 10, 2025 | 10:52 AM

Share

ಸ್ಪೇಸ್ X ಮತ್ತು ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಬಳಕೆದಾರರಿಗೆ AI ಚಾಟ್‌ಬಾಟ್ ಸೇವೆಯನ್ನು ಪ್ರಾರಂಭಿಸಿದ್ದಾರೆ. ಎಕ್ಸ್ ತನ್ನ ಬಳಕೆದಾರರಿಗಾಗಿ ಗ್ರೂಕ್ ಎಐ (Grok AI) ಉಪಕರಣವನ್ನು ಬಿಡುಗಡೆ ಮಾಡಲಾಗಿದೆ. ವಿಷಯವೆಂದರೆ ಇದು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್​ ನ ಮೊದಲ AI ಸಾಧನವಾಗಿದೆ. ಈ ವೈಶಿಷ್ಟ್ಯದ ಸಹಾಯದಿಂದ ನೀವು ಹೇಗೆ ಪ್ರಯೋಜನ ಪಡೆಯುತ್ತೀರಿ ಮತ್ತು ಎಲ್ಲಾ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗಿದೆಯೇ? ಎಂಬ ಮಾಹಿತಿ ಇಲ್ಲಿದೆ.

ಇತ್ತೀಚೆಗಷ್ಟೆ ಈ ಆಯ್ಕೆಯನ್ನು ಬಿಡುಗಡೆ ಮಾಡುವ ಬಗ್ಗೆ ಎಕ್ಸ್ ಹೇಳಿತ್ತು. ಈ ವೈಶಿಷ್ಟ್ಯವನ್ನು ಬೀಟಾ ಪರೀಕ್ಷೆಯ ಹಂತದಲ್ಲಿರುವ ಬಗ್ಗೆ ಮಾಹಿತಿ ನೀಡಿತ್ತು. ಜೊತೆಗೆ ಆರಂಭದಲ್ಲಿ ಕಂಪನಿಯು ಈ ವೈಶಿಷ್ಟ್ಯವನ್ನು ಎಕ್ಸ್ ಪ್ರೀಮಿಯಂ ಪ್ಲಸ್ ಸದಸ್ಯರಿಗೆ ಲಭ್ಯವಾಗುವಂತೆ ಮಾಡಿತ್ತು. ಇದೀಗ ಭಾರತದಲ್ಲಿ ಎಲ್ಲ ಬಳಕೆದಾರರಿಗೆ ಈ ಫೀಚರ್ ಸಿಗುತ್ತಿದೆ.

xAI Grok: ಈ ವೈಶಿಷ್ಟ್ಯವೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?

ಇದು ಕಂಪನಿಯ ಮೊದಲ AI ಸಾಧನವಾಗಿದೆ, ಈ ವೈಶಿಷ್ಟ್ಯವನ್ನು ಗೂಗಲ್ ಬಾರ್ಡ್ ಮತ್ತು ChatGPT ಗೆ ಸ್ಪರ್ಧಿಸಲು ಅನಾವರಣ ಮಾಡಲಾಗಿದೆ. ಈ ವೈಶಿಷ್ಟ್ಯವು ಎಕ್ಸ್​ ನಲ್ಲಿ ನೀವು ಹಂಚಿಕೊಂಡ ಮಾಹಿತಿಯನ್ನು ನೈಜ ಸಮಯದಲ್ಲಿ ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ನೀವು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಜೊತೆಗೆ ಫೇಮಸ್ ಸೆಲೆಬ್ರಿಟಿಸ್ ಬಗ್ಗೆ ಕೆಲ ಮಾಹಿತಿಯನ್ನು ಸಜೆಷನ್ ಮಾಡುತ್ತದೆ.

ಒಂದಲ್ಲ.. ಎರಡಲ್ಲ..: ಇಂದು ಒಂದೇ ದಿನ ಭಾರತದಲ್ಲಿ ಬರೋಬ್ಬರಿ 4 ಹೊಸ ಸ್ಮಾರ್ಟ್‌ಫೋನ್ಸ್ ರಿಲೀಸ್

ಎಕ್ಸ್ ಪ್ರೀಮಿಯಂ ಪ್ಲಸ್ ಪ್ಲಾನ್ ಬೆಲೆ: ಈ ಯೋಜನೆ ಎಷ್ಟು?

ಕೆಲವು ಸಮಯದ ಹಿಂದೆ, ಎಲೋನ್ ಮಸ್ಕ್ ಬಳಕೆದಾರರಿಗೆ X ಪ್ರೀಮಿಯಂ ಪ್ಲಸ್ ಯೋಜನೆಯನ್ನು ಬಿಡುಗಡೆ ಮಾಡಿದ್ದರಿ. ಈ ಯೋಜನೆಯ ಬೆಲೆ ತಿಂಗಳಿಗೆ 16 ಡಾಲರ್ (ಅಂದಾಜು ರೂ. 1330.54). ಈ ಯೋಜನೆಯೊಂದಿಗೆ, ಬಳಕೆದಾರರಿಗೆ ಜಾಹೀರಾತು-ಮುಕ್ತ ಪ್ರವೇಶವನ್ನು ನೀಡಲಾಗುತ್ತದೆ.

ಎಕ್ಸ್ ಸೂಪರ್ ಆಪ್ ಆಗುವ ಸನಿಹದಲ್ಲಿದೆ:

ಎಲೋನ್ ಮಸ್ಕ್ ಅವರು ತಮ್ಮ ಕಂಪನಿ X ಅನ್ನು ಸೂಪರ್ ಅಪ್ಲಿಕೇಶನ್ ಮಾಡಲು ಸಜ್ಜಾಗಿದ್ದಾರೆ. ಈ ವರ್ಷ, ಬಳಕೆದಾರರು ಇದರಲ್ಲಿ ಹಣ ವರ್ಗಾವಣೆ ಮತ್ತು ಟಿವಿಯಂತಹ ವೈಶಿಷ್ಟ್ಯಗಳನ್ನು ನೋಡಬಹುದು. ಇದರ ಹೊರತಾಗಿ, AI ಚಾಟ್‌ಬಾಟ್ ಗ್ರೋಕ್‌ನಲ್ಲಿ ಅನೇಕ ಹೊಸ ನವೀಕರಣಗಳು ಸಹ ಲಭ್ಯವಿರುತ್ತವೆ. ಇದರಿಂದಾಗಿ ಬಳಕೆದಾರರು ಯಾವುದೇ ಸೇವೆಗಾಗಿ ಬೇರೆ ಯಾವುದೇ ಅಪ್ಲಿಕೇಶನ್ ಅನ್ನು ಹುಡುಕಬೇಕಾಗಿಲ್ಲ. ಎಲ್ಲವೂ ಇದರಲ್ಲೇ ಇರಲಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ