Facebook Content Report: ಫೇಸ್ಬುಕ್ನಲ್ಲಿ ಯಾರು ಏನನ್ನು ಹೆಚ್ಚು ನೋಡಿದ್ದಾರೆ?: 2021 ಕ್ವಾರ್ಟರ್ 2 ವರದಿ ಬಿಡುಗಡೆ
Most Views Content On Facebook: ಕ್ವಾರ್ಟರ್ 2 2021 ಫೇಸ್ಬುಕ್ನಲ್ಲಿ ಅತಿ ಹೆಚ್ಚು ಜನಪ್ರಿಯವಾದ ಸುದ್ದಿ ಎಂದರೆ ಅದು ಕೋವಿಡ್ 19 ಕುರಿತಾಗಿ. ಇದರ ಜೊತೆಗೆ ಇ ಕಾಮರ್ಸ್ ಸೈಟ್, ವಿಡಿಯೋ ಸ್ಟ್ರೀಮಿಂಗ್ ಸರ್ವಿಸ್, ನಾನ್ ನ್ಯೂಸ್ ವೆಬ್ಸೈಟ್ ಕೂಡ ಇದೇ ಸಾಲಿನಲ್ಲಿದೆ.
ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್ಬುಕ್ (Facebook) 2021ರ ಕ್ವಾರ್ಟರ್ 2 ನಲ್ಲಿ ಬಳಕೆದಾರರು ಅತಿ ಹೆಚ್ಚು ವೀಕ್ಷಿಸಿದ ಕಂಟೆಂಟ್ ಯಾವುದು ಎಂಬುದನ್ನು ಪ್ರಕಟಮಾಡಿದೆ. ಡೊಮೇನ್‌ಗಳು, ಪ್ರತ್ಯೇಕ ಲಿಂಕ್‌ಗಳು ಮತ್ತು ವೈಯಕ್ತಿಕ ಪೋಸ್ಟ್‌ಗಳನ್ನು ಆಧರಿಸಿ ಫೇಸ್ಬುಕ್ ಈ ಮಾಹಿತಿಯನ್ನು ಕಲೆಹಾಕಿದ್ದು, ಅಮೆರಿಕಾದಲ್ಲಿ ಅತಿ ಹೆಚ್ಚಿನ ಬಳಕೆದಾರರು ಕ್ವಾರ್ಟರ್ 2 2021 ರಲ್ಲಿ ವೀಕ್ಷಿಸಿದ್ದಾರೆಂದು ಹೇಳಿದೆ.
ಕ್ವಾರ್ಟರ್ 2 2021 ಫೇಸ್ಬುಕ್ನಲ್ಲಿ ಅತಿ ಹೆಚ್ಚು ಜನಪ್ರಿಯವಾದ ಸುದ್ದಿ ಎಂದರೆ ಅದು ಕೋವಿಡ್ 19 ಕುರಿತಾಗಿ. ಇದರ ಜೊತೆಗೆ ಇ ಕಾಮರ್ಸ್ ಸೈಟ್, ವಿಡಿಯೋ ಸ್ಟ್ರೀಮಿಂಗ್ ಸರ್ವಿಸ್, ನಾನ್ ನ್ಯೂಸ್ ವೆಬ್ಸೈಟ್ ಕೂಡ ಇದೇ ಸಾಲಿನಲ್ಲಿದೆ. ಯೂಟ್ಯೂಬ್, ಅಮೆಜಾನ್, ಯುನಿಸೆಫ್, ಟ್ವಿಟ್ಟರ್, ಟಿಕ್ಟಾಕ್, ಸ್ಪಾಟಿಫೈ, ಗೂಗಲ್ ಡಾಕ್ಸ್, ಎಬಿಸಿ ನ್ಯೂಸ್ ಸೇರಿ ಒಟ್ಟು 20 ಲಿಂಕ್ಗಳನ್ನು ಬಳಕೆದಾರರು ಹೆಚ್ಚು ವೀಕ್ಷಿಸಿದ್ದಾರೆ.
ಇನ್ನೂ ಅತಿ ಹೆಚ್ಚು ಓದಿದ ಪೇಜ್ಗಳ ಪಟ್ಟಿಯಲ್ಲಿ ಯುನಿಸೆಫ್ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಕಿಚೆನ್ ಫನ್ ವಿದ್ ಮೈ 3 ಸನ್ಸ್, ಸಾಸ್ಸಿ ಮೀಡಿಯಾ, ದಿ ಟೊಡೊ, ಲಾಡ್ಬಿಬ್ಲ್, ವೂಫ್ ವೂಫ್, ಎ ವುಮೆನ್ ಸೋಲ್ಡ್, 3ಎಎಮ್ ಥಾಟ್ಸ್, ವರ್ಡ್ ಹೆಲ್ತ್ ಆರ್ಗನೈಸೇಶನ್, ಡೈಲಿ ಮೈಲ್ ಸೇರಿದಂತೆ ಪ್ರಮುಖ ಪೇಜ್ಗಳನ್ನು ಜನರು ಹೆಚ್ಚು ಓದಿದ್ದಾರಂತೆ.
ಅತಿ ಹೆಚ್ಚು ನೋಡಿದ ಟಾಪ್ 20 ಪೋಸ್ಟ್ನಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಮೊದಲ ಸ್ಥಾನದಲ್ಲಿದ್ದರೆ, 5 ನಿಮಿಷದ ಕ್ರಾಫ್ಟ್ ವಿಡಿಯೋ ಕೂಡ ಅಗ್ರಸ್ಥಾನದಲ್ಲಿದೆ.
Realme GT 5G: ರಿಯಲ್ಮಿ ಹೊಸ ಮೊಬೈಲ್: ಕೇವಲ 35 ನಿಮಿಷದಲ್ಲಿ ಫುಲ್ ಚಾರ್ಜ್
Asus ROG 5s: ಏಸಸ್ನಿಂದ ಹೊಸ ಪವರ್ಫುಲ್ ಸ್ಮಾರ್ಟ್ಫೋನ್: ಹುಚ್ಚೆದ್ದು ಕುಣಿದ ಗೇಮಿಂಗ್ ಪ್ರಿಯರು
(Facebook Releases Content Report For Q2 2021 What Users Viewed The Most On Facebook)
Published On - 12:34 pm, Thu, 19 August 21