ಪೋಕೋ M3 ಪ್ರೊ 5G ಮೊಬೈಲ್ ಫೋನ್ ಮಾರಾಟ ಇಂದು (ಜೂನ್ 14) ಆರಂಭವಾಗಲಿದೆ. ಮಧ್ಯಾಹ್ನ 12ಕ್ಕೆ ಇ ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ಮಾರಾಟ ಶುರುವಾಗಲಿದೆ. ಯಾರಿಗೆ ಆಸಕ್ತಿ ಇದೆಯೋ ಅಂಥವರು ವೆಬ್ಸೈಟ್ನಲ್ಲಿ ಪ್ರಯತ್ನಿಸಬಹುದು. ಪೋಕೋ M3 ಪ್ರೊ 5G ಮೊಬೈಲ್ ಫೋನ್ನ ಬೇಸ್ ಮಾಡೆಲ್ 6GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ಫೋನ್ ಬೆಲೆ ರೂ. 13,499ರಿಂದ ಆರಂಭವಾಗುತ್ತದೆ. ಈ ಫೋನ್ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ಇರುವಂಥದ್ದು 15,499 ರೂಪಾಯಿ ಆಗುತ್ತದೆ. ಇದರ ಜತೆಗೆ ಬ್ಯಾಂಕ್ ಆಫರ್ ಎಸ್ಬಿಐ ಕಾರ್ಡ್ನೊಂದಿಗೆ ಶೇ 10ರ ಕಡಿತ ದೊರೆಯುತ್ತದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಜತೆಗೆ ಶೇ 5ರಷ್ಟು ಕ್ಯಾಶ್ಬ್ಯಾಕ್ ಸಿಗುತ್ತದೆ. ನೋ ಕಾಸ್ಟ್ ಇಎಂಐ ರೂ. 2,584ನಿಂದ ಆರಂಭವಾಗುತ್ತದೆ.
ಪೋಕೋ M3 ಪ್ರೊ 5G ವೈಶಿಷ್ಟ್ಯ
ಪೋಕೋ M3 ಪ್ರೊ 5G ಫೋನ್ 6.5 ಇಂಚಿನ ಎಫ್ಎಚ್ಡಿ+ ಎಲ್ಸಿಡಿ ಸ್ಕ್ರೀನ್ ಪಿಕ್ಸೆಲ್ ರೆಸಲ್ಯೂಷನ್ 2400X1800 ರಿಫ್ರೆಷ್ ದರ 90Hz ಮತ್ತು ಮೇಲ್ಭಾಗದಲ್ಲಿ ಕಾರ್ನಿಂಗ್ ಗ್ಲಾಸ್ ಬರುತ್ತದೆ. ಈ ಸ್ಮಾರ್ಟ್ಫೋನ್ 7nm ಮೀಡಿಯಾಟೆಕ್ ಡೈಮೆನ್ಸಿಟಿ 700 5G ಪ್ರೊಸೆಸರ್ ಜತೆ ಬರುತ್ತದೆ. MIUI 12 ಆಧಾರಿತ ಆಂಡ್ರಾಯಿಡ್ 11 ಆಪರೇಟಿಂಗ್ ಸಿಸ್ಟಮ್ನಲ್ಲಿ ನಡೆಯುತ್ತದೆ. ಈ ಹ್ಯಾಂಡ್ಸೆಟ್ 6GB RAM ಮತ್ತು 128GB ತನಕ ಸಂಗ್ರಹ ಸಾಮರ್ಥ್ಯ ಬರುತ್ತದೆ.
ಪೋಕೋ M3 ಪ್ರೊ 5G ಮೊಬೈಲ್ ಫೋನ್ ಮುಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಕ್ಯಾಮೆರಾದಲ್ಲಿ 48MP ಪ್ರಾಥಮಿಕ ಕ್ಯಾಮೆರಾ (f/1.8) ಜತೆಗೆ 2MP ಮ್ಯಾಕ್ರೋ ಕ್ಯಾಮೆರಾ 2MP ಡೆಪ್ತ್ ಕ್ಯಾಮೆರಾ ಇದೆ. ಸೆಲ್ಫಿಗಾಗಿ 8MP ಕ್ಯಾಮೆರಾ ಬರುತ್ತದೆ. ಈ ಮೊಬೈಲ್ ಫೋನ್ನಲ್ಲಿ 5000mAh ಬ್ಯಾಟರಿ ಇದ್ದು, ಇದರ ಜತೆಗೆ 22.5 ವ್ಯಾಟ್ ಚಾರ್ಜರ್ ಬರುತ್ತದೆ. ಕೂಲ್ ಬ್ಲ್ಯೂ, ಪವರ್ ಬ್ಲ್ಯಾಕ್ ಮತ್ತು ಹಳದಿ ಬಣ್ಣಗಳಲ್ಲಿ ಪೋಕೋ M3 ಪ್ರೊ 5G ಮೊಬೈಲ್ ಫೋನ್ ಬರುತ್ತದೆ.
ಇದನ್ನೂ ಓದಿ: Poco M3 Pro 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ; 1 ಟಿಬಿ ಸಂಗ್ರಹಣಾ ಸಾಮರ್ಥ್ಯ ಬೆಂಬಲಿಸುವ ಕಡಿಮೆ ಬೆಲೆಯ ಫೋನ್
(Poco M3 Pro 5G mobile phone sale start from today. Colour, price, specification and other details here)
Published On - 11:51 am, Mon, 14 June 21