Flipkart Big Saving Days: 6000mAh ಬ್ಯಾಟರಿಯ ಈ ಸ್ಮಾರ್ಟ್‌ಫೋನ್ ಕೇವಲ 7,199 ರೂ. ಗೆ ಲಭ್ಯ
ಫ್ಲಿಪ್‌ಕಾರ್ಟ್ ನಲ್ಲಿ ನಡೆಯುತ್ತಿರುವ ಬಿಗ್ ಸೇವಿಂಗ್ ಡೇಸ್ 2021ರಲ್ಲಿ ಜನಪ್ರಿಯ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ದೊಡ್ಡ ರಿಯಾಯಿತಿ ನೀಡಲಾಗಿದೆ.

ಪ್ರಸಿದ್ಧ ಇ ಕಾಮರ್ಸ್ಗಳಲ್ಲಿ ಅತಿ ದೊಡ್ಡ ಮೇಳ ಶುರುವಾಗಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದ ಅಮೆಜಾನ್ ಇಂಡಿಯಾದಲ್ಲಿ ಪ್ರೈಮ್ ಡೇ ಸೇಲ್ (Amazon Prime Day Sale) ಶುರುವಾಗಲಿದೆ. ಇತ್ತ ಫ್ಲಿಪ್ಕಾರ್ಟ್ನಲ್ಲಿ (Flipkart) ಈಗಾಗಲೇ ಬಿಗ್ ಸೇವಿಂಗ್ ಡೇಸ್ 2021 ಮೇಳ ಶುರುವಾಗಿದೆ. ಈ ಬಿಗ್ ಸೇವಿಂಗ್ ಡೇಸ್ 2021 ಸೇಲ್ ಇದೇ ಜುಲೈ 29ರ ವರೆಗೂ ನಡೆಯಲಿದೆ.
ಫ್ಲಿಪ್‌ಕಾರ್ಟ್ ಜನಪ್ರಿಯ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ದೊಡ್ಡ ರಿಯಾಯಿತಿಯನ್ನು ನೀಡುತ್ತದೆ. ಮುಖ್ಯವಾಗಿ ಈ ಸೇಲ್‌ನಲ್ಲಿ ಆಯ್ದ ಸ್ಮಾರ್ಟ್ಫೋನ್ಗಳು ಭರ್ಜರಿ ಡಿಸ್ಕೌಂಟ್ ದೊರೆಯುತ್ತಿದೆ. ಇದರಲ್ಲಿ ಇನ್ಫಿನಿಕ್ಸ್ ಕಂಪೆನಿ ಕಳೆದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿದ ಇನ್ಫಿನಿಕ್ಸ್ ಸ್ಮಾರ್ಟ್ 5 ಸ್ಮಾರ್ಟ್‌ಫೋನ್ ಕೇವಲ 7,199 ರೂ. ಗೆ ಮಾರಾಟ ಆಗುತ್ತಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 5 ಫೋನಿನ ಮೂಲಬೆಲೆ 8,999 ರೂ. ಆಗಿದೆ. ಆದರೆ, ಸದ್ಯ ಬಿಗ್ ಸೇವಿಂಗ್ ಡೇಸ್ನಲ್ಲಿ ಇದು ಕೇವಲ 7,199 ರೂ. ಗೆ ಸಿಗುತ್ತಿದೆ. ಇಷ್ಟೇ ಅಲ್ಲದೆ 6,650 ರೂ. ವರೆಗೆ ಎಕ್ಸ್ಚೇಂಜ್ ಆಫರ್ ಕೂಡ ನೀಡಲಾಗಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 5 ಸ್ಮಾರ್ಟ್‌ಫೋನ್ 6.82-ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G25 SoC ಪ್ರೊಸೆಸರ್ ಅಳವಡಿಸಲಾಗಿದ್ದು, 2GB RAM + 32GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಎರಡೂ ಕ್ಯಾಮೆರಾಗಳು 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಿಂದ ಕೂಡಿದೆ. ಇನ್ನು ಕ್ಯಾಮೆರಾದಲ್ಲಿ ಎಲ್‌ಇಡಿ ಫ್ಲ್ಯಾಷ್ ಅನ್ನು ಸಹ ನೀಡಲಾಗಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. 6,000mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ನೀಡಲಾಗಿದ್ದು, ಇದು 50 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ತಲುಪಿಸುತ್ತದೆ. 4G ಟಾಕ್‌ಟೈಮ್‌ನ 53 ಗಂಟೆಗಳವರೆಗೆ ಫೋನ್ ಇರುತ್ತದೆ ಎಂದು ಇನ್ಫಿನಿಕ್ಸ್ ಹೇಳಿದೆ.
Samsung galaxy: 6000mAh ಬ್ಯಾಟರಿ, 5 ಕ್ಯಾಮೆರಾ: ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್ ಮೇಲೆ ಭಾರೀ ಡಿಸ್ಕೌಂಟ್..!
Attention! ಮೊಬೈಲ್ ಬಳಕೆದಾರರೇ ಎಚ್ಚರ: ಈ ಆ್ಯಪ್ಗಳನ್ನು ತಕ್ಷಣವೇ ಡಿಲೀಟ್ ಮಾಡಿ
(Flipkart Big Saving Days Sale Now Live This Infinix Smartphone You Must Check Out)