ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ (Flipkart) ಬಿಗ್ ಬಿಲಿಯನ್ ಡೇಸ್ ಸೇಲ್ (Flipkart Big Billion Days Sale) ಭರ್ಜರಿ ಆಗಿ ಮುಂದುವರೆಯುತ್ತಿದೆ. ಅಕ್ಟೋಬರ್ 3ರಂದು ಶುರುವಾಗಿರುವ ಈ ಮೇಳ ಅಕ್ಟೋಬರ್ 10ರ ವರೆಗೂ ಚಾಲ್ತಿಯಲ್ಲಿರಲಿದೆ. ಎಲೆಕ್ಟ್ರಾನಿಕ್ ಹಾಗೂ ಗ್ಯಾಡ್ಜೆಟ್ಸ್‌ಗಳಿಗೆ ಭಾರೀ ರಿಯಾಯಿತಿ ಕೊಡುಗೆಗಳನ್ನು ನೀಡುತ್ತ ಗ್ರಾಹಕರನ್ನು ಸೆಳೆಯುತ್ತಿದೆ. ಅದರಲ್ಲೂ ಈ ಹಬ್ಬದ ಸೇಲ್‌ನಲ್ಲಿ ಪ್ರಮುಖ ಆಯ್ದ ಕೆಲವು ನೂತನ ಸ್ಮಾರ್ಟ್‌ಫೋನ್‌ಗಳು (Smartphone) ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಕ್ರೇಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಖರೀದಿಸುವವರಿಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಕೂಡ ಸಿಗಲಿದೆ. ಹಾಗಾದ್ರೆ 20,000 ರೂ. ಒಳಗೆ ಲಭ್ಯವಿರುವ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphones Under Rs 20,000) ನೋಡುವುದಾದರೆ.
ರಿಯಲ್‌ಮಿ 8i ಸ್ಮಾರ್ಟ್‌ಫೋನಿನ ಮೂಲ ಬೆಲೆ 15,999 ರೂ. ಆದರೆ, ಸದ್ಯ ಇದು ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಕೇವಲ 12,999 ರೂ. ಗಳಿಗೆ ಮಾರಾಟ ಕಾಣುತ್ತಿದೆ. ಇದು 6.6-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G96 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಹೊಂದಿದೆ. ಎರಡು ಮತ್ತು ಮೂರನೇ ಕ್ಯಾಮೆರಾ 2MP ಸೆನ್ಸಾರ್ ಹೊಂದಿದೆ. ಇದು 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಪೋಕೋ X3 ಪ್ರೊ ಸ್ಮಾರ್ಟ್‌ಫೋನ್ ಕೂಡ ಆಫರ್‌ನಲ್ಲಿ ಕಾಣಿಸಿಕೊಂಡಿದೆ. 6GB RAM + 128GB ಸ್ಟೋರೇಜ್ ಹೊಂದಿರುವ ಫೋನ್ ಅನ್ನು 16,999 ರೂ.ಗಳಿಗೆ ಪಡೆಯಬಹುದು. ಹಾಗೆಯೇ 8GB RAM + 128GB ಸ್ಟೋರೇಜ್ ಮಾದರಿಯನ್ನು 18,999 ರೂ.ಗಳಿಗೆ ಖರೀದಿಸಬಹುದು.
21,999 ರೂ. ಹೊಂದಿರುವ ಮೋಟೋ G60 ಸ್ಮಾರ್ಟ್‌ಫೋನ್ ಕೇವಲ 15,999 ರೂ. ಗಳಿಗೆ ಲಭ್ಯವಾಗುತ್ತಿದೆ. ಜೊತೆಗೆ ಖರೀದಿದಾರರು ಹೆಚ್ಚುವರಿಯಾಗಿ ಕೆಲವು ಬ್ಯಾಂಕ್ ಆಫರ್‌ಗಳನ್ನು ಕೂಡ ಪಡೆಯಬಹುದು. ಇನ್ನು ಈ ಸ್ಮಾರ್ಟ್‌ಫೋನ್ 6.80-ಇಂಚಿನ ಮ್ಯಾಕ್ಸ್ ವಿಷನ್ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ HDR10 ಅನ್ನು ಬೆಂಬಲಿಸಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732ಜಿ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು. ಇದು 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಇನ್ನೂ ಮೋಟೋ G40 ಫ್ಯೂಷನ್ ಸ್ಮಾರ್ಟ್‌ಫೋನ್ ಮೂಲ ಬೆಲೆ 16,999 ರೂ. ಆಗಿದ್ದು, ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ 12,999 ರೂ.ಗಳಿಗೆ ಲಭ್ಯವಾಗುತ್ತಿದೆ. ಇದು 6.80 ಇಂಚಿನ ಮ್ಯಾಕ್ಸ್ ವಿಷನ್ ಫುಲ್ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಹೆಚ್‌ಡಿಆರ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732ಜಿ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಬೃಹತ್ 6000mAh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ.
Windows 11: ಬಹುನಿರೀಕ್ಷಿತ ಹೊಸ ಮೈಕ್ರೋಸಾಫ್ಟ್ ವಿಂಡೀಸ್ 11 ಅಪ್ಡೇಟ್ ಲಭ್ಯ: ಏನು ವಿಶೇಷತೆ?, ಅಪ್ಡೇಟ್ ಹೇಗೆ?
(Flipkart Big Billion Days Sale Smartphone under Rs 20000 You can check out this list)