Attention! ಮೊಬೈಲ್ ಬಳಕೆದಾರರೇ ಎಚ್ಚರ: ಈ ಆ್ಯಪ್ಗಳನ್ನು ತಕ್ಷಣವೇ ಡಿಲೀಟ್ ಮಾಡಿ
Android Apps: ಕೆಲ ಆ್ಯಪ್ಗಳನ್ನು ಡೌನ್‌ಲೋಡ್ ಮಾಡಿರುವ ಬಳಕೆದಾರ ಡೇಟಾ ಮೇಲೆ ಹ್ಯಾಕರುಗಳು ಕಣ್ಣಿಟ್ಟಿರುತ್ತಾರೆ. ಹೀಗಾಗಿ ನಿಮ್ಮಲ್ಲಿರುವ ಕೆಲ ಆ್ಯಪ್ಗಳು ಈಗ ಪ್ಲೇ ಸ್ಟೋರ್‌ನಲ್ಲಿ ಇರದಿದ್ದರೆ ಕೂಡಲೇ ಡಿಲೀಟ್ ಮಾಡುವುದು ಉತ್ತಮ ಎಂದು ಸೈಬರ್ ಸೆಕ್ಯುರಿಟಿ ಸಂಶೋಧಕರು ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಎಚ್ಚರ. ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಹಲವು ಆ್ಯಪ್ಗಳನ್ನು ಬಳಸುತ್ತಿದ್ದೀರಾ? ಹಾಗಿದ್ರೆ ಜಾಗರೂಕರಾಗಿರಿ. ಏಕೆಂದರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಹಳಷ್ಟು ದುರುದ್ದೇಶಪೂರಿತ ಅಪ್ಲಿಕೇಶನ್‌ಗಳು ಎಂಬುದು ಮತ್ತೊಮ್ಮೆ ಪತ್ತೆಯಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಒಟ್ಟು 11 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮೂಲಕ ಜೋಕರ್ ಮಾಲ್‌ವೇರ್ (joker malware) ಹರಡಿದೆ ಎಂದು ಸೈಬರ್ ಸೆಕ್ಯುರಿಟಿ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಹೊಸ ಜೋಕರ್ ಮಾಲ್‌ವೇರ್ ವೈರಸ್ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಬಳಕೆದಾರರ SMS, ಕನೆಕ್ಟಿಂಗ್ ಲೀಸ್ಟ್, ಡಿವೈಸ್ ಮಾಹಿತಿ ಮತ್ತು OTP ಮಾಹಿತಿಗಳನ್ನು ಕಲೆಹಾಕುತ್ತಿದೆ ಎಂದು ಸೈಬರ್ ಸೆಕ್ಯುರಿಟಿ ಎಚ್ಚರಿಸಿದ್ದಾರೆ. ಈ ಹಿಂದೆ ಕೂಡ ಜೋಕರ್ ಮಾಲ್‌ವೇರ್ ಡಿಜಿಟಲ್ ಕ್ಷೇತ್ರದಲ್ಲಿ ಸದ್ದು ಮಾಡಿತ್ತು. ಹಲವು ಆ್ಯಪ್ಗಳ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರ ಮೇಲೆ ಪ್ರಭಾವ ಬೀರಿತ್ತು. ಆ ಮೂಲಕ ಬಳಕೆದಾರರ ವೈಯಕ್ತಿಕ ಡೇಟಾ, ಚಾಟ್ ಮತ್ತು ಇತರ ಅಪ್ಲಿಕೇಶನ್‌ಗಳ ಮೇಲೆ ಕಣ್ಣಿಟ್ಟಿರುವುದು ಗೊತ್ತಾಗಿತ್ತು. ಅಷ್ಟೇ ಅಲ್ಲದೆ ಹಣಕಾಸಿನ ವಿವರಗಳಾದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯುವ ಸಾಮರ್ಥ್ಯವನ್ನು ಈ ಮಾಲ್‌ವೇರ್ ಹೊಂದಿತ್ತು. ಇದೀಗ ಮತ್ತೊಮ್ಮೆ ಜೋಕರ್ ಮಾಲ್‌ವೇರ್ ಗೂಗಲ್ ಪ್ಲೇ ಸ್ಟೋರ್ ಮೂಲಕ ಸ್ಮಾರ್ಟ್ಫೋನ್ಗಳನ್ನು ಟಾರ್ಗೆಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ಪ್ಲೇ ಸ್ಟೋರ್‌ನಲ್ಲಿ ಒಟ್ಟು 11 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮೂಲಕ ಮಾಲ್‌ವೇರ್ ಹರಡಿದೆ ಎಂದು ಸೈಬರ್ ಭದ್ರತಾ ಸಂಶೋಧಕರು ಎಚ್ಚರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ Translate Free, PDF Converter Scanner, Free Effluent Messages, Deluxe Keyboard ಆ್ಯಪ್ಗಳಲ್ಲಿ ಈ ಮಾಲ್‌ವೇರ್ ಇದ್ದು, ಇಂತಹ ಆ್ಯಪ್ಗಳು ನಿಮ್ಮ ಮೊಬೈಲ್ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ತಿಳಿಸಲಾಗಿದೆ.
ಜೋಕರ್ ಮಾಲ್‌ವೇರ್ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ಈ ಅಪ್ಲಿಕೇಶನ್‌ಗಳು ಈಗಾಗಲೇ 30,000 ಕ್ಕೂ ಹೆಚ್ಚು ಡೌನ್‌ಲೋಡ್ ಆಗಿವೆ. ಇಂತಹ ಅಪ್ಲಿಕೇಶನ್‌ಗಳು ಮುಖ್ಯವಾಗಿ ಬ್ಯಾಂಕಿಂಗ್ ಮಾಹಿತಿಗಳ ಮೇಲೆ ಕಣ್ಣಿಡುತ್ತವೆ. ಈ ಅಪ್ಲಿಕೇಶನ್‌ಗಳು ಕೆಲ ವೈಶಿಷ್ಟ್ಯಗಳೊಂದಿಗೆ ಆಮಿಷವೊಡ್ಡುವ ಮೂಲಕ ಬಳಕೆದಾರರನ್ನು ಮೋಸಗೊಳಿಸುತ್ತವೆ ಎಂದು ಸ್ಕೇಲರ್ಸ್ ಥ್ರೆಟ್‌ಲ್ಯಾಬ್ಸ್‌ನ ಸಂಶೋಧಕರು ಎಚ್ಚರಿಸಿದ್ದಾರೆ. ಈಗಾಗಲೇ ಈ ಬಗ್ಗೆ ಗೂಗಲ್ಗೂ ಮಾಹಿತಿ ನೀಡಲಾಗಿದ್ದು, ಅದರಂತೆ ಗೂಗಲ್ ಈ ಎಲ್ಲಾ 11 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ ಎಂದು ವರದಿ ತಿಳಿಸಿದೆ.
ಪ್ಲೇ ಸ್ಟೋರ್ ಈ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ್ದರೂ, ಆತಂಕಕಾರಿ ಸಂಗತಿಯೆಂದರೆ, Googleನ ಸುರಕ್ಷತೆಯ ಹೊರತಾಗಿಯೂ, ಮಾಲ್‌ವೇರ್ ಮತ್ತೆ ಮತ್ತೆ ಬರುತ್ತಿರುವುದು. ಭವಿಷ್ಯದಲ್ಲಿ ನಿಮ್ಮ ಫೋನ್ ಅಂತಹ ಮಾಲ್‌ವೇರ್‌ನಿಂದ ಪ್ರಭಾವಿತವಾಗುವುದನ್ನು ತಡೆಯಲು, ಪ್ಲೇ ಸ್ಟೋರ್‌ನಿಂದ ಅನುಮಾನಸ್ಪದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಿರಿ. ಬಳಕೆದಾರರು ತಮ್ಮ ಫೋನ್‌ನಲ್ಲಿ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು ಡೆವಲಪರ್ ಹೆಸರು ಮತ್ತು ಇತರ ಎಲ್ಲ ವಿವರಗಳನ್ನು ಪ್ಲೇ ಸ್ಟೋರ್ ವಿವರಗಳಲ್ಲಿ ಪರಿಶೀಲಿಸಬೇಕು. ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು, ಬಳಕೆದಾರರು ಮೊದಲು ಬಳಕೆದಾರರ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ಪರಿಶೀಲಿಸಬೇಕು. ಮುನ್ನೆಚ್ಚರಿಕೆಯಾಗಿ, ಬಳಕೆದಾರರು ಮಾಲ್ವೇರ್ಬೈಟ್ಸ್ (Malwarebytes) ಅಥವಾ ಸೋಫೋಸ್( Sophos Mobile) ಮೊಬೈಲ್‌ನಂತಹ ಭದ್ರತಾ ಆ್ಯಪ್ಗಳನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದು. ಈ ಆ್ಯಪ್ಗಳು ಮಾಲ್‌ವೇರ್ ಅನ್ನು ತ್ವರಿತವಾಗಿ ಸ್ಕ್ಯಾನ್ ಮಾಡುತ್ತದೆ ಮತ್ತು ಡಿಲೀಟ್ ಮಾಡುತ್ತವೆ.
ಇನ್ನು Translate Free, PDF Converter Scanner, Free Effluent Messages, Deluxe Keyboard ಸೇರಿದಂತೆ ಕೆಲ ಆ್ಯಪ್ಗಳನ್ನು ಡೌನ್‌ಲೋಡ್ ಮಾಡಿರುವ ಬಳಕೆದಾರ ಡೇಟಾ ಮೇಲೆ ಹ್ಯಾಕರುಗಳು ಕಣ್ಣಿಟ್ಟಿರುತ್ತಾರೆ. ಹೀಗಾಗಿ ನಿಮ್ಮಲ್ಲಿರುವ ಕೆಲ ಆ್ಯಪ್ಗಳು ಈಗ ಪ್ಲೇ ಸ್ಟೋರ್‌ನಲ್ಲಿ ಇರದಿದ್ದರೆ ಕೂಡಲೇ ಡಿಲೀಟ್ ಮಾಡುವುದು ಉತ್ತಮ ಎಂದು ಸೈಬರ್ ಸೆಕ್ಯುರಿಟಿ ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ: MS Dhoni: ಧೋನಿ ಕೋಚ್ ಆಗಲಿದ್ದಾರೆ: ಮಾಜಿ ಕ್ರಿಕೆಟಿಗನ ಭವಿಷ್ಯ..!
ಇದನ್ನೂ ಓದಿ: India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
(Attention! joker malware, If these apps are installed in the phone, then delete it immediately)