ಒಂದಲ್ಲ.. ಎರಡಲ್ಲ..: ಇಂದು ಒಂದೇ ದಿನ ಭಾರತದಲ್ಲಿ ಬರೋಬ್ಬರಿ 4 ಹೊಸ ಸ್ಮಾರ್ಟ್‌ಫೋನ್ಸ್ ರಿಲೀಸ್
ಒಪ್ಪೋದ ಹೊಸ 13 ಸರಣಿಯಲ್ಲಿ, ಒಪ್ಪೋ ರೆನೊ 13 ಮತ್ತು ಒಪ್ಪೋ ರೆನೊ 13 ಪ್ರೊ ಎಂಬ ಎರಡು ಹೊಸ ಫೋನ್‌ಗಳನ್ನು ಇಂದು ಬಿಡುಗಡೆ ಮಾಡಲಾಗುತ್ತದೆ. ಪೋಕೋ X7 ಸರಣಿಯನ್ನು ಇಂದು ಸಂಜೆ 5:30 ಗಂಟೆಗೆ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಪೋಕೋ X7 ಮತ್ತು ಪೋಕೋ X7 ಪ್ರೊ ಎಂಬ ಎರಡು ಫೋನ್ ಇರಲಿದೆ. ಅಧಿಕೃತ ಬಿಡುಗಡೆಯ ನಂತರ, ಒಪ್ಪೋ ಮತ್ತು ಪೋಕೋ ಕಂಪನಿಯ ಈ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯ ಸೈಟ್‌ನ ಹೊರತಾಗಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಿದೆ.
ನೀವು ನಿಮ್ಮ ಹಳೆಯ ಸ್ಮಾರ್ಟ್ಫೋನ್ನಿಂದ ಬೇಸತ್ತು ಹೊಸ ಫೋನ್ ಖರೀದಿಸಲು ಬಯಸಿದರೆ, ಇಂದು ನಾಲ್ಕು ಹೊಸ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಒಪ್ಪೋ ರೆನೊ 13 ಸರಣಿಯ ಹೊರತಾಗಿ, ಪೋಕೋ X7 ಸರಣಿಯು ಇಂದು ದೇಶಕ್ಕೆ ಅಪ್ಪಳಿಸಲಿದೆ. ಈ ಹೊಸ ಫೋನ್ ಬಿಡುಗಡೆ ಆಗುವ ಮೊದಲೇ, ಕಂಪನಿಯು ಈ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ವಿಶೇಷ ವೈಶಿಷ್ಟ್ಯಗಳನ್ನು ದೃಢಪಡಿಸಿದೆ. ಅಧಿಕೃತ ಬಿಡುಗಡೆಯ ನಂತರ, ಒಪ್ಪೋ ಮತ್ತು ಪೋಕೋ ಕಂಪನಿಯ ಈ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯ ಸೈಟ್‌ನ ಹೊರತಾಗಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಿದೆ.
ಒಪ್ಪೋ ರೆನೊ 13 ಸರಣಿ:
ಒಪ್ಪೋದ ಹೊಸ 13 ಸರಣಿಯಲ್ಲಿ, ಒಪ್ಪೋ ರೆನೊ 13 ಮತ್ತು ಒಪ್ಪೋ ರೆನೊ 13 ಪ್ರೊ ಎಂಬ ಎರಡು ಹೊಸ ಫೋನ್‌ಗಳನ್ನು ಇಂದು ಬಿಡುಗಡೆ ಮಾಡಲಾಗುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಸರಣಿಗಾಗಿ ಪ್ರತ್ಯೇಕ ಪುಟವನ್ನು ಸಿದ್ಧಪಡಿಸಲಾಗಿದೆ, ಇದು ಈ ಹೊಸ ಸರಣಿಯನ್ನು ಇಂದು ಸಂಜೆ 5 ಗಂಟೆಗೆ ಬಿಡುಗಡೆ ಆಘಲಿದೆ ಎಂದು ತೋರಿಸುತ್ತದೆ.
ಒಪ್ಪೋ ರೆನೊ 13 ಸರಣಿಯ ಬೆಲೆಗೆ ಸಂಬಂಧಿಸಿದ ಮಾಹಿತಿಯನ್ನು ಇತ್ತೀಚೆಗೆ ಟಿಪ್‌ಸ್ಟರ್ ಸೋರಿಕೆ ಮಾಡಿದ್ದರು. ಸೋರಿಕೆಯ ಪ್ರಕಾರ, ಒಪ್ಪೋ ರೆನೊ 13 ನ 8 GB / 128 GB ಮತ್ತು 8 GB / 256 GB ವೇರಿಯಂಟ್‌ಗಳ ಬೆಲೆ ಕ್ರಮವಾಗಿ 37,000 ರೂ. ಮತ್ತು 39,999 ರೂ. ಆಗಿರಬಹುದು. ಅಂತೆಯೆ 12 GB / 256 GB ಮತ್ತು 12 GB / 512 GB ರೂಪಾಂತರಗಳ ಬೆಲೆ ಕ್ರಮವಾಗಿ 49,999 ರೂ. ಮತ್ತು 54,999 ರೂ. ಆಗಿದೆ.
Moto G05: ಮೋಟೋದಿಂದ ಬಂತು ಬೆರಗುಗೊಳಿಸುವ ಸ್ಮಾರ್ಟ್ಫೋನ್: ಬೆಲೆ ಕೇವಲ 6,999 ರೂ.
ಪೋಕೋ X7 ಸರಣಿ:
ಪೋಕೋ X7 ಸರಣಿಯನ್ನು ಇಂದು ಸಂಜೆ 5:30 ಗಂಟೆಗೆ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಪೋಕೋ X7 ಮತ್ತು ಪೋಕೋ X7 ಪ್ರೊ ಎಂಬ ಎರಡು ಫೋನ್ ಇರಲಿದೆ. ಈ ಎರಡೂ ಫೋನುಗಳ ನಿಖರವಾದ ಬೆಲೆ ವಿವರಗಳು ಇನ್ನೂ ಹೊರಬಂದಿಲ್ಲವಾದರೂ, ಬ್ರ್ಯಾಂಡ್‌ನಿಂದ ಹಂಚಿಕೊಂಡ ಟೀಸರ್ ಚಿತ್ರಗಳು ಪ್ರೊ ಮಾಡೆಲ್‌ನ ಬೆಲೆ ರೂ. 30,000 ಕ್ಕಿಂತ ಕಡಿಮೆ ಇರಬಹುದೆಂದು ಸೂಚಿಸುತ್ತದೆ. ಹಾಗೆಯೆ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು ಮೂಲ ಮಾದರಿಯ ಬೆಲೆ 25,000 ರಿಂದ 27,000 ರೂ. ಇರಬಹುದು ಎಂದು ಹೇಳಿದ್ದಾರೆ.
ಈಫೋನ್ 6.67-ಇಂಚಿನ 1.5K AMOLED ಡಿಸ್ಪ್ಲೇಯನ್ನು ಹೊಂದಿರಬಹುದು. X7 ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ SoC ಮತ್ತು X7 ಪ್ರೊ ಡೈಮೆನ್ಸಿಟಿ 8400-ಅಲ್ಟ್ರಾದೊಂದಿಗೆ ರನ್ ಆಗುತ್ತದೆ. ವೆನಿಲ್ಲಾ ಮಾದರಿಯು OIS+EIS ಮತ್ತು 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 50MP ಸೋನಿ LYT600 ಮುಖ್ಯ ಕ್ಯಾಮೆರಾವನ್ನು ಹೊಂದಿದೆ. X7 ಪ್ರೊ ಇದೇ ರೀತಿಯ ಸೆಟಪ್ ಅನ್ನು ಹೊಂದಿರಬಹುದು ಆದರೆ ವಿಭಿನ್ನ ಸಂವೇದಕಗಳೊಂದಿಗೆ ಬರಲಿದೆ.
X7 ಪ್ರೊ ಮಾದರಿಯು ಬರೋಬ್ಬರಿ 6,550mAh ಬ್ಯಾಟರಿಯನ್ನು ಪ್ಯಾಕ್ ಮಾಡಲು ದೃಢೀಕರಿಸಲಾಗಿದೆ ಮತ್ತು 90W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆಯಬಹುದು. ವೆನಿಲ್ಲಾ ರೂಪಾಂತರವು 5,110mAh ಸೆಲ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ