ಕೊರೊನಾ ಎರಡನೇ ಅಲೆ ಕಾರಣ ರಾಜ್ಯದ ಹಲವೆಡೆ ಲಾಕ್ಡೌನ್ ಚಾಲ್ತಿಯಲ್ಲಿದ್ದು, ಜೂನ್ 14ರ ನಂತರವೂ 11 ಜಿಲ್ಲೆಗಳಲ್ಲಿ ಬಿಗಿ ನಿಯಮಾವಳಿಗಳು ಮುಂದುವರೆಯುತ್ತಿದೆ. ಈ ಸಂದರ್ಭದಲ್ಲಿ ಜನರಿಗೆ ಹೊಸತೇನಾದರೂ ಖರೀದಿಸಬೇಕೆಂದರೆ ಆನ್ಲೈನ್ ಮಾರುಕಟ್ಟೆಗಳೇ ಸರ್ವಸ್ವ ಎಂಬಂತಾಗಿವೆ. ಅದಕ್ಕೆ ಪೂರಕವಾಗಿ ಈ ಆನ್ಲೈನ್ ಮಾರುಕಟ್ಟೆಗಳಲ್ಲಿ ಕೆಲ ಆಫರ್ಗಳನ್ನೂ ಘೋಷಿಸುವುದರಿಂದ ಜನರು ಸಹಜವಾಗಿಯೇ ಅದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದೀಗ ಜೂನ್ 13ರಿಂದ ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ಸ್ ಡೇ ಸೇಲ್ ಆರಂಭವಾಗುತ್ತಿದ್ದು, ಅತ್ಯಾಕರ್ಷಕ ಸ್ಮಾರ್ಟ್ಫೊನ್ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಅನೇಕ ದಿನಗಳ ನಂತರ ಒಂದೊಳ್ಳೇ ಸ್ಮಾರ್ಟ್ಫೋನ್ ಕೊಳ್ಳಬೇಕೆಂದು ಯೋಜನೆ ಹಾಕಿಕೊಂಡವರು ಈ ಕೆಳಗಿನವುಗಳಲ್ಲಿ ಯಾವುದು ನಿಮ್ಮ ಜೇಬಿಗೆ ಸೂಕ್ತ ಎಂದು ನೋಡಬಹುದು.
ಜೂನ್ 13ರಿಂದ ಆರಂಭವಾಗುತ್ತಿರುವ ಈ ರಿಯಾಯಿತಿ ಮೇಳದಲ್ಲಿ ಎಸ್ಬಿಐ ಕಾರ್ಡ್ ಹೊಂದಿರುವವರಿಗೆ ಇರುವ ರಿಯಾಯಿತಿ ಮೇಲೆ ಹೆಚ್ಚುವರಿಯಾಗಿ ಶೇ.10ರಷ್ಟು ಡಿಸ್ಕೌಂಟ್ ಸಿಗಲಿದೆ. ಸದ್ಯ ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ರಿಯಾಯಿತಿ ಘೋಷಿಸಲಾಗಿದ್ದು, ಸ್ಮಾರ್ಟ್ಫೋನ್ಗಳ ಮೇಲಿಉವ ಆಫರ್ ತುಸು ಹೆಚ್ಚೇ ಗಮನ ಸೆಳೆಯುತ್ತಿದೆ.
ಗೂಗಲ್ ಪಿಕ್ಸೆಲ್ 4ಎ, ಐಫೋನ್ 11 ಪ್ರೋ, ಮೋಟೋರೋಲಾ ರೇಜರ್ 5ಜಿ, ಸ್ಯಾಮ್ಸಂಗ್ ಗ್ಯಲಾಕ್ಸಿ ಎಫ್ 12, ಏಸಸ್ ಆರ್ಓಜಿ ಫೋನ್ 3 ಸೇರಿದಂತೆ ಇನ್ನಿತರ ಮಾದರಿಗಳ ಮೇಲೆ ಫ್ಲಿಪ್ಕಾರ್ಟ್ ರಿಯಾಯಿತಿ ಘೋಷಿಸಿದೆ. ಅವುಗಳ ಪೈಕಿ ಹೆಚ್ಚು ಗಮನ ಸೆಳೆಯುತ್ತಿರುವ ಸ್ಮಾರ್ಟ್ಫೋನ್ಗಳು ಇಂತಿವೆ.
ಏಸಸ್ ಆರ್ಓಜಿ ಫೋನ್ 3 ಮಾರುಕಟ್ಟೆಯಲ್ಲಿ ಹೊಸ ನಿರೀಕ್ಷೆಗಳೊಂದಿಗೆ ಗ್ರಾಹಕರನ್ನು ಎದುರುಗೊಂಡಿದ್ದು, 46,999ರೂ. ಮೂಲಬೆಲೆಯ ಈ ಮಾದರಿಯನ್ನು ಆಫರ್ ವೇಳೆ 41,999 ರೂ.ಗಳಿಗೆ ಮಾರಾಟ ಮಾಡಲು ಫ್ಲಿಪ್ಕಾರ್ಟ್ ನಿರ್ಧರಿಸಿದೆ. ಆ ಮೂಲಕ ಗ್ರಾಹಕರಿಗೆ 5,000 ರೂಪಾಯಿಗಳ ಭರ್ಜರಿ ರಿಯಾಯಿತಿ ನೀಡುತ್ತಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್ 12 ಫೋನ್ ಈಗಾಗಲೇ ಮೊಬೈಲ್ ಪ್ರಿಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಾಧಾರಣ ಬೆಲೆಯಲ್ಲಿ ಸಿಗುತ್ತಿರುವ ಒಂದೊಳ್ಳೇ ಫೋನ್ ಆಗಿರುವ ಕಾರಣಕ್ಕೆ ಜನ ಇದನ್ನು ಇಷ್ಟಪಡುತ್ತಿದ್ದಾರೆ. 10,999ರೂ. ಮೂಲಬೆಲೆಯ ಈ ಫೊನ್ ಮೇಲೆ ಫ್ಲಿಪ್ಕಾರ್ಟ್ 1ಸಾವಿರ ರೂ. ರಿಯಾಯಿತಿ ನೀಡುತ್ತಿದ್ದು, 9,999ರೂ.ಗೆ ಸಿಗಲಿದೆ.
ಗೂಗಲ್ ಪಿಕ್ಸೆಲ್ 4ಎ ಫೋನ್ಗೆ ಅದರದ್ದೇ ಆದ ಅಭಿಮಾನಿ ವರ್ಗವಿದೆ. ಮೊದಲಿನಿಂದಲೂ ಗೂಗಲ್ ಫೋನ್ ಇಷ್ಟಪಟ್ಟವರು ಇದನ್ನು ಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. 29,999ರೂ. ಮೂಲಬೆಲೆಯ ಈ ಫೋನ್ ಇದೀಗ 26,999ರೂ.ಗೆ ಲಭ್ಯವಿದೆ.
ಐಕೂ 3 ಎಂಬ 5ಜಿ ಫೋನ್ ವಿಶಿಷ್ಟ ವಿನ್ಯಾಸದೊಂದಿಗೆ ಗ್ರಾಹಕರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ. ಈ ಫೋನ್ ಮೇಲೆ 10ಸಾವಿರ ರೂಪಾಯಿಗಳ ಭರ್ಜರಿ ರಿಯಾಯಿತಿ ಇದ್ದು 34,990ರೂ. ಮೂಲಬೆಲೆ ಹೊಂದಿರುವ ಇದು ಆಫರ್ ವೇಳೆ 24,990 ರೂ.ಗೆ ಸಿಗಲಿದೆ.
ಐಫೋನ್ನ ಎರಡು ಮಾದರಿಗಳ ಮೇಲೂ ರಿಯಾಯಿತಿ ಘೋಷಿಸಿರುವ ಫ್ಲಿಪ್ಕಾರ್ಟ್ ಐಫೋನ್ ಎಕ್ಸ್ಆರ್ ಹಾಗೂ ಐಫೋನ್ 11 ಪ್ರೋ ಮಾದರಿಗಳನ್ನು ಕೊಂಚ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಸುಮಾರು 42 ಸಾವಿರ ರೂಪಾಯಿ ಆಸುಪಾಸಿನ ಮೂಲಬೆಲೆ ಹೊಂದಿದ ಐಫೋನ್ ಎಕ್ಸ್ಆರ್ 39,999ರೂ.ಗೆ ಹಾಗೂ 79,999ರೂ ಮೂಲಬೆಲೆಯ ಐಫೋನ್ 11 ಪ್ರೋ 74,990ರೂ.ಗೆ ಮಾರಾಟವಾಗಲಿದೆ.
ಈ ಎಲ್ಲಾ ಫೋನ್ಗಳಿಗಿಂತಲೂ ವಿಭಿನ್ನವಾಗಿರುವ ಹಾಗೂ ವಿನ್ಯಾಸದ ಮೂಲಕವೇ ಕಣ್ಮನ ಗೆಲ್ಲುತ್ತಿರುವ ಮೋಟೋರೋಲಾ ಕಂಪೆನಿಯ ಮೋಟೋರೋಲಾ ರೇಜರ್ 5ಜಿ (Motorola Razr 5G) ಫೋನ್ 89,999ರೂ.ಗೆ ಲಭ್ಯವಿದೆ. ಇದರ ಮೂಲಬೆಲೆ 1,09,999ಆಗಿದ್ದು ರಿಯಾಯಿತಿಯಲ್ಲಿ 20ಸಾವಿರ ರೂ. ಉಳಿಯಲಿದೆ.
ಇದನ್ನೂ ಓದಿ:
Honda Activa: ಬರೀ 25 ಸಾವಿರ ರೂಪಾಯಿಗೆ ಹೊಂಡಾ ಆ್ಯಕ್ಟೀವಾ ಖರೀದಿಸಿ; ಬಂಪರ್ ಆಫರ್ ಪಡೆಯಲು ಹೀಗೆ ಮಾಡಿ
Hyundai cars: ಹುಂಡೈ ಕಾರುಗಳ ಖರೀದಿ ಮೇಲೆ ಜೂನ್ ತಿಂಗಳ ಆಫರ್ ನಗದು ರಿಯಾಯಿತಿ ವಿನಿಮಯ ಬೋನಸ್ ಎಷ್ಟೆಲ್ಲ ಇವೆ!