ಫ್ಲಿಪ್​ಕಾರ್ಟ್ ದಸರಾ ಸೇಲ್ ಕೊನೇ ದಿನ: ಈ ಸ್ಮಾರ್ಟ್​ಫೋನ್​ಗಳು ಇದಕ್ಕಿಂತ ಕಡಿಮೆ ಬೆಲೆಗೆ ಸಿಗಲ್ಲ

|

Updated on: Oct 29, 2023 | 2:15 PM

Flipkart Dussehra Sale 2023: ಫ್ಲಿಪ್‌ಕಾರ್ಟ್ ದಸರಾ ಸೇಲ್ 2023 ರ ಕೊನೆಯ ದಿನ. ಇಂದು ಪ್ರಮುಖ ಬ್ರಾಂಡ್‌ಗಳಾದ ಸ್ಯಾಮ್​ಸಂಗ್, ರಿಯಲ್ ಮಿ, ಮೋಟೋರೊಲ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. 20,000 ರೂ. ಒಳಗೆ ಖರೀದಿಸಬಹುದಾದ ಕೆಲವು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿದೆ ನೋಡಿ.

ಫ್ಲಿಪ್​ಕಾರ್ಟ್ ದಸರಾ ಸೇಲ್ ಕೊನೇ ದಿನ: ಈ ಸ್ಮಾರ್ಟ್​ಫೋನ್​ಗಳು ಇದಕ್ಕಿಂತ ಕಡಿಮೆ ಬೆಲೆಗೆ ಸಿಗಲ್ಲ
flipkart big dussehra sal
Follow us on

ಭಾರತದ ಅತಿದೊಡ್ಡ ಇ-ಕಾಮರ್ಸ್ ಸೈಟ್‌ಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್ ಪ್ರಸ್ತುತ ಹಬ್ಬದ ಕಾರಣ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಅಕ್ಟೋಬರ್ 22 ರಂದು ಪ್ರಾರಂಭವಾಗಿದ್ದ ಫ್ಲಿಪ್‌ಕಾರ್ಟ್ ದಸರಾ ಸೇಲ್ 2023 (Flipkart Dussehra Sale 2023) ಅಕ್ಟೋಬರ್ 29 ಇಂದು ಕೊನೆಗೊಳ್ಳಲಿದೆ. ಈ ಮಾರಾಟದ ಸಮಯದಲ್ಲಿ, ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಪಿಸಿಗಳು, ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್ ಟಿವಿಗಳಂತಹ ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಅನೇಕ ಉತ್ಪನ್ನಗಳ ಮೇಲೆ ಬಂಪರ್ ಕೊಡುಗೆಗಳನ್ನು ಘೋಷಿಸಿದೆ. ಪ್ರಮುಖ ಬ್ರಾಂಡ್‌ಗಳಾದ ಸ್ಯಾಮ್​ಸಂಗ್, ರಿಯಲ್ ಮಿ, ಮೋಟೋರೊಲ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ಫ್ಲಿಪ್‌ಕಾರ್ಟ್ ದಸರಾ ಸೇಲ್ 2023 ರ ಕೊನೆಯ ದಿನ 20,000 ರೂ. ಒಳಗೆ ಖರೀದಿಸಬಹುದಾದ ಕೆಲವು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿದೆ ನೋಡಿ:

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದ ಮೋಟೋ G84 5G, 6.55-ಇಂಚಿನ ಪೂರ್ಣ-HD+ (2400 x 1080 ಪಿಕ್ಸೆಲ್‌ಗಳು) 120Hz ಪೋಲ್ಇಡಿ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 SoC ನಿಂದ ಚಾಲಿತವಾಗಿದೆ ಮತ್ತು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಫೋನ್‌ನ 12GB + 256GB ರೂಪಾಂತರವು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ರೂ. 18,999ಕ್ಕೆ ಸೇಲ್ ಆಗುತ್ತಿದೆ. ಇದರ ಮೂಲಬೆಲೆ 22,999 ರೂ.

ಪೋಕೋ X5 ಪ್ರೊ 5G ಫೋನ್ 6.67-ಇಂಚಿನ Xfinity AMOLED 120Hz ಡಿಸ್ಪ್ಲೇ, ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 778G SoC ಮತ್ತು 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇ ಫೋನ್ 108-ಮೆಗಾಪಿಕ್ಸೆಲ್ ISOCELL HM2 ಪ್ರಾಥಮಿಕ ಸಂವೇದಕ, ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಸಂವೇದಕ ಮತ್ತು ಹಿಂಭಾಗದಲ್ಲಿ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಹಾಗೂ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಇದರ 6GB + 128GB ರೂಪಾಂತರವು ಫ್ಲಿಪ್‌ಕಾರ್ಟ್‌ನಲ್ಲಿ 18,499 ರೂ. ಗೆ ಮಾರಾಟ ಕಾಣುತ್ತಿದೆ.

ಇದನ್ನೂ ಓದಿ
ಬಹುನಿರೀಕ್ಷಿತ ಲಾವಾ ಬ್ಲೇಜಾ 2 5G ಬಿಡುಗಡೆ ದಿನಾಂಕ ಘೋಷಣೆ: ಏನಿದೆ ಫೀಚರ್ಸ್
15,000 ರೂ. ಒಳಗೆ ಸಿಗುವ ಬೆಸ್ಟ್ 5G ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
50MP ಕ್ಯಾಮೆರಾ: ಭಾರತದಲ್ಲಿ ಒಪ್ಪೋ A79 5G ​ಫೋನ್ ಬಿಡುಗಡೆ: ಬೆಲೆ ಕೇವಲ ..
ಮಲಗುವಾಗ ಸ್ಮಾರ್ಟ್​ಫೋನ್ ಅನ್ನು ತಪ್ಪಿಯೂ ಈ ಸ್ಥಳದಲ್ಲಿ ಇಡಬೇಡಿ

ಮೈಸೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ರೋಬಾಟ್ ನರ್ಸ್: ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ

ವಿವೋ T2 5G ಈ ವರ್ಷದ ಏಪ್ರಿಲ್‌ನಲ್ಲಿ 6nm ಕ್ವಾಲ್ಕಮ್ ಸ್ನಾಪ್​ಡ್ರಾಗನ್ 695 SoC ಮತ್ತು 44W ಫಾಸ್ಟ್ ಚಾರ್ಜಿಂಗ್, 4,500mAh ಬ್ಯಾಟರಿಯೊಂದಿಗೆ ದೇಶದಲ್ಲಿ ಬಿಡುಗಡೆಯಾಗಿತ್ತು. ಈ ಹ್ಯಾಂಡ್‌ಸೆಟ್ 6.38-ಇಂಚಿನ AMOLED (1,080 x 2,400 ಪಿಕ್ಸೆಲ್‌ಗಳು) 90Hz ಡಿಸ್‌ಪ್ಲೇ ಮತ್ತು 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು 2-ಮೆಗಾಪಿಕ್ಸೆಲ್ ಬೊಕೆ ಲೆನ್ಸ್ ಮತ್ತು 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಫೋನ್‌ನ 6GB + 128GB ಆಯ್ಕೆಯನ್ನು ಮಾರಾಟದ ಸಮಯದಲ್ಲಿ ರೂ. 17,999ರೂ. ಗೆ ಖರೀದಿಸಬಹುದು.

ಆಗಸ್ಟ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದ ರಿಯಲ್ ಮಿ 11 5G ಫೋಣ್ 6.72-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) ಸ್ಯಾಮ್​ಸಂಗ್ AMOLED 120Hz ಡಿಸ್‌ಪ್ಲೇ ಮತ್ತು 108-ಮೆಗಾಪಿಕ್ಸೆಲ್ ಸ್ಯಾಮ್​ಸಂಗ್ ISOCELL HM6 ಪ್ರಾಥಮಿಕ ಹಿಂಬದಿ ಸಂವೇದಕದೊಂದಿಗೆ ಬರುತ್ತದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 6100+ SoC ನಿಂದ ಚಾಲಿತವಾಗಿದೆ ಮತ್ತು 67W ವೈರ್ಡ್ SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಈ ಫೋನ್‌ನ 8GB + 128GB ರೂಪಾಂತರವನ್ನು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 16,999 ರೂ. ಗೆ ನಿಮ್ಮದಾಗಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ F34 5G ಆಗಸ್ಟ್‌ನಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಾಯಿತು. ಈ ಹ್ಯಾಂಡ್‌ಸೆಟ್ ಆಕ್ಟಾ-ಕೋರ್ ಎಕ್ಸಿನೊಸ್ 1280 SoC ಮತ್ತು ದೊಡ್ಡ 6,000mAh ಬ್ಯಾಟರಿಯನ್ನು ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ 6.46-ಇಂಚಿನ ಪೂರ್ಣ-HD+ (2340 x 1080 ಪಿಕ್ಸೆಲ್‌ಗಳು) sAMOLED 120Hz ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆನ್ಸಾರ್ ಮತ್ತು 13-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸೆನ್ಸಾರ್ ಅನ್ನು ಹೊಂದಿದೆ. ಇದರ 6GB + 128GB ಇದೀಗ 16,499 ರೂ. ಗೆ ಸೇಲ್ ಆಗುತ್ತಿದೆ.

ರಿಯಲ್ ಮಿ 11x 5G ಫೋನಿನ 6GB + 128GB ರೂಪಾಂತರವು ಈಗ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 13,999 ರೂ. ಗೆ ಲಭ್ಯವಿದೆ. ಇದು 6.72-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) AMOLED 120Hz ಡಿಸ್ಪ್ಲೇ, 64-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಫೋನ್ 6nm ಮೀಡಿಯಾಟೆಕ್ ಡೈಮೆನ್ಸಿಟಿ 6100+ SoC ನಿಂದ ಚಾಲಿತವಾಗಿದೆ. 33W ವೈರ್ಡ್ SUPERVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ