ಇತ್ತೀಚಿನ ದಿನಗಳಲ್ಲಿ ಫೇಕ್ ಆ್ಯಪ್ಗಳ ಹಾವಳಿ ಹೆಚ್ಚಾಗುತ್ತಿದೆ. ಗೂಗಲ್ ಆಗಾಗ ತನ್ನ ಪ್ಲೇ ಸ್ಟೋರ್ಗೆ ಆವರಿಸಿರುವ ನಕಲಿ ಆ್ಯಪ್ ಅಥವಾ ಹ್ಯಾಕ್ ಮಾಡುವಂತಹ ಆ್ಯಪ್ಗಳ ಬಗ್ಗೆ ಮಾಹಿತಿ ತಿಳಿಸುತ್ತಾ ಇರುತ್ತದೆ. ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್ಗೆ ಡೆವಲಪರ್ಗಳು ಆ್ಯಪ್ಗಳನ್ನು ತಯಾರಿಸಿ ಸೇರ್ಪಡೆಗೊಳಿಸುವುದು ತುಂಬಾ ಸುಲಭವಾಗಿರುವುದರಿಂದಾಗಿ ಫೇಕ್ ಆ್ಯಪ್ ಹೆಚ್ಚಲು ಪ್ರಮುಖ ಕಾರಣ.
ಒಂದೇ ಹೆಸರಿನ, ನೋಡಲು ಕೂಡ ಒಂದೇ ರೀತಿಯಾಗಿರುವ ಆ್ಯಪ್ಗಳು ಒಂದೇ ದಿನದಲ್ಲಿ ಹುಟ್ಟಿಕೊಳ್ಳುವುದರಿಂದ ಇಲ್ಲಿರುವ ಆ್ಯಪ್ಗಳ ಸಾಚಾತನದ ಬಗ್ಗೆ ನಾವು ಎಷ್ಟು ಎಚ್ಚರಿಕೆ ವಹಿಸಲೇಬೇಕಿದೆ.
ಕೆಲ ನಕಲಿ ಅಪ್ಲಿಕೇಶನ್ಗಳು ಕಿರಿಕಿರಿಗೊಳಿಸುವ ಬ್ಯಾನರ್ ಜಾಹೀರಾತುಗಳನ್ನು ಪ್ರದರ್ಶಿಸಿದರೆ, ಇತರ ಆ್ಯಪ್ಗಳು ಗಂಭೀರ ಬೆದರಿಕೆಯನ್ನು ಉಂಟುಮಾಡುತ್ತಿವೆ. ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದ ಲಾಭ ಮಾಡುವ ಆ್ಯಪ್ಗಳು ಕೂಡ ಪ್ಲೇ ಸ್ಟೋರ್ನಲ್ಲಿ ಕಂಡುಬರುತ್ತವೆ. ಹಾಗಾದರೆ, ನಕಲಿ ಅಪ್ಲಿಕೇಶನ್ಗಳನ್ನು ಗುರುತಿಸುವುದು ಹೇಗೆ?
ಪ್ಲೇ ಸ್ಟೋರ್ನಲ್ಲಿ ಒಂದೇ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್ಗಳು ಕಂಡುಬಂದರೆ ಅವುಗಳಲ್ಲಿ ಸಾಮಾನ್ಯವಾಗಿ ಹೆಸರು ಮತ್ತು ವಿವರಣೆಯಲ್ಲಿ ಕಾಗುಣಿತ ತಪ್ಪುಗಳು ವ್ಯತ್ಯಾಸವನ್ನು ತೋರಿಸುತ್ತವೆ. ಡೌನ್ಲೋಡ್ ಮಾಡುವ ಮೊದಲು ಓದಿ ನೋಡಿ
ನಕಲಿ ಆ್ಯಪ್ ತಯಾರಕರು ಈ ಆ್ಯಪ್ ಅನ್ನು ಹೆಚ್ಚು ಜಾಹಿತಾರುಗೊಳಿಸಿರುತ್ತಾರೆ. ಜಾಹಿರಾತು ಮೂಲಕ ಅಥವಾ ಪಾಪ್ ಅಪ್ ವಿಂಡೋಗಳ ಮೂಲಕ ಬೇರೆಯೇ ಹಲವು ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ. ಇಂತಹುಗಳು ಬಹುತೇಕ ದುರುದ್ದೇಶಪೂರಿತ ಕಿರು ತಂತ್ರಾಂಶಗಳೇ ಆಗಿರುತ್ತವೆ.
ಜನಪ್ರಿಯ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಕೌಂಟ್ ಖಂಡಿತವಾಗಿಯೂ ಹೆಚ್ಚಿರುತ್ತದೆ. ಆದಾಗ್ಯೂ, ಒಂದು ಅಪ್ಲಿಕೇಶನ್ ಸುಮಾರು 5,000 ಅಥವಾ ಅದಕ್ಕಿಂತ ಕಡಿಮೆ ಡೌನ್ಲೋಡ್ ಆಗಿದ್ದರೆ, ಅದು ನಕಲಿ ಅಪ್ಲಿಕೇಶನ್ ಆಗುವ ಸಾಧ್ಯತೆಗಳು ಹೆಚ್ಚು.
ನಕಲಿ ಅಪ್ಲಿಕೇಶನ್ ಸ್ಕ್ರೀನ್ಶಾಟ್ಗಳನ್ನು ವಿಲಕ್ಷಣ ಪದಗಳು ಮತ್ತು ವಿಚಿತ್ರ ಫೋಟೋಗಳಿರುವ ಸಾಧ್ಯತೆಯಿದೆ. ಅಂತೆಯೇ, ಆ ಆ್ಯಪ್ನ ವಿಮರ್ಶೆಗಳು ಮತ್ತು ರೇಟಿಂಗ್ಸ್ ಅನ್ನು ಪರಿಶೀಲಿಸಿ.
ಸೆಕ್ಯುರಿಟಿ ತಂತ್ರಜ್ಞರು ಎಚ್ಚರಿಸಿದ ಪ್ರಕಾರ, ವೈರಸ್ ಕ್ಲೀನರ್, ವೈರಸ್ ಬೂಸ್ಟರ್, ಆಯಂಟಿ ವೈರಸ್, ಆ್ಯಪ್ ಲಾಕ್, ಕ್ಲೀನರ್, ಆಯಂಟಿ ವೈರಸ್ ಫ್ರೀ, ವೈರಸ್ ರಿಮೂವರ್, ಗೇಮ್ ಬಿಲಿಯರ್ಡ್ಸ್, ಚಿಲ್ಡ್ರನ್ ಪೊಲೀಸ್, ಗೇಮ್ ಆಫ್ ಕಾರ್ಸ್ ಹೀಗೆಲ್ಲ ವಿಭಿನ್ನ ಹೆಸರುಗಳಲ್ಲಿರುವ ಆ್ಯಪ್ ಗಳು ನಕಲಿ ಎಂದು ತಜ್ಞರು ಎಚ್ಚರಿಸಿದ್ದಾರೆ.
Published On - 3:35 pm, Mon, 6 December 21